ವಡ್ಡು ಗ್ರಾಮದಲ್ಲಿ ಪೌರ ಕಾರ್ಮಿಕರಿಗೆ ಆರೋಗ್ಯದ ಅರಿವು,


ಸಂಜೆವಾಣಿ ವಾರ್ತೆ
ಸಂಡೂರು:ಮಾ: 12: ತಾಲೂಕಿನ ವಡ್ಡು ಗ್ರಾಮ ಪಂಚಾಯತಿ ಮತ್ತು ಜೆ.ಎಸ್.ಡಬ್ಲ್ಯೂ ನ ಸಾಹಸ ಸಂಸ್ಥೆ ಸಹಯೋಗದಲ್ಲಿ “ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ” ನಡೆಯಿತು, 82 ಪೌರ ಕಾರ್ಮಿಕರಿಗೆ ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸಾಕ್ಷಾರತಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಯಿತು, ಅಪಾಯಕಾರಿ ಕಸವನ್ನು ವಿಲೇವಾರಿ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ, ಕೈ ಸ್ವಚ್ಛ ಗೊಳಿಸದೇ ಕಣ್ಣು,ಮೂಗು, ಬಾಯಿ, ಕಿವಿಗಳನ್ನು ಮುಟ್ಟದಂತೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು, ಹಾಗೆ ಮುಂದಿನ ದಿನಗಳಲ್ಲಿ ಎಲ್ಲರೂ ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು, ಎರಡು ದಿನ ನಡೆದ ಶಿಬಿರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು, ಪಾಲಸಿಗಳು, ಹಣ ಉಳಿತಾಯ ಮಾಡುವ, ಜೀವನದ ಮಹತ್ವದ ಕನಸು ಚಿತ್ರಿಸಿಕೊಂಡು ಅದನ್ನು ಸಾಧಿಸುವ ಗುರಿ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕುರಿತು ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿ ದಿನೇಶ್ ತಿಳಿಸಿ ಕೊಟ್ಟರು,
 ಶಿಬಿರದಲ್ಲಿ 82 ಪೌರ ಕಾರ್ಮಿಕರಿಗೆ ಜೆ.ಎಸ್.ಡಬ್ಲ್ಯೂ ನ ಲೆವಿನಾ ಕಂಜಾನಿ ಮತ್ತು ರಾಘವೇಂದ್ರ ಅವರು ಸಮವಸ್ತ್ರಗಳನ್ನು ವಿತರಣೆ ಮಾಡಿದರು,
 ಈ ಸಂದರ್ಭದಲ್ಲಿ ವಡ್ಡು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಹಂಪಮ್ಮ, ಸಾಹಸ ಸಂಸ್ಥೆ ವ್ಯವಸ್ಥಾಪಕ ಜಾರ್ಜ್ ಅಲೆಕ್ಸಾಂಡರ್, ಸಂಯೋಜಕ ಚಂದ್ರಶೇಖರಯ್ಯ,ಮೇಲ್ವಿಚಾರಕ ಶಿವಕುಮಾರ್,ಮಂಜುನಾಥ್,ಗಿರೀಶ್ ಕುಲಕರ್ಣಿ, ಸುಭಾಷ್ ಚಂದ್ರ, ಸುರೇಶ್ ಬಾಬು ಮತ್ತು ಪೌರ ಕಾರ್ಮಿಕರು ಹಾಜರಿದ್ದರು