ವಡವಡಗಿ ಗ್ರಾಂಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಅಧ್ಯಕ್ಷರಾಗಿ ಪೂರ್ಣಿಮಾ ಉಪಾಧ್ಯಕ್ಷರಾಗಿ ಕಾಸಪ್ಪ ಆಯ್ಕೆ

ತಾಳಿಕೋಟೆ:ಅ.1: ಸಮಿಪದ ವಡವಡಗಿ ಗ್ರಾಮದ ಗ್ರಾಂ ಪಂಚಾಯ್ತಿಯ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುರಿತು ಸೋಮವಾರರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ದೇವಪ್ಪ ಹೆಬ್ಬಾಳ ಚುನಾಯಿತರಾದರೇ ಉಪಾಧ್ಯಕ್ಷರಾಗಿ ಕಾಸಪ್ಪ ಫೀರಪ್ಪ ಹೊಸಮನಿ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಪೂರ್ಣಿಮಾ ದೇವಪ್ಪ ಹೆಬ್ಬಾಳ, ಮತ್ತು ಶ್ರೀಮತಿ ಶಾಂತಾಬಾಯಿ ಸುಭಾಸ ಬಿರಾದಾರ ಅವರು ನಾಮ ಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ಪೂರ್ಣಿಮಾ ಹೆಬ್ಬಾಳ ಅವರು 19 ಮತಗಳನ್ನು ಪಡೆದರೆ ಶಾಂತಾಬಾಯಿ ಬಿರಾದಾರ ಅವರು 3 ಮತಗಳನ್ನು ಪಡೆದುಕೊಂಡರು. ಹೀಗಾಗಿ ಪೂರ್ಣಿಮಾ ಹೆಬ್ಬಾಳ ಅವರು ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾದರು.

ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಸಪ್ಪ ಹೊಸಮನಿ ಮತ್ತು ಬಸಪ್ಪ ಬಜೆಂತ್ರಿ ಅವರು ನಾಮಪತ್ರ ಸಲ್ಲಿಸಿದ್ದರು. ಕೊನೆಗಳಿಯಲ್ಲಿ ಬಸಪ್ಪ ಬಜೇಂತ್ರಿ ಅವರು ನಾಮಪತ್ರವನ್ನು ಹಿಂಪಡೆದುಕೊಂಡಿದ್ದರಿಂದ ಕಾಸಪ್ಪ ಹೊಸಮನಿ ಅವರು ಅವಿರೋಧವಾಗಿ ಆಯ್ಕೆಯಾಗಲು ಕಾರಣವಾಯಿತು.

ಒಟ್ಟು 23 ಜನ ಸದಸ್ಯರ ಬಲಹೊಂದಿರುವ ವಡವಡ ಗ್ರಾಂಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ 22 ಜನ ಸದಸ್ಯರು ಪಾಲ್ಗೊಂಡಿದ್ದರು.

ವಿಜಯೋತ್ಸವ

ಅಧ್ಯಕ್ಷರಾಗಿ ಪೂರ್ಣಿಮಾ ಹೆಬ್ಬಾಳ ಉಪಾಧ್ಯಕ್ಷರಾಗಿ ಕಾಸಪ್ಪ ಹೊಸಮನಿ ಅವರು ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರೊಂದಿಗೆ ಗ್ರಾಮದಲ್ಲಿ ಗುಲಾಲ್ ಎರಚಿ, ಪಟಾಕ್ಷೀ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಈ ಸಮಯದಲ್ಲಿ ಮಂಜುನಾಥ ಸಿದ್ದನಗೌಡ ಬಿರಾದಾರ, ಈರಣ್ಣ ಚನ್ನಪ್ಪ ಯಲಗೋಡ, ನಾನಾಗೌಡ ನಿಂಗನಗೌಡ ಬಿರಾದಾರ, ಮಡಿವಾಳಪ್ಪ ಹೆಬ್ಬಾಳ, ಎಸ್.ಬಿ.ಬಿರಾದಾರ, ನಾನಾಗೌಡ ನಾಡಗೌಡ, ಮಲ್ಲಣ್ಣ ತಳವಾರ, ಡಾ.ದಯಾನಂದ ತಳವಾರ, ಪರಶುರಾಮ ಮಾಸ್ತಿ, ರಮೇಶ ಚವ್ಹಾಣ, ರಾಮನಗೌಡ ಬಿರಾದಾರ, ಶಿವನಗೌಡ ಮಾಯಾಪೂರ, ಶರಣಗೌಡ ನಾಡಗೌಡ, ಗುರುಬಸ್ಸಪ್ಪ ಸಜ್ಜನ, ಪರಶುರಾಮ ಗಂಜಾಳ(ಸಿಂಧಗೇರಿ), ರಾಜು ಹರಿಜನ, ಗೊಲ್ಲಾಳಪ್ಪ ಕಡಕೋಳ, ಬಸಪ್ಪ ಬ್ಯಾಳಿ(ನಾಗರಾಳ), ಮಹಾಂತಗೌಡ ಪಾಟೀಲ(ನಂದ್ಯಾಳ), ರಾಮಚಂದ್ರ ಸಾಸನೂರ, ಶ್ರೀಶೈಲ ಸಾಸನೂರ(ಹು.ಬೆಂಚಿ), ವಿಠ್ಠಲಗೌಡ ಬಿರಾದಾರ, ಮೊದಲಾದವರು ಪಾಲ್ಗೊಂಡಿದ್ದರು.