ವ‌‌‌‌ಡ್ಡರ ಬಂಡೆ ರಸ್ತೆ ಅಗಲೀಕರಣ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.16: ನಗರದ ವಡ್ಡರಬಂಡೆ (ಬಾಲಜಿರಾವ್) ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಭರದಿಂದಸಾಗಿದೆ.
ರಸ್ತೆ ಅಗಲೀಕರಣ ಮಾಡಿ ಎರಡು ಬದಿಯಲ್ಲಿ ಈಗಾಗಲೇ ಡ್ರೈನೇಜ್ ನಿರ್ಮಾಣ ಮಾಡಲಾಗಿದ್ದು ಹಳೆಯ ರಸ್ತೆಯನ್ನು ಅಗೆದು ಅದಕ್ಕೆ ಗರಸು ತುಂಬಿ ಸಮತಟ್ಟು ಮಾಡುವ ಕಾರ್ಯ ನಡೆದಿದೆ.
ಸಚಿವ ಶ್ರೀರಾಮುಲು ಅವರು ಉಸ್ತುವಾರಿ ಸಚಿವರಾದ ಮೇಲೆ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ನಗರ ಶಾಸಕ ಸೋಮಶೇಖರರೆಡ್ಡಿ ಅವರ ಆಶಯದಂತೆ ರಾಜ್ ಕುಮಾರ್ ರಸ್ತೆಯ ಅಗಲೀಕರಣ ಮತ್ತು ಚತುಷ್ಪತ ರಸ್ತೆಯನ್ನಾಗಿಸುವ ಕಾಮಗಾರಿ ಸದ್ಯದಲ್ಲೇ ಆರಂಭಗೊಳ್ಳಲಿದೆಯಂತೆ. ಇವುಗಳಷ್ಟೆ ಅಲ್ಲದೆ ನಗರದ ಹಲವೆಡೆ ರಸ್ತೆಗಳ ದುರಸ್ತಿ ಮತ್ತು ನಿರ್ಮಾಣ ಕಾರ್ಯನಡೆದಿದೆ. ಆದರೆ ದುರ್ಗಮ್ಮ ದೇವಸ್ಥಾನದಿಂದ ಸಂಗನಕಲ್ಲಿಗೆ ತೆರಳುವ ಗಾಂಧಿನಗರದ ರಸ್ತೆಗೆ ಮಾತ್ರ ಇನ್ನು ಮುಕ್ತಿ ದೊರೆಯುತ್ತಿಲ್ಲ. ತೀವ್ರವಾಗಿ ಹಾಳಾಗಿರುವ ಈ ರಸ್ತೆಯಲ್ಲಿ ಓಡಾಡುವ ಜನ ಹಿಡಿಶಾಪ ಹಾಕಿಕೊಳ್ಳುತ್ತ ಸಾಗುತ್ತಿದ್ದಾರೆ.