ವಯೋನಿವೃತ್ತಿ ಹೊಂದಲಿರುವ ಅಧಿಕಾರಿಗಳಿಗೆ ಸ್ನೇಹ ಕೂಟ ಕಾರ್ಯಕ್ರಮ

ಬಂಟ್ವಾಳ: ಎ.೩೦ ರಂದು ವಯೋನಿವೃತ್ತಿ ಹೊಂದಲಿರುವ ವಿಟ್ಲ ಸಿ.ಡಿ.ಪಿ.ಒ.ಸುಧಾಜೋಶಿ ಅವರಿಗೆ ಬಂಟ್ವಾಳ ಸಿ.ಡಿ.ಪಿ.ಒ.ಕಚೇರಿಯ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಬಂಟ್ವಾಳ ತಾಲೂಕಿನ ಸ್ತ್ರೀಶಕ್ತಿ ಒಕ್ಕೂಟದ ವತಿಯಿಂದ ಸ್ನೇಹ ಕೂಟ ಕಾರ್ಯಕ್ರಮ ಬಂಟ್ವಾಳ ಸಿ.ಡಿ.ಪಿ.ಒ. ಗಾಯತ್ರಿ ಕಂಬಳಿ ಅವರ ನೇತ್ರತ್ವದಲ್ಲಿ ಬಿಸಿರೋಡಿನ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆತ ಮಲ್ಲಿಕಾ ವಿ.ಶೆಟ್ಟಿ ಮಾತನಾಡಿ ಸರಕಾರಿ ಕೆಲಸದಲ್ಲಿ ನಿವೃತ್ತಿ ಜೀವನ ಅನಿವಾರ್ಯ, ಆದರೆ ನಿವೃತ್ತಿಯ ಬಳಿಕವೂ ನಿಮ್ಮ ಸೇವೆಯನ್ನು ಗುರುತಿಸುವಿಕೆ ನಿಮ್ಮ ಸೇವಾ ಕೈಕಂರ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ಹೇಳಿದರು.
ಒತ್ತಡದ ಮಧ್ಯೆಯೂ ಸರಕಾರಿ ಸೇವೆಯಲ್ಲಿ ಚ್ಯುತಿ ಬರದ ರೀತಿಯಲ್ಲಿ ಕೆಲಸ ಮಾಡಿರುವುದು ಇತರರಿಗೆ ಮಾದರಿಯಾಗಿದೆ. ನನ್ನ ವೈಯಕ್ತಿಕ ಜೀವನದಲ್ಲಿ ಸಹಾಯ ಮಾಡಿದ ಸುಧಾಜೋಶಿ ಮತ್ತು ಗಾಯತ್ರಿಕಂಬಳಿ ಇವರೀರ್ವರು ಆದರ್ಶ ಮಹಿಳೆಯರು ಎಂದು ಅವರು ಹೇಳಿದರು.
ಸದೃಢ ಜೀವನಕ್ಕೆ ನನಗೆ ಇಲಾಖೆ ನೀಡಿದ ಪ್ರೋತ್ಸಾಹ ಕೊನೆಯ ವರೆಗೂ ಮರೆಯುದಿಲ್ಲ ಎಂದು ಅವರು ಇಲಾಖೆಯ ಬಗ್ಗೆ ಉತ್ತಮ ಮಾತುಗಳನ್ನಾಡಿದರು. ಬಂಟ್ವಾಳ ಸಿ.ಡಿ.ಪಿ.ಒ ಗಾಯತ್ರಿ ಕಂಬಳಿ ಮಾತನಾಡಿ ಕಷ್ಟ ಸುಖ ಎರಡರಲ್ಲೂ ಸ್ಪಂದಿಸುವ ಹೃದಯವಂತಿಕೆ ಇರುವ ಅಧಿಕಾರಿ ಸುಧಾಜೋಶಿ ಅವರು ಎಂದು ಅವರು ಹೇಳಿದರು.
ಸುಸಂಸ್ಕೃತೆಯಾಗಿದ್ದು ವಿಶಾಲಮನೋಭಾವದ ಅಧಿಕಾರಿಯಾಗಿರುವ ಇವರಿಂದ ಅನೇಕ ಕೊಡುಗೆಗಳು ಸಮಾಜಕ್ಕೆ ,ಇಲಾಖೆಗೆ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ ಎಂದು ಅವರು ಹೇಳಿದರು. ನಿವೃತ್ತಿಯ ಬಳಿಕವೂ ಜನರ ಪ್ರೀತಿ ವಿಶ್ವಾಸ ಸಿಕ್ಕಿದರೆ ಅದಕ್ಕಿಂತ ಗೌರವ ಬೇರೆ ಇಲ್ಲ, ಅಂತಹ ಗೌರವಕ್ಕೆ ಸುಧಾಜೋಶಿ ಅವರು ಪಾತ್ರರಾಗಿದ್ದಾರೆ ಎಂದರು.
ಸ್ನೇಹ ಕೂಟ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದ ವಿಟ್ಲ ಸಿ.ಡಿ.ಪಿ.ಒ ಸುಧಾಜೋಶಿ ಮಾತನಾಡಿ ಇಲಾಖೆಯಲ್ಲಿ ನೀಡಿದ ಗೌರವಕ್ಕೆ ಚಿರ ಋಣಿಯಾಗಿದ್ದಾನೆ. ನಿಮ್ಮ ಪ್ರೀತಿಯ ಗೌರವ ನನ್ನ ನಿವೃತ್ತಿ ಜೀವನಕ್ಕೆ ಸ್ಪೂರ್ತಿಯ ನೆಲೆಯಾಗಿದೆ ಎಂದು ಅವರು ಹೇಳಿದರು. ವೃತ್ತಿ ಜೀವನ ಹಾಗೂ ಕುಟುಂಬದ ಜೊತೆ ಜೊತೆಯಾಗಿ ಕೆಲಸ ನಿರ್ವಹಣೆ ಮಾಡುವ ಹವ್ಯಾಸ ಸರಕಾರಿ ಸೇವೆಯಲ್ಲಿ ರೂಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಕಾಣಬಹುದು ಎಂಬುದನ್ನು ನಾನು ಅನುಭವದ ಮೂಲಕ ಕಂಡವಳು ಎಂದು ಅವರು ಹೇಳಿದರು.
ನಿಷ್ಠೆ ,ಪ್ರೀತಿಯಿಂದ ಕೆಲಸ ಮಾಡಿದಾಗ ವೃತ್ತಿಯಲ್ಲಿ ಸಫಲತೆ ಕಾಣಬಹುದು. ಸರಕಾರಿ ಯೋಜನೆ ಗಳನ್ನು ಸಮಯಕ್ಕೆ ಸರಿಯಾಗಿ ಫಲಾನುಭವಿಗಳಿಗೆ ಸಿಗುವಂತೆ ಕೆಲಸ ಮಾಡಿ ಎಂದು ಅವರು ಕಿವಿ ಮಾತು ಹೇಳಿ ದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾವತಿ, ಮುಖ್ಯ ಅತಿಥಿಯಾಗಿ ಮಾತನಾಡಿದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಸುಧಾಜೋಶಿ ಉಪಸ್ಥಿತರಿದ್ದರು.
ಕಾರ್ಯಕ್ರಮ ದಲ್ಲಿ ಇಲಾಖೆಯ ಮೇಲ್ವಿಚಾರಕಿಯರು ಹಾಗೂ ಸಿಬ್ಬಂದಿ ಗಳು ಉಪಸ್ಥಿತರಿದ್ದರು.
ಬಂಟ್ವಾಳ ಸಿ.ಡಿ.ಪಿ.ಒ ಗಾಯತ್ರಿ ಕಂಬಳಿ ಸ್ವಾಗತಿಸಿದರು. ಬಂಟ್ವಾಳ ತಾಲೂಕು ಸ್ತ್ರೀ ಒಕ್ಕೂಟದ ಕಾರ್ಯದರ್ಶಿ ಗೀತಾಜಯತೀರ್ಥ ವಂದಿಸಿದರು ಹಿರಿಯ ಮೇಲ್ವಿಚಾರಕಿ ಬಿ. ಭಾರತಿ ಕಾರ್ಯಕ್ರಮ ನಿರೂಪಿಸಿದರು.