ವಡ್ಡರ ಕಾಲೊನಿಗೆ ಬಿ.ವೈ. ವಿಜಯೇಂದ್ರ ಭೇಟಿ

ಬೀದರ್:ಜ.30: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸೋಮವಾರ ನಗರದ ವಡ್ಡರ ಕಾಲೊನಿಗೆ ಭೇಟಿ ನೀಡಿದರು.

ಬೂತ್ ಸಂಖ್ಯೆ 175ರ ವಡ್ಡರ ಕಾಲೊನಿಗೆ ಯಲ್ಲಪ್ಪ ಲಾಲಪ್ಪ ವಡ್ಡರ ಅವರ ಮನೆಗೆ ಭೇಟಿ ನೀಡಿ ಸಮಾಲೋಚಿಸಿದರು. ಅವರಿಗೆ ಕಾಲೊನಿಗೆ ಜನ ಹೂಮಳೆಗರೆದು ಸ್ವಾಗತಿಸಿದರು.

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತಪ್ರವಾಸ ಕೈಗೊಂಡಿದ್ದೇನೆ. ಅಧ್ಯಕ್ಷನಾದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಬಂದಿದ್ದೇನೆ. ಬೂತ್ ಸಂಖ್ಯೆ 175ರ ಕಾರ್ಯಕರ್ತ ಯಲ್ಲಪ್ಪ ಲಾಲಪ್ಪ ವಡ್ಡರ ಅವರ ಮನೆಗೆ ಭೇಟಿ ನೀಡುವುದರ ಮೂಲಕ ಸಂಘಟನಾ ಕೆಲಸ ಆರಂಭಿಸಿದ್ದೇನೆ ಎಂದು ತಿಳಿಸಿದರು.

ಬಳಿಕ ಅವರು ಬೀದರ್ ತಾಲ್ಲೂಕಿನ ಚಿಟ್ಟಾವಾಡಿ ಗ್ರಾಮಕ್ಕೆತೆರಳಿ ಅಲ್ಲಿ ಬಸವೇಶ್ವರರ ಅಶ್ವಾರೂಢ ಮೂರ್ತಿಯನ್ನು ಉದ್ಘಾಟಿಸಿದರು.

ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಸವಣ್ಣನವರು ಪ್ರೇರಣೆ. ದೇಶ-ವಿದೇಶಗಳಿಗೆ ಹೋದಾಗ ಪ್ರಧಾನಿಯವರು ಬಸವೇಶ್ವರರ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ ಎಂದು ಹೇಳಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಪ್ರಭು ಚವಾಣ್, ಡಾ. ಶೈಲೇಂದ್ರ ಕೆ. ಬೆಲ್ದಾಳ, ಡಾ. ಸಿದ್ದಲಿಂಗಪ್ಪ, ಶರಣು ಸಲಗರ, ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಇತರರಿದ್ದರು.