ವಯೋನಿವೃತ್ತಿ ಹೊಂದಿದ ಕಂದಾಯ ನಿರೀಕ್ಷಕ ಅನಂತಕುಮಾರ ಶೆಟ್ಟಿಗೆ ಸನ್ಮಾನ


ಸಿರುಗುಪ್ಪ ಜೂ 01 : ನಗರದ ತಹಶೀಲ್ದಾರ್ ಕಛೇರಿಯಲ್ಲಿ ತೆಕ್ಕಲಕೋಟೆ ಹೊಬಳಿಯ ಕಂದಾಯ ನಿರೀಕ್ಷಕರಾಗಿ ಸೇವೆಯಿಂದ ವಯೋನಿವೃತ್ತಿ ಹೊಂದಿದ ಅನಂತಕುಮಾರ ಶೆಟ್ಟಿ ಅವರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಿ ಗೌರವಿಸಿದರು.
ತಹಶೀಲ್ದಾರ್ ಸತೀಶ್ ಬಿ.ಕೂಡಲಗಿ ಮಾತನಾಡಿ ಕಂದಾಯ ವಿಭಾಗದಲ್ಲಿ ಕೆಲಸ ಮಾಡುವಾಗ ಸಾರ್ವಜನಿಕರ ಮಧ್ಯದಲ್ಲಿ ಸಹಜವಾಗಿ ಕಾರ್ಯನಿರ್ವಹಿಸಿದಾಗ ಕೆಲಸ ಸುಲಭವಾಗುತ್ತದೆ, ಅಧಿಕಾರಿಗಳು ನಾಗರಿಕರೊಂದಿಗೆ ಅನ್ಯೋನ್ಯದಿಂದ ಸೇವೆ ನಿರ್ವಹಿಸಿದಾಗ ಅಂತಹ ಕೆಲಸ ಮಾದರಿಯಾಗುತ್ತದೆ, ಯುವಕರಿಗೆ ಮಾದರಿಯಾಗಿ ಮಾರ್ಗದರ್ಶಕರಾಗಿ ಸೇವೆಗೈದು ನಿವೃತ್ತಿ ಹೊಂದಿ ಯುವಕರಿಗೆ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಕೆಲಸ ಕಾರ್ಯಗಳ ಒತ್ತಡವಿದ್ದರೂ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿ ಇಂದಿನ ಯುವ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಇಂತವರ ಮಾರ್ಗದರ್ಶನದಲ್ಲಿ ಯುವಕರು ನಡೆದು ನಾಗರಿಕರು, ಹಿರಿಯ ಅಧಿಕಾರಿಗಳು ಮೆಚ್ಚುವಂತ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ತಿಳಿಸಿದರು.
ಇದೆ ಸಂದರ್ಭ ಸಹಾಯಕ ಕೃಷಿ ನಿದೇರ್ಶಕ ನಜೀರ್ ಅಹಮ್ಮದ್, ಪೌರಾಯುಕ್ತ ಪ್ರೇಮ್ ಚಾಲ್ರ್ಸ್, ತೆಕ್ಕಲಕೋಟೆ ಪ.ಪಂ. ಮುಖ್ಯಾಧಿಕಾರಿ ಈರಣ್ಣ, ಆಹಾರ ಇಲಾಖೆಯ ನಿರೀಕ್ಷಕ ಮಹೇಶ ಸೇರಿದಂತೆ, ಉಪತಹಶೀಲ್ದಾರರು, ಶಿರಸ್ಥೆದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೇಕ್ಕಾಧಿಕಾರಿಗಳು, ತಾಲೂಕು ಆಡಳಿತ ಸಿಬ್ಬಂದಿ ವರ್ಗದವರು ಇದ್ದರು.