ಬೀದರ್:ಜು.2: ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ವನ ಮಹೋತ್ಸವ ಅಂಗವಾಗಿ ನಗರದ ಶಿವನಗರದ ಪಕ್ಷದ ಕಚೇರಿ ಸಮೀಪದ ಭಾಗ್ಯವಂತಿ ದೇವಿ ಮಂದಿರ ಆವರಣದಲ್ಲಿ ಸಸಿ ನೆಡಲಾಯಿತು.
ಕಾರ್ಯಕರ್ತರು ‘ಕಾಡು ಬೆಳೆಸಿ ನಾಡು ಉಳಿಸಿ’, ‘ಹಸಿರೇ ಉಸಿರು’ ಎಂಬಿತ್ಯಾದಿ ಘೋಷಣೆಗಳನ್ನು ಹಾಕಿದರು.
ಪರಿಸರ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು. ತಲಾ ಒಂದು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೀತಾ ಚಿದ್ರಿ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್ ಚಿದ್ರಿ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಪ್ರಚಾರ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ನಗರಸಭೆ ಸದಸ್ಯರಾದ ಪ್ರಶಾಂತ ದೊಡ್ಡಿ, ಮೋಹನ್ ಕಾಳೇಕರ್, ನಯೀಮ್ ಕಿರ್ಮಾನಿ, ಮುಖಂಡರಾದ ಗೋವರ್ಧನ್ ರಾಠೋಡ್, ಮೊಹಮ್ಮದ್ ನಿಸಾರ್ ಅಹಮ್ಮದ್, ನಾಗನಾಥ ಪಾಟೀಲ, ಇರ್ಷಾದ್ ಅಲಿ ಪೈಲ್ವಾನ್, ಬಸವರಾಜ ಭತಮುರ್ಗೆ, ಶಂಕರ ರೆಡ್ಡಿ ಚಿಟ್ಟಾ, ಪೂಜಾ ಜಾರ್ಜ್, ನಾಸೀರ್ ಖಾನ್, ವಿಶಾಲ್ ದೊಡ್ಡಿ, ಮಹಮ್ಮದ್ ಶಾಯರಿ ಮತ್ತಿತರರು ಇದ್ದರು.