ವನಮಾರಪಳ್ಳಿ ರಸ್ತೆ ಮೇಲ್ದರ್ಜೆಗೆ: ಬಿಜೆಪಿ ವಿಜಯೋತ್ಸವ

ಚಿಂಚೋಳಿ,ಏ.3- ಚಿಂಚೋಳಿಯ ಪಟ್ಟಣದ ಮೂಲಕ ಹಾದು ಹೋಗಿತ್ತಿರುವ ವನಮಾರಪಳ್ಳಿ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಲು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ಹಿಂದುಳಿದ ಈ ತಾಲೂಕಿನ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಇಲ್ಲಿನ ಮಾರ್ಗವನ್ನು ಎನ್.ಎಚ್ ಗೆ ಸೇರಿಸಿದೆ ಇದರಿಂದ ಇಲ್ಲಿನ ಅಭಿವೃದ್ದಿಗೆ ಪೂರಕವಾದ ವಾತವಾರಣ ನಿರ್ಮಾಣಗೊಳ್ಳಲಿದೆ ಎಂದು ಬಿಜೆಪಿ
ಜಿಲ್ಲಾ ಕಾರ್ಯದರ್ಶಿ ಅಜೀತ ಪಾಟೀಲ ಮತ್ತು ಚಿಂಚೋಳಿಯ ಬಿಜೆಪಿ ತಾಲೂಕ ಅಧ್ಯಕ್ಷರಾದ ಸಂತೋಷ್ ಗಡಂತಿ ಹಾಗೂ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಜಗದೀಶ ಸಿಂಗ್ ಠಾಕೂರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ತಾಲೂಕ ಪಂಚಾಯತ ಸದಸ್ಯರಾದ ಪ್ರೇಮ ಸಿಂಗ ಜಾಧವ. ಬಿಜೆಪಿ ಪಕ್ಷದ ಯುವ ಮೋರ್ಚಾ ತಾಲೂಕ ಅಧ್ಯಕ್ಷರಾದ ಸತೀಶರೆಡ್ಡಿ ತಾಜಲಾಪೂರ. ಬಿಜೆಪಿ ಪಕ್ಷದ ಮಹಿಳಾ ಘಟಕ ಅಧ್ಯಕ್ಷರಾದ ಉಮಾ ಪಾಟೀಲ. ಬಿಜೆಪಿ ಪಕ್ಷದ ಮುಖಂಡರಾದ ವೀರಾರೆಡ್ಡಿ ಪಾಟೀಲ ಕಲ್ಲೂರ್. ಅಶೋಕ ಚವ್ಹಾಣ. ರಾಜು ಪವಾರ. ಅಶೋಕ ಪಾಟೀಲ್. ಲಕ್ಷ್ಮಣ ಅವುಂಟಿ. ಶ್ರೀಮಂತ ಕಟ್ಟಿಮನಿ. ಶಿವಯೋಗಿ ರುಸ್ತಂಪುರ. ಭೀಮಶೆಟ್ಟಿ ಮುರುಡ. ಚಂದ್ರು ಜೋನ್ನಲ್ ಕಲ್ಲೂರ್. ಗೀರಿರಾಜ ನಾಟಿಕರ. ವಿಶ್ವನಾಥ ಕಲ್ಲೂರ್. ನಾಗರಾಜ ಕಲ್ಲೂರ್. ಪವನ ಕುಮಾರ ಗೋಪನಪಳ್ಳಿ. . ಗುಂಡಪ್ಪ ಔರಾದಿ. ಮಾನಂದ ರೊಟ್ಟಿ. ಮಲ್ಲು ಕೋಡಂಬಲ್ ಚಿಮ್ಮಂಚೋಡ. ಅಲ್ಲಂಪ್ರಭು ಪಾಟೀಲ ಹುಲಿ. ಮಹಾನಂದ ರಟಕಲ. ಮಲ್ಲಿಕಾರ್ಜುನ ಉಡುಪಿ. ಹಣಮಂತ ಗರಂಪಳ್ಳಿ. ಶ್ರೀನಿವಾಸ್ ಚಿಂಚೋಲಿಕರ. ಅಂಬರೀಶ್ ಓಲಗಿರಿ. ಸದ್ದಾಮ್ ಹೊಸಳ್ಳಿ. ವಿವೇಕ್ ಪಾಟೀಲ ದೇಗಲಮಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.