ವಯೋನಿವೃತ್ತಿ ಹೊಂದಿದ ಮುಖ್ಯಗುರುಗಳಿಗೆ ಆತ್ಮೀಯ ಬೀಳ್ಕೊಡುಗೆ”   


ಸಿರಿಗೇರಿ ಆ3. ಶಿಕ್ಷಣ ಇಲಾಖೆಯಲ್ಲಿ ಸಹ ಶಿಕ್ಷಕರಾಗಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಸಿ ಜುಲೈ 30 ರಂದು ನಿವೃತ್ತರಾದ ಸಿರಿಗೇರಿ ಗ್ರಾಮದ ಶಿಕ್ಷಕರಾದ ಕೆ.ಎಂ.ಮಲ್ಲಿಕಾರ್ಜುನಸ್ವಾಮಿ ಇವರಿಗೆ ಶಿಕ್ಷಣ ಇಲಾಖೆಯಿಂದ ಗೌರವಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಶಿಕ್ಷಕರ ಸಂಘದ ಖಜಾಂಚಿ ಮತ್ತು ಮಾದರಿ ಶಾಲೆಯ ಮುಖ್ಯಗುರು ಸತೀಶ್‍ಕುಮಾರ, ಸರ್ಕಾರಿ ನೌಕರ ಸಂಘದ ಕಾರ್ಯದರ್ಶಿ ಹನುಮಂತಪ್ಪ, ಇಸಿಓ ಹಳೆಮನೆ ಪಂಪಾಪತಿ, ಬಿಆರ್‍ಪಿ ಎಸ್.ಯೋಗಾನಂದಯ್ಯ, ಶಿಕ್ಷಣ ಇಲಾಖೆಯಿಂದ ಪ್ರಸಂಶನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು. ನಿವೃತ್ತ ಶಿಕ್ಷಕರ ಕುಟುಂಬ ವರ್ಗದವರು, ಎಸ್‍ಡಿಎಂಸಿ ಅಧ್ಯಕ್ಷ ಎಂ.ಶೆಕ್ಷಾವಲಿ, ಶಿಕ್ಷಕರ ಸಂಘದ ಸಂ.ಕಾರ್ಯದರ್ಶಿ ರಾಧ, ಸಿಆರ್‍ಪಿಗಳಾದ ಅರುಣಕುಮಾರ್, ಮೊಹ್ಮದ್‍ಫಯಾಜ್, ಹಿರಿಯ ಶಿಕ್ಷಕರಾದ ರಫಿಕ್, ವೆಂಕಟೇಶ್, ನಜೀರ್, ಎಸ್.ನಾರಾಯಣಪ್ಪ, ಚೋಳರಾಯ, ಚಂದ್ರಶೇಖರಸ್ವಾಮಿ, ನಿವೃತ್ತ ಶಿಕ್ಷಕ ಜಿ.ಎಂ.ಮರಿಸ್ವಾಮಿ, ಪಾಲ್ಗೊಂಡಿದ್ದರು. ಸಹ ಶಿಕ್ಷಕಿ ಸುಮಂಗಲಮೇಠಿ ಕಾರ್ಯಕ್ರಮ ನಿರ್ವಹಿಸಿದರು.

Attachments area