ವನ ಮಹೋತ್ಸವಕ್ಕೆ ಶಾಸಕ ಎಸ್ಸೆಸ್ ಚಾಲನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨; ಅರಣ್ಯ ಇಲಾಖೆ ವತಿಯಿಂದ ಜುಲೈ ತಿಂಗಳಲ್ಲಿ ಹಮ್ಮಿಕೊಂಡಿರುವ ಬೃಹತ್ ಸಸಿ ನೆಡುವ ಕಾರ್ಯಕ್ರಮಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಚಾಲನೆ ನೀಡಿದರು.ಶಾಮನೂರು ರಸ್ತೆಯಲ್ಲಿ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿದ ಶಾಸಕರು, ವಿಶ್ವದಲ್ಲಿ ಆಮ್ಲಜನಕದ ಕೊರತೆ ಕಾಣುತ್ತಿದ್ದು, ಇದಕ್ಕೆ ಪರಿಹಾರವಾಗಿ ಹಸಿರೀಕರಣ ಆಗಬೇಕೆಂದು ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ ಎಂದು ತಿಳಿಸಿದರು.ಸರ್ಕಾರ ರೂಪಿಸುವ ಯೋಜನೆಗಳ ಜೊತೆಗೆ ಸಾರ್ವಜನಿಕರು ಸಹ ಸಸಿಗಳನ್ನು ನೆಡಬೇಕೆಂದು ಕರೆ ನೀಡಿ ಈ ಹಿಂದೆ ಸಾಲುಮರದ ತಿಮ್ಮಕ್ಕನವರ ಪರಿಸರ ಪ್ರೇಮವನ್ನು ಸರ್ಕಾರದ ಗಮನ ಸೆಳೆದಿದ್ದು ತಾವೇ ಎಂಬುದನ್ನು ಇತ್ತೀಚೆಗೆ ನಮ್ಮ ಮನೆಗೆ ಬಂದಿದ್ದ ತಿಮ್ಮಕ್ಕನವರೇ ನೆನಪಿಸಿಕೊಂಡರು ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಾಪೌರರಾದ ವಿನಾಯಕ ಪೈಲ್ವಾನ್, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಮಹಾನಗರ ಪಾಲಿಕೆ ಸದಸ್ಯರಾದ ಸಯೀದ್ ಚಾರ್ಲಿ ಫೈಲ್ವಾನ್, ಜಾಕೀರ್ ಅಲಿ, ಉದಯಕುಮಾರ್, ಮುಖಂಡರುಗಳಾದ ಎಸ್.ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ಇಮ್ತಿಯಾಜ್ ಬೇಗ್ ಮತ್ತಿತರರಿದ್ದರು.