ವನಮಹೋತ್ಸವ ಯಶಸ್ವಿಗೆ ಸರ್ವರ ಸಹಕಾರ ಅಗತ್ಯ

ಭಾಲ್ಕಿ:ಜು.22: ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಜುಲೈ 24 ರಂದು ನಡೆಯಲಿರುವÀ ವನಮಹೋತ್ಸವ,ಅರಣ್ಯೀಕರಣ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದ್ದು,ಕಾರ್ಯಕ್ರಮದ ಯಶ್ವಸಿಗೆ ಸರ್ವರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ಪಟ್ಟಣದ ಪುರಭವನದಲ್ಲಿ ಶುಕ್ರವಾರ ಜು 24 ರಂದು ನಡೆಯಲಿರುವ ವನಮಹೋತ್ಸವ ಅಂಗವಾಗಿ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜುಲೈ 24 ರಂದು ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಆವರಣದಲ್ಲಿ ಮುಂಜಾನೆ 11.00ಗಂಟೆಗೆ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮವನ್ನು ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಉದ್ಘಾಟಿಸಿಲಿದ್ದಾರೆ.ಸಂಸದ ಭಗವಂತ ಖೂಬಾ,ಪೌರಾಡಳಿತ ಸಚಿವ ರಹೀಂ ಖಾನ್ ಸೇರಿದಂತೆ ಜಿಲ್ಲೆಯ ಶಾಸಕರು,ವಿಧಾನ ಪರಿಷತ್ ಸದಸ್ಯರು, ಮತ್ತು ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ವನಮಹೋತ್ಸವ ಮತ್ತು ಅರಣ್ಯೀಕರಣ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಗಿರುವುದರಿಂದ ಪಟ್ಟಣದ ಪದವಿ ಪೂರ್ವ,ಪದವಿ ಕಾಲೇಜು ಸೇರಿದಂತೆ ಎಲ್ಲ ವಿಭಾಗದ ಅಂದಾಜು 5 ಸಾವಿರ ಮಕ್ಕಳು ಸೇರಲಿದ್ದಾರೆ.ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ಬಸ್ ಮತ್ತು ಪ್ರಸಾದ ವ್ಯವಸ್ಥೆ ಮಾಡಲಾಗಿದೆ.ಆಯಾ ಕಾಲೇಜಿನ ಮುಖ್ಯಸ್ಥರು ಗಿಡಗಳ ಬೇಡಿಕೆ ಪಟ್ಟಿ ಅರಣ್ಯ ಇಲಾಖೆಗೆ ಸಲ್ಲಿಸಬಹುದು,ಒಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆಶಯದಂತೆ ಕಾರ್ಯಕ್ರಮ ಅತ್ಯಂತ ಯಶಸ್ವಿಪೂರ್ಣಗೊಳಿಸೋಣ ಎಂದು ತಿಳಿಸಿದರು.
ಜಿಪಂ ಸಿಇಓ ಶಿಲ್ಪಾ ಎಮ್.ಮಾತನಾಡಿ,ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ ಆಸನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ .ಮಾತನಾಡಿ,ವಾಹನಗಳು ಸಾಲಾಗಿ ಇತರೆ ವಾಹನಗಳಿಗೆ ತೊಂದರೆಯಾಗದಂತೆ ಪಾರ್ಕಿಂಗ್ ಸೂಚಿಸಿದ ಸ್ಥಳಗಳಲ್ಲಿ ನಿಲ್ಲಿಸಬೇಕು ಎಂದು ಹೇಳಿದರು.ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ್ ಮಾತನಾಡಿ,ಡಿಸಿ ಅವರ ಸೂಚನೆಯಂತೆ ಸಂಬಂಧ ಪಟ್ಟವರು ನಿರ್ಲಕ್ಷ್ಯ ತೋರದೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕರೆತರಬೇಕು ಎಂದರು.ಎಸಿಎಫ್ ಎಮ್‍ಡಿ ಮುಜಿಬೋದಿನ್ ಮಾತನಾಡಿ,ಕಾಲೇಜಿನ ಮಕ್ಕಳು ಸಮ ವಸ್ತ್ರದೊಂದಿಗೆ ಭಾಗವಹಿಸುವಂತೆ ಸೂಚಿಸಿದರು.
ತಹಸೀಲ್ದಾರ ಪ್ರೇಮಸಿಂಗ ಪವಾರ,ಎಎಸ್ಪಿ ಪೃಥ್ವಿಕ ಶಂಕರ,ಉಪ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ್,ತಾಪಂ ಇಓ ಸೂರ್ಯಕಾಂತ ಬಿರಾದಾರ,ಡಿಡಿಪಿಐ ಸಲಿಂ ಪಾಶಾ, ಟಿಎಮ್ಸಿ ಸಿಓ ನಾಗನಾಥ ಪರೀಟ್,ಎಸಿಎಫ್‍ಗಳಾದ ರಾಜೇಂದ್ರ, ಶಿವುಕುಮಾರ ಗಾಜರೆ,ಆರ್‍ಎಫ್‍ಓಗಳಾದ ಶಿವುಕುಮಾರ ರಾಠೋಡ,ವಿರೇಶ ಕಲ್ಯಾಣಿ,ಪ್ರವೀಣ ಮೋರೆ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ,ವಿವಿಧ ಶಾಲೆಯ ಮುಖ್ಯಸ್ಥರು ಉಪಸ್ಥಿತರಿದ್ದರು.