
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.17: ತಾಲೂಕಿನ ವಣೆನೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಗಾವಣೆಗೊಂಡ 4 ಜನ ಶಿಕ್ಷಕರ ಬಿಳ್ಕೊಡುಗೆ ಸಮಾರಂಭ ನಡೆಸಲಾಯಿತು.
ಯಾರು ನಮ್ಮಿಂದ ಕಸಿದುಕೋಳ್ಳಲಾಗದ ವಸ್ತು ಎಂದರೆ ಅದು ಶಿಕ್ಷಣ, ಆದ್ದರಿಂದ ಪೋಷಕರು ಸಾರ್ವಜನಿಕ ಸಮೃದ್ಧಿ ಗ್ರಾಮ ನಿರ್ಮಾಣಕ್ಕೆ ಯಾವತರ ಮುಂದಾಗುತ್ತಾರೆ ಅದೇ ರೀತಿ ನಮ್ಮ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗ್ರಾಮದ ಪೋಷಕರು ಮುಂದಾಗಬೇಕು ಎಂದು ಶಾಲೆಯ ವರ್ಗಾವಣೆ ಗೊಂಡಿರುವ ಸಹ ಶಿಕ್ಷಕ ಶ್ರೀನಿವಾಸ ರವರು ಗ್ರಾಮದ ಜನರಿಗೆ ಮತ್ತು ಹಳೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಶಾಲೆಗೆ ವರ್ಷಕ್ಕೆ ಸರ್ಕಾರವು 25000 ರೂ ಅನುದಾನದಲ್ಲಿ ಶಾಲೆ ಅಭವೃದ್ಧಿಗೆ ಸರಿಯಾಗಲ್ಲ ನೀವು ಸಹಕರಿಸಬೇಕು ಎಂದರು.
ಅದೇ ರೀತಿ ನನ್ನ ಶಾಲೆ ನನ್ನ ಹೆಮ್ಮೆ ನಮ್ಮ ಸರ್ಕಾರಿ ಶಾಲೆ ಅಭಿವೃದ್ಧಿ ಆಗಬೇಕು ಎಂದು ವರ್ಗಾವಣೆಗೊಂಡ ಸಹ ಶಿಕ್ಷಕರು ಸುಮಾರು 16 ವರ್ಷ ಶಾಲೆಗೆ ಕರ್ತವ್ಯ ವಹಿಸಿದ್ದಕ್ಕೆ ಶಾಲಾ ಮುಖ್ಯೋಪಾಧ್ಯಾಯರಿಗೆ 28000ರೂಪಾಯಿಗಳು ಚೆಕ್ಕ್ ವಿಸ್ತರಿಸಿದ್ದರು. ಮತ್ತು ಹಳೆ ವಿದ್ಯಾರ್ಥಿಗಳಿಂದ ಅನ್ನದಾಸೋಹ ಕಾರ್ಯಕ್ರಮ ನಿರ್ವಹಿಸಿದರು.