ವನಿತಾ ವಿಕಾಸ ಮಂಡಳಿ ವತಿಯಿಂದ ಭಗವದ್ಗೀತಾ ಕಂಠಪಾಠ ಸ್ಪರ್ಧೆ

ಕಲಬುರಗಿ:ಮಾ.12: ನಗರದ ರಾಮ ಪ್ಯಾರಿ ಲಾಹೋಟಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವನಿತಾ ವಿಕಾಸ ಮಂಡಳಿ ವತಿಯಿಂದ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಕಾರ್ಯಕ್ರಮದಲ್ಲಿ ನಿರ್ಣಾಯಕ ಯೋಗೆಶ ಭಟ್ ಮಾತನಾಡಿದರು.
ವನಿತಾ ವಿಕಾಸ ಮಂಡಳಿ ನಗರದ ಅತ್ಯಂತ ಹಳೆಯ ಸಂಸ್ಥೆ ಮಹಿಳೆಯ ಸ್ವಾಭಿಮಾನ ಮತ್ತು ಸ್ವಾವಲಂಬನೆಗಾಗಿ ಅನೇಕ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ ಪ್ರಸ್ತುತ ಅಧ್ಯತ್ಷರಾದ ಅಮರ್ಜಾ ದೇಶಪಾಂಡೆ ಅವರ ನೇತೃತ್ವದಲ್ಲಿ ಮಹಿಳೆಯರಿಗಾಗಿ “ಭಗವದ್ಗೀತಾ ಕಂಠಪಾಠ ಸ್ಪರ್ಧೆ“ ಆಯೋಜಿಸಲಾಗಿದೆ ಎಂದರು.
ಸ್ಪರ್ಧೆಯಲ್ಲಿ ಸುಮಾರು 20 ಜನ ಮಹಿಳೆಯರು ಭಾಗವಹಿಸಿದ್ದರು. ಎಲ್ಲರೂ ಮೂಮ್ಮಕ್ಕಳನ್ನು ಕಂಡವರಿದ್ದುದು ವಿಶೇಷವಾರಿತ್ತು.
ಈ ವಯಸ್ಸಿನಲ್ಲೂ ಅವರಲ್ಲಿರುವ ಉತ್ಸಾಹ ಹಾಗೂ ಹುಮ್ಮಸ್ಸು ನಮ್ಮಂತಹ ಯುವಕರನ್ನು ಬಡಿದೆಬ್ಬಿಸುವಂತಹದ್ದಾಗಿತ್ತು. ಮಾರ್ವಾಡೀ, ಗುಜರಾತೀ ಸಮಾಜವೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದುದು ಗಮನಾರ್ಹ ಉದಯೋನ್ಮುಖ ಮಹಿಳಾ ಉದ್ಯಮಿಯಾದ ಮಧುಶ್ರೀ ದೇಶಪಾಂಡೇ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಮಾ ತವಗ, ಕಲ್ಪನಾ ಜೋಗ್ ಸ್ವಾಗತಿಸಿದರು. ಮುರುಡಕರ್ ವಂದಿಸಿದರು. ಹಿರಿಯರಾದ ವಿಜಯಾ ಕಣ್ಣೂರ್ಕರ್, ಶೀತಲ್ ದೇಉಳಗಾಂವ್ಕರ್, ಶ್ರದ್ಧಾ ಬಂದರ್ವಾಡಕರ್, ಉಷಾಭಾಯಿ, ಶಾಮಲಾ, ಮಧುರಾ ಇದ್ದರು.