ವನಿತೆಯರ ಐಪಿಎಲ್ ನಡೆಸಲು ಬಿಸಿಸಿಐ ಚಿಂತನೆ

ನವದೆಹಲಿ, ಆ 2- ಪುರುಷರ ಐಪಿಎಲ್ ಟೂರ್ನಿಯನ್ನು ಯಶಸ್ವಿಅಯಾಗಿ ನಡೆಸಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ, ಇದೀಗ ವನಿತೆಯರ ಐಪಿಎಲ್ ಇಲ್ಲವೆ ಚಾಲೆಂಜರ್ಸ್ ಸರಣಿ ನಡೆಸಲು ಮುಂದಾಗಿದೆ . ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಸುಳಿವು ನೀಡಿದ್ದಾರೆ

ಬಹು ನಿರೀಕ್ಷಿತ ೧೩ ನೇ ಐಪಿಎಲ್ ಆವೃತ್ತಿಯನ್ನು
ಸೆಪ್ಟೆಂಬರ್ 19 ರಿಂದ ನವೆಂಬರ್ 8ರವರೆಗೆ ಯುಎಇಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಭಾರತದಲ್ಲಿ ಕೊರೊನ ವೈರಸ್‌ ಸೋಂಕು ಹೆಚ್ಚಳದ ಕಾರಣ ಟೂರ್ನಿಯನ್ನು ಯುಎಇಯಲ್ಲಿ ನಡೆಸಲಾಗುತ್ತಿದೆ. ಎಂದರು

ಇದೇ ವೇಳೆ ಮಹಿಳಾ ಐಪಿಎಲ್‌ ನಡೆಸುವ ಬಗ್ಗೆ ಯು

ಯೋಚಿಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಹಿಳಾ ಐಪಿಎಲ್‌ ಕುರಿತ ಯೋಜನೆ ರೂಪಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ.ರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ತಂಡದ ಶಿಬಿರ ಆಯೋಜನೆಯ ಬಗ್ಗೆಯೂ ರೂಪುರೇಷೆ ಸಿದ್ಧಗೊಳ್ಳುತ್ತಿದೆ‘ ಎಂದು ಹೇಳಿದರು.

ಪುರುಷರ ಐಪಿಎಲ್ ಆಯೋಜನೆಯ ಭರದಲ್ಲಿ ಮಹಿಳಾ ಕ್ರಿಕೆಟ್‌ ಚಟುವಟಿಕೆಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿದ್ದವು .ಭಾರತ ಮಹಿಳಾ ತಂಡವು ಇಂಗ್ಲೆಂಡ್‌ಗೆ ತೆರಳುವುದು ರದ್ದಾಗಿದ್ದರಿಂದ ಆಸ್ಟ್ರೇಲಿಯಾ, ಇಂಗ್ಲೆಂಡ್‌ನ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿಯರೂ ಆಕ್ಷೇಪ ವ್ಯಕ್ತಪಡಿಸಿದರು.

ಆರೋಗ್ಯದ ಸುರಕ್ಷತೆ ನಮ್ಮ ಮೊದಲ ಆದ್ಯತೆ. ನಮ್ಮ ಯಾವುದೇ ಪುರುಷ ಅಥವಾ ಮಹಿಳಾ ಆಟಗಾರರು ಸಂಪೂರ್ಣ ಸುರಕ್ಷಿತವಾಗಿದ್ದಾರೆ. ಕೋವಿಡ್ –19 ಕಾರಣದಿಂದ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಕಾರ್ಯ ಚಟುವಟಿಕೆಗಳೂ ಸ್ಥಗಿತವಾಗಿವೆ. ಮಹಿಳಾ ತಂಡದ ತರಬೇತಿಗೆ ಸ್ಥಳ ನಿಗದಿ ಮಾಡಲು ಯತ್ನಿಸುತ್ತಿದ್ದೇವೆ ಎಂದು ಗಂಗೂಲಿ ಹೇಳೀದ್ದಾರೆ.

ಕೂಲಿಂಗ್ ಆಫ್‌ ನಿಯಮದಡಿಯಲ್ಲಿ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಬಿಸಿಸಿಐ ಅಧಿಕಾರದ ಅವಧಿಯು ಅಂತ್ಯವಾಗಿದೆ. ಆದರೆ, ನಿಯಮಗಳ ತಿದ್ದುಪಡಿ ಕೋರಿ ಕೋರ್ಟ್‌ನಲ್ಲಿ ಬಿಸಿಸಿಐ ಅರ್ಜಿ ಸಲ್ಲಿಸಿದೆ. ನ್ಯಾಯಾಲಯದ ತೀರ್ಪು ಬರುವವರೆಗೂ ಇಬ್ಬರೂ ಅಧಿಕಾರದಲ್ಲಿ ಮುಂದುವರಿದಿದ್ದಾರೆ.

ಮಹಿಳಾ ಚಾಲೆಂಜರ್ಸ್‌ ಟೂರ್ನಿಯನ್ನು ನವೆಂಬರ್ 1ರಿಂದ 10 ರವರೆಗೆ ಆಯೋಜಿಸುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ರಾಷ್ಟ್ರೀಯ ತರಬೇತಿ ಶಿಬಿರವನ್ನು ಆಯೋಜಿಸಲಾಗುತ್ತಿದೆ‘ ಎಂದು ಮಂಡಳಿಯ ಮೂಲಗಳು ಇತ್ತೀಚೆಗೆ ಹೇಳಿದ್ದನ್ನು ಇಲ್ಲವೇ ಉಲ್ಲೇಖಿಸಬಹುದು.