ವಯನಾಡು ಉಪಸಮರಕ್ಕೆ ಸಿದ್ಧತೆ

ನವದೆಹಲಿ,ಮಾ.೨೫- ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವ ಕುರಿತು ಲೋಕಸಭಾ ಸಚಿವಾಲಯ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಚೆಂಡು ಈಗ ಚುನಾವಣಾ ಆಯೋಗದ ಅಂಗಳದಲ್ಲಿದೆ.
ಮುಂದಿನ ಆರು ತಿಂಗಳೊಳಗೆ ಯಾವ ಸಮಯದಲ್ಲಾದರೂ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಬಹುದಾಗಿದೆ.
ಮೂಲಗಳ ಪ್ರಕಾರ ಸೆಪ್ಟಂಬರ್ ೨೨ ಕ್ಕೆ ವಯನಾಡು ಲೋಕಸಭೆಗೆ ಉಪ ಚುನಾವಣೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಜನ ಪ್ರತಿನಿಧಿ ಕಾಯಿದೆ, ೧೯೫೧ರ ೧೫೧ಎ ಅಡಿ ಲೋಸಕಭಾ ಸ್ಥಾನ ತೆರವಾದ ದಿನದಿಂದ ೬ ತಿಂಗಳ ಒಳಗೆ ಯಾವಾಗಬೇಕಾದರೂ ಉಪ ಚುನಾವಣೆ ನಡೆಸಬಹುದಾಗಿದೆ.ಸಂಸದ ಅಥವಾ ಶಾಸಕ ಸ್ಥಾನ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ವಿದ್ದಾಗ ಮಾತ್ರ ಉಪ ಚುನಾವಣೆ ನಡೆಸಲಾಗುತ್ತದೆ.
ವಯನಾಡ್ ಲೋಕಸಭಾ ಸ್ಥಾನ ಮಾರ್ಚ್ ೨೩ ರಂದು ತೆರವಾಗಿದೆ. ಮತ್ತು ಸೆಕ್ಷನ್ ೧೫೧ಎ ಪ್ರಕಾರ, ಸೆಪ್ಟೆಂಬರ್ ೨೨,ರೊಳಗೆ ಕ್ಷೇತ್ರದಿಂದ ಹೊಸ ಸಂಸದರನ್ನು ಆಯ್ಕೆ ಮಾಡಲು ಉಪಚುನಾವಣೆ ನಡೆಸಲು ಆಯೋಗ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
೧೭ನೇ ಲೋಕಸಭೆಯ ಅವಧಿಗೆ ಒಂದು ವರ್ಷಕ್ಕೂ ಮೊದಲು ಖಾಲಿಯಾದ ಕಾರಣ, ಚುನಾಯಿತ ಸಂಸದರು ಅಲ್ಪಾವಧಿ ಮಾತ್ರ ಹೊಂದಿರುತ್ತಾರೆಯಾದರೂ, ಉಪಚುನಾವಣೆ ಕೈಬಿಡಲಾಗುವುದಿಲ್ಲ.
ಚುನಾವಣಾ ಆಯೋಗ ವಯನಾಡ್ ಉಪಚುನಾವಣೆ ಘೋಷಿಸುವ ಯೋಜನೆಗಳನ್ನು ಬದಿಗಿಡಬೇಕಾಗಬಹುದು ಮತ್ತು ಅದನ್ನು ಘೋಷಿಸಬೇಕಿದ್ದರೂ ಸಹ, ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲು ನ್ಯಾಯಾಲಯ ಶಿಕ್ಷೆಗೆ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿ ಚುನಾವಣೆ ಕೈ ಬಿಡಬೇಕಾಗುತ್ತದೆ.
ಲಕ್ಷದ್ವೀಪ ಸಂಸತ್ ಸದಸ್ಯ ಮೊಹಮ್ಮದ್ ಫೈಜಲ್ ಅವರ ಅನರ್ಹತೆಯ ಇತ್ತೀಚಿನ ನಿದರ್ಶನದಲ್ಲಿ ಇದು ಕಂಡುಬಂದಿದೆ. ೨೦೨೩ ರ ಜನವರಿ ೧೧ಫೈಝಲ್ ಅವರನ್ನು ಕೊಲೆ ಯತ್ನ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲಾಯಿತು, ಆರ್‌ಪಿ ಕಾಯಿದೆಯ ಸೆಕ್ಷನ್ ೮(೩) ರ ಪ್ರಕಾರ ಲೋಕಸಭೆಯ ಸದಸ್ಯತ್ವದಿಂದ ತಕ್ಷಣವೇ ಮತ್ತು ಸ್ವಯಂಚಾಲಿತವಾಗಿ ಅನರ್ಹಗೊಳಿಸಲಾಯಿತು.
ಶಿಕ್ಷೆಯ ಎರಡು ದಿನಗಳ ನಂತರ, ಜನವರಿ ೧೧ ರಿಂದಲೇ ಜಾರಿಗೆ ಬರುವಂತೆ ಫೈಝಲ್‌ನ ಪ್ರತಿನಿಧಿಸುತ್ತಿದ್ದ ಕ್ಷೇತ್ರಕ್ಕೆ ತಕ್ಷಣವೇ ಉಪಚುನಾವಣೆಯ ಘೋಷಣೆ ಆಗಿತ್ತು.
ಆದಾಗ್ಯೂ, ಅವರ ಅಪರಾಧಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಚುನಾವಣಾ ಅಧಿಸೂಚನೆ ಅಮಾನತುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಕಾರಣವಾಯಿತು. ಕೇರಳ ಹೈಕೋರ್ಟ್, ಲೋಕಸಭೆಯ ಸ್ಥಾನ ಎತ್ತಿ ಹಿಡಿದರೂ, ಫೈಝಲ್ ಇನ್ನೂ ಸದನದ ಕಲಾಪಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ.