ವಡ್ಡರ ಹಳ್ಳಿಯಲ್ಲಿ ಮಿನಿ ಟ್ಯಾಕ್ಟರ್‍ನಲ್ಲಿ ಮಕ್ಕಳ ಮೆರವಣಿಗೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ. 02- ತಾಲೂಕಿನ ವಡ್ಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಅಚರಣೆ ಮಾಡಲಾಯಿತು.
ಶೃಂಗರಿಸಿದ ಮಿನಿ ಟ್ರಾಕ್ಟರ್‍ನಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿಕೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ಬಳಿಕ ಮಕ್ಕಳಿಗೆ ಶಾಲಾ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಅರತಿ ಎತ್ತಿ, ಗುಲಾಬಿ ಹೂ, ಸಿಹಿ ನೀಡಿ ಸ್ವಾಗತಿಸಿ ಬರಮಾಡಿಕೊಂಡರು.
ಗ್ರಾ.ಪಂ. ಸದಸ್ಯ ವಿ.ಕೆ. ರಾಜಶೇಖರಮೂರ್ತಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡುವ ಮೂಲಕ ಪೋಷಕರು ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು.
ಸರ್ಕಾರ ಸವಲತ್ತುಗಳನ್ನು ಪಡೆದುಕೊಂಡು ಗುಣಮಟ್ಟ ಶಿಕ್ಷಣ ಸರ್ಕಾರಿ ಶಾಲೆಯಲ್ಲಿಯು ದೊರೆಯುತ್ತದೆ ಎಂಬುದನ್ನು ಪೋಷಕರು ಮನವರಿಕೆ ಮಾಡಿಕೊಳ್ಳಬೇಕು. ನಮ್ಮ ಶಾಲೆಗಳಲ್ಲಿ ಉತ್ತಮ ಭೋದನೆ ಮಾಡುವ ಶಿಕ್ಷಕ ವರ್ಗವೇ ಇದ್ದು, ಉನ್ನತ ದರ್ಜೆಯಲ್ಲಿ ಪಾಸಾಗಿರುವ ಹಾಗೂ ಪ್ರತಿಭಾವಂತ ಶಿಕ್ಷಕರನ್ನು ಸರ್ಕಾರ ತರಬೇತಿ ನೀಡಿ ಶಿಕ್ಷಕರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಬಹಳಷ್ಟು ಮಂದಿ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಭವಿಷ್ಯವನ್ನು ಉಜ್ವಲಗೊಳಿಸಿಕೊಂಡಿದ್ದಾರೆ. ಹೀಗಾಗಿ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಕೊಡಿಸುವ ಮೂಲಕ ಉಚಿತವಾಗಿ ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯರಾದ ರಾಜಶೇಖರ್ ಮೂರ್ತಿ, ಸಾವಿತ್ರಮ್ಮ, ಸಿದ್ದಮಲ್ಲಪ್ಪ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ಬಸವಣ್ಣ, ಮಲ್ಲಿಕಾರ್ಜುನಸ್ವಾಮಿ ಮುಖ್ಯ ಶಿಕ್ಷಕರು, ಕುಮಾರ ಸಹ ಶಿಕ್ಷಕರು, ಪೆÇೀಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.