ವಯಸ್ಕರ ಶಿಕ್ಷದಲ್ಲಿನ ಭ್ರಷ್ಟಾಚಾರ ಕ್ರಮಕ್ಕೆ ದಲಿತ ರಕ್ಷಣಾ ಆಗ್ರಹ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.31:  2019 20ನೇ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕುಮ್ಮಕ್ಕಿನಿಂದ ಹೊಸಪೇಟೆ  ತಾಲೂಕು ಪಂಚಾಯತಿ ಇಒ ಹಾಗೂ ಲೋಕ ಶಿಕ್ಷಣ ಹೊಸಪೇಟೆ ಸಂಯೋಜಕ ಸೇರಿಕೊಂಡು ಅನಕ್ಷಸ್ಥರಿಗೆ ಅಕ್ಷರ ಕಲಿಸಿದಂತಹ ಬೋಧಕರಿಗೆ  ಲಕ್ಷಾಂತರ ರೂ ಹಣವನ್ನು ನೀಡದೆ ಅವರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ರಾಜ ರೋಷವಾಗಿ ಹಣವನ್ನು  ಲಪಟಾಯಿಸಿ ಅವ್ಯವಹಾರ  ಎಸೆಗಿದ್ದು ತಪ್ಪಿಸ್ತಸ್ಥ ಅಧಿಕಾರಿಗಳನ್ನು ಅಮಾನತ್ತು ಗೊಳಿಸಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ವಿಜಯನಗರ ಜಿಲ್ಲಾ ಅಧಿಕಾರಿಗಳಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮನವಿ ಮಾಡಿದೆ.
ಹೊಸಪೇಟೆ ತಾಲೂಕಿನ ಢಣಾಪುರ್ ಗ್ರಾಮ ಪಂಚಾಯಿತಿ ಹಾಗೂ ಹೊಸಪೇಟೆ ನಗರದ ಕೊಳಚೆ ಪ್ರದೇಶದ ವಯಸ್ಕರ ಶಿಕ್ಷಣ ಇಲಾಖೆಯಿಂದ,  ಗ್ರಾಮ ಪಂಚಾಯಿತಿ ಹಾಗೂ ನಗರ ಕೊಳಚೆ ಪ್ರದೇಶದ ಅನಕ್ಷರಸ್ಥರಿಗೆ  ಅಕ್ಷರ ಕಲಿಸಲಿಕ್ಕಾಗಿ ಕೇಂದ್ರಗಳನ್ನು ಪ್ರಾರಂಭಿಸಿ ಒಂದೊಂದು ಕೇಂದ್ರಕ್ಕೆ 25 ರಿಂದ 30 ಜನರನ್ನು ಸೇರಿಸಿ ಅವರಿಗೆ  ಭೋದಕರನ್ನು ನೇಮಕ ಮಾಡಲಾಗಿತ್ತು.
ಡಿ ಎಂ ನಂಜುಂಡಪ್ಪ ವರದಿಯನ್ವಯ ಮೂಲ ಸಾಕ್ಷರತಾ ಕಾರ್ಯಕ್ರಮದ ಸಾಕ್ಷರತಾ ಬೋಧಕರು ಅನಕ್ಷರಸ್ತ ಕಲಿಕಾರ್ಥಿಗಳಿಗೆ ಅಕ್ಷರ ಕಲಿಸಿದ ನಂತರ ಪರೀಕ್ಷೆಯಲ್ಲಿ ಪರೀಕ್ಷೆಗಳನ್ನು ಬರೆಸಿ ಉತ್ತೀರಣರಾದ ನಂತರ ನವ ಸಾಕ್ಷರತರಿಗೆ ಕಲಿಸಿದ ಬೋಧಕರಿಗೆ ಪ್ರತಿ ಕಲಿಕಾರ್ಥಿಗಳಿಗೆ ರೂ. 100 ರೂಪಾಯಿ ಪ್ರೋತ್ಸಾಹ ಧನ ಸರ್ಕಾರದಿಂದ ಮಂಜೂರಾಗಿ ಬಂದಂತಹ ಹಣವನ್ನು ಡಣಾಪುರ್ ಗ್ರಾಮ ಪಂಚಾಯಿತಿ ಹಾಗೂ ಹೊಸಪೇಟೆ ನಗರ ಕೊಳಚೆ ಪ್ರದೇಶದ ಸುಮಾರು ಕಲಿಕ ಕೇಂದ್ರಗಳ ಬೋಧಕರಿಗೆ ಹಾಗೂ ಅನಕ್ಷಸ್ಥರಿಗೆ ಪ್ರತಿಯೊಬ್ಬರಿಗು ರೂ.20ಗಳಂತೆ ಕಲಿಕಾರ್ಥಿಗಳ ಹಣವು ಮಂಜೂರಾಗಿ ಬಂದಿದ್ದು ಈ ಹಣವನ್ನು ಮೇಲೆ ತೋರಿಸಿದ ಎಲ್ಲಾ ಅಧಿಕಾರಿಗಳು ಸೇರಿಕೊಂಡು ವ್ಯವಸ್ಥಿತವಾಗಿ ಅಕ್ಷರಗಳನ್ನು ಕಲಿಸಲಾರದಂತ ಬೋಧಕರಿಗೆ ಮತ್ತು ಕಲೀಲಾರದ ಕಲಿಕಾರ್ಥಿಗಳಿಗೆ ಹಣವನ್ನು ಮಂಜೂರು ಮಾಡಿದ್ದು ಆದರೆ ನಿಜವಾಗಿ ಕಲಿಸಿದಂತ ಬೋಧಕರಿಗೆ ಹಾಗೂ ಅನಾಕ್ಷಸ್ಥರಿಗೆ  ಹಣವನ್ನು ನೀಡದ ವಂಚನೆ ಮಾಡಿದೆ.
ಆದುದರಿಂದ ಕೂಡಲೇ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹಾಗೂ ಹೊಸಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕ ಶಿಕ್ಷಣ ಹೊಸಪೇಟೆ ಸಂಯೋಜಕ ಇವರನ್ನು ಕೂಡಲೇ ಅಮಾನತುಗೊಳಿಸಿ ಪ್ರಕರಣ ದಾಖಲೆ ಮಾಡಿ ಹಾಗೂ ಕಲಿಸಿದಂತ ಬೋಧಕರಿಗೆ ಹಾಗೂ ಅನಕ್ಷರ ಕಲಿಕಾರ್ಥಿಗಳಿಗೆ ಈ ಹಿಂದೆ ಬರುವಂತ ಎಲ್ಲಾ ಹಣವನ್ನು ಇವರಿಗೆ ಕೂಡಲೇ ಒದಗಿಸಿಕೊಟ್ಟು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದೆ.
ಕೆ ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ,  ಸಿ ರಮೇಶ್ ತಾಲೂಕ ಅಧ್ಯಕ್ಷರು ಇದ್ದರು.