‘ವಮನ ಕರ್ಮ’ದಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ

ಬೀದರ್:ಮಾ.2: ‘ವಮನ ಕರ್ಮ’ವು ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಶ್ರೀ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆಯ ಡೀನ್ ಡಾ. ವಿಜಯಕುಮಾರ ಬಿರಾದಾರ ಹೇಳಿದರು.
ನಗರದ ಸಿದ್ಧಾರೂಢ ಆಸ್ಪತ್ರೆಯಲ್ಲಿ ಪಂಚ ಕರ್ಮ ವಿಭಾಗದಿಂದ ಆಯೋಜಿಸಿದ್ದ ವಾಸಂತಿಕ ವಮನ ಕರ್ಮ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಮನ ಕರ್ಮ ಪಂಚಕರ್ಮ ಚಿಕಿತ್ಸೆಗಳಲ್ಲಿ ಒಂದು. ವಸಂತ ಋತುವಿನಲ್ಲಿ ಉಲ್ಬಣಿಸುವ ಕಫದ ರೋಗಗಳನ್ನು ನಿವಾರಿಸುತ್ತದೆ ಎಂದು ತಿಳಿಸಿದರು.
ಅಸ್ತಮಾ, ಸೋರಿಯಾಸಿಸ್, ಎಸ್ಜಿಮಾ, ಬೊಜ್ಜು, ಆಮ್ಲೀಯತೆ, ಥೈರಾಯ್ಡ್ ಮೊದಲಾದವುಗಳಿಗೆ ಶ್ರೇಷ್ಠ ಚಿಕಿತ್ಸೆಯಾಗಿದೆ ಎಂದು ಹೇಳಿದರು.
ಉಪ ಪ್ರಾಚಾರ್ಯೆ ಡಾ. ಶ್ರೀದೇವಿ ಸ್ವಾಮಿ, ಡಾ. ಅಶ್ವಿನಿಕುಮಾರ, ಡಾ. ಅನಿಲಕುಮಾರ ಬಚ್ಚಾ, ಡಾ. ಬಂಡೆಪ್ಪ, ಡಾ. ಸಂಜೀವಕುಮಾರ, ಡಾ. ರವಿಚಂದ್ರ, ಡಾ. ಅನೂಪ್, ಡಾ. ಪ್ರೀತಿ, ಡಾ. ಮಹಾದೇವ, ಡಾ. ಶುಬಧಾ ಇದ್ದರು.
ಡಾ. ಮಲ್ಲಿಕಾರ್ಜುನ ನಿರೂಪಿಸಿದರು. ಡಾ. ಯೋಗೇಶ್ವರಿ ಬಿರಾದಾರ ವಂದಿಸಿದರು.