ವನ್ಯಧಾಮದಲ್ಲಿ ಕಾಡಾನೆ ಸಾವು

ಹನೂರು: ಏ:07: ಕಾವೇರಿ ವನ್ಯಜೀವಿಧಾಮ ಕೌದಳ್ಳಿ ವಲಯದ ದಂಟಳ್ಳಿ ಶಾಖೆಯ ಕುಲುಮಾವಿನ ಕೆರೆ ಸಮೀಪ ಮಂಗಳವಾರ ಗಂಡಾನೆಯೊಂದು ಮೃತಪಟ್ಟಿದೆ.
ಮೃತ ಆನೆಯೂ 60 ವರ್ಷ ಇರಬಹುದು ಎಂದು ಅಂದಾಜಿಸಲಾಗಿದ್ದು, ಏ.1ರಂದು ನಿತ್ರಾಣಗೊಂಡು ಅಡ್ಡಾಡುತ್ತಿದ್ದ ಈ ಆನೆಯ ಮೇಲೆ ಅರಣ್ಯ ಇಲಾಖೆ ನಿಗಾ ವಹಿಸಿತ್ತು. ಸೋಮವಾರ ದಂಟಳ್ಳಿ ಗಸ್ತಿನ ತಾಳಟ್ಟಿ ಅರಣ್ಯ ಪ್ರದೇಶದಲ್ಲಿ ಆನೆಯ ಕಳೇಬರ ಪತ್ತೆಯಾಗಿದೆ.
ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದು, ವಯೋಸಹಜದಿಂದ ಆನೆಯೂ ಮೃತಪಟ್ಟಿರುವುದಾಗಿ ಪರೀಕ್ಷೆ ನಡೆಸಿದ ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ.