ವದಂತಿಗಳಿಗೆ ಕಿವಿಗೊಡಬೇಡಿನನ್ನ ಉಸಿರೇ ಬಿಜೆಪಿ ಗೆಲುವು ಶತ ಸಿದ್ಧ: ಸೋಮಶೇಖರ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,1- ನಮ್ಮ ವಿರೋಧಿಗಳು ನನ್ನ ಸ್ಪರ್ಧೆ ಬಗ್ಗೆ  ಹಾಗೇ, ಹೀಗೆ ಎಂದು ವದಂತತಿಗಳನ್ನು ಹುಟ್ಟುಹಾಕುತ್ತಿದ್ದಾರೆ. ನನ್ನ ಉಸಿರೇ ಬಿಜೆಪಿ. ಈ ಬಾರಿ ನನ್ನ ಗೆಲುವು ಖಚಿತ ಎಳ್ಳಷ್ಟು ಅನುಮಾನ ಬೇಡ ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಅವರಿಂದು ಬೆಳಿಗ್ಗೆ ಸಂಜೆವಾಣಿ ಜೊತೆ ಮಾತನಾಡಿ.  ನನ್ನ ಪ್ರತಿ ಪ್ರತಿ ಸ್ಪರ್ಧಿಗಳು ಅನೇಕ ವದಂತಿಗಳನ್ನು ಹರಿಬಿಡುತ್ತಿದ್ದಾರೆ. ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತಿಲ್ಲ ಕೊನೆ ಗಳಿಗೆಯಲ್ಲಿ ಕೆಆರ್ ಪಿಯನ್ನು ಬೆಂಬಲಿಸಬಹುದು, ಹಾಗೇ, ಹೀಗೆ ಎಂದು ಇದಾವುದಕ್ಕೂ ಬಿಜೆಪಿಯ ಅಭಿಮಾನಿಗಳು, ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬೇಕಿಲ್ಲ. ನನ್ನ ರಾಜಕೀಯದ ಜೀವನ ಕೊನೆಯುಸಿರಿರುವವರೆಗೆ ಬಿಜೆಪಿಯಲ್ಲೇ.
ಎದುರಾಳಿಗಳಿಗೆ ಗೊತ್ತಾಗುವಂತೆ ಚುನಾವಣೆಯಲ್ಲಿ ಗೆಲುವಿನ ತಂತ್ರ ಮಾಡಬೇಕಿಲ್ಲ. ಅಂತರಿಕವಾಗಿ ನಮ್ಮ ಸಿದ್ದತೆ ಭರ್ಜರಿಯಾಗಿ ನಡೆದಿದೆ. ಅವರಿವರಂತೆ ನೂರಾರು ಜನರನ್ನು ಕರೆದುಕೊಂಡು ಆಡಂಬರ ಮಾಡವ ಪರಿಸ್ಥಿತಿ ಬಿಜೆಪಿಗಿಲ್ಲ.  ಅವರಿನ್ನು ಹೊಸದಾಗಿ ಬಂದಿದ್ದು ಜನತೆಗೆ ತಮ್ಮನ್ನು ಪರಿಚಯಿಸಿಕೊಳ್ಳಲು ಆಡಂಬರ ಮಾಡುತ್ತಿದ್ದಾರೆ. ಬೂತ್ ಮಟ್ಟದಿಂದ ನಮ್ಮ‌ ಕಾರ್ಯಪಡೆ ಕೆಲಸ ಮಾಡುತ್ತಿದೆ. ವೃದ್ದರು, ವಿಕಲಚೇತನ ಮತದಾನವನ್ನು ಪಡೆಯಲು ಸಮರ್ಥವಾಗಿ ನಿರ್ವಹಿಸಿದೆ. ನಮ್ಮದು ಶಿಸ್ತು ಪಕ್ಷ, ನಮ್ಮ ಅಂಡರ್ ಕರೆಂಟ್ ಇತರರಿಗೆ ಮೇ 10 ರಂದು ಶಾಕ್ ನೀಡಲಿದ್ದು. ಮೇ 13. ಬೆಳಕು ಚೆಲ್ಲಲಿದೆಂದರು.
ಪ್ರಧಾನಿ ಮೋದಿ ಅವರು ಮೇ.6 ರಂದು ಬಳ್ಳಾರಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದು ಹಳೇ ಕಪ್ಪಗಲ್ಲು ರಸ್ತೆಯ ಸತ್ಯಂ ಶಾಲೆಯ ಬಳಿಯ ಜಮೀನಿನಲ್ಲಿ ಬಹಿರಂಗ ಸಭೆ ನಡೆಯಲಿದೆ. ಅದಕ್ಕಾಗಿ ಸಿದ್ದತೆಗಳು ನಡೆದಿವೆಂದರು.
ಎಂದಿನಂತೆ ಮತಬೇಟೆಗಾಗಿ ನಗರದ ಹಲವು ಪ್ರದೇಶಗಳಿಗೆ ತೆರಳಿ ಅವರು ಮತಯಾಚನೆ ನಡೆಸಿ. ನಗರದ ಅಭಿವೃದ್ಧಿಗೆ ಈವರಗೆ ಮಾಡಿದ್ದು.‌ ಮುಂದೆ ಮಾಡಲು ಮಂಜೂರಾತಿ ಮಾಡಿಸಿರುವುದು, ಮಾಡಲು ಉದ್ದೇಶಿಸಿರುವುದನ್ನು ಮತದಾರರಿಗೆ ತಿಳಿಸಿ. ಮತ್ತೊಮ್ಮೆ ತಮಗೆ ಮತ ನೀಡಿ ಆಶಿರ್ವಾದಿಸಲು ಮನವಿ ಮಾಡಿದರು.
ಕಾಂಗ್ರೆಸ್ ಗ್ಯಾರೆಂಟಿಗಳ ಬಗ್ಗೆ ನಂಬ ಬೇಡಿ. ಇದೇ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನ ಮೊದಲಾದ ರಾಜ್ಯಗಳಲ್ಲಿ ಚುನಾವಣೆ ಸಂದರ್ಭದಲ್ಲಿ ನೀಡಿದ ಗ್ಯಾರೆಂಟಿ ಈವರಗೆ ಯಾಕೆ ಈಡೇರಿಲ್ಲ ಎಂದು ಕೇಳಿ ಎಂದರು.
ಗ್ಯಾರೆಂಟಿ ಎಂದು ಸುಳ್ಳ ಹೇಳಿ ಅಧಿಕಾರಕ್ಕೆ ಬಂದು ರಾಜ್ಯವನ್ನು ಕೊಳ್ಳೆಹೊಡೆಯುವ ಪ್ರಯತ್ನ‌ಮಾಡುವ ಹುನ್ನಾರ ಕಾಂಗ್ರೆಸ್ ನದ್ದಾಗಿದೆಂದರು.
ಕುಕ್ಕರ್ ಆಸೆಗೆ ಬಲಿಯಾದರೆ, ನಗರದ ಅಭಿವೃದ್ಧಿ ಕುಂಟಿತವಾಗಲಿದೆ. ಸುಶಿಕ್ಷಿತ ಮತದಾರ ನಗರದ, ರಾಜ್ಯದ, ದೇಶದ ಅಭಿವೃದ್ಧಿ ಗಮನಸಿ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ತರಲು ಬಿಜೆಪಿಗೆ ಮತ ನೀಡಿ ಎಂದರು.
ನಗರದ ಸತ್ಯನಾರಾಯಣ ಪೇಟೆ ಓವರ್ ಬ್ರಿಡ್ಜ್ , ತಾಳೂರು ರಸ್ತೆ, ಅನಂತಪುರಂ ರಸ್ತೆ  ಸೇರಿದಂತೆ ಅನೇಕ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿ ಬಗ್ಗೆ ತಿಳಿಸಿ ನಗರದ ಜನತಗೆ ಕುಡಿಯುವ ನೀರಿನ ಸಮಸ್ಯೆಯೇ ಇಲ್ಲದಂತೆ ಯೋಜನೆ ಜಾರಿ ನನ್ನ ಗುರಿಯಾಗಿದೆಂದರು.
ಬಡ ಜನರಿಗೆ 12 ಸಾವಿರಕ್ಕು ಹೆಚ್ಚು ಮನೆಗಳಿಗೆ ಪಟ್ಟಾ ನೀಡಿದೆ. ಗುಡಿಸಲ ರಹಿತ ನಗರ ಮಾಡುವ ಕನಸು ನನ್ನದಾಗಿದೆ. ಅದಕ್ಕಾಗಿ ಮುಂಡ್ರಿಗಿ ಲೇಔಟ್ ಅಭಿವೃದ್ಧಿ ಪಡಿಸಿದೆಂದರು.
ಒಟ್ಟಾರೆ ಈಗಾಗಲೇ ಹೇಳುತ್ತ ಬಂದಿರುವಂತೆ ಸ್ವಚ್ಚ ಸುಂದರ ಬಳ್ಳಾರಿ ನಮ್ಮಿಂದ, ಜನರ, ಮತದಾರರ ಸಹಕಾರದಿಂದ ಆಗಬೇಕೆಂಬ ಬಯಕೆ ನನ್ನದೆಂದರು.
ಕಾಮಗಾರಿಗಳಿಗೆ 40% ಕಮೀಷನ್ ಆರೋಪದ ಪ್ರಶ್ನೆಗೆ ಯಾರು ಕೊಟ್ಟಿದ್ದಾರೆ ಎಂಬುದಕ್ಕೆ ಒಂದೇ ಒಂದು ಸಾಕ್ಷಿ ನೀಡಲಿ. ಕಾಂಗ್ರೆಸ್ ಕೆಲ ಗುತ್ತಿಗೆದಾರರಿಂದ  ಕೇವಲ ಹೇಳಿಕೆ ಕೊಡಿಸಿತೇ ಹೊರೆತು. ಒಂದೇ ಒಂದು ದಾಖಲೆ ನೀಡಿಲ್ಲ. ಕುಣಿಯಲು ಬಾರದವರು ನೆಲ ಡೊಂಕು ಎಂಬಂತೆ ಬಿಜೆಪಿಯನ್ನು ಎದುರಿಸಲು ಆಗದೆ. 2ಜಿ, ಕಲ್ಲಿದಲು ಹಗರಣದ ಮಸಿ ಹೊರೆಸಿಕೊಳ್ಳಲು ಆಗದೆ ವಿನಾಕಾರಣ ಆರೋಪ ಮಾಡುತ್ತಿದೆ. ಉದೆಲ್ಲ ಬುದ್ದಿವಂತ ಮತದಾರರಿಗೆ ಗೊತ್ತಾಗುತ್ತಿದೆಂದು.
ಒಟ್ಟಾರೆ ನಮ್ಮ ಕಾರ್ಯಕರ್ತರ ಪಡೆ ತಮ್ಮ ಕೆಲಸ ಮಾಡುತ್ತಿದೆ. “ನನ್ನ ಗೆಲುವು ಈ ಬಾರಿ ಶತ ಸಿದ್ದ”  ಎಂಬ ಕಾನ್ಫಿಡೆಂಟ್ ಮಾತು ಅವರ ಬಾಯಿದ ಹೊರ ಬಂತು.