ವಡಗೇರಾ ಪಟ್ಟಣಕ್ಕೆ ಸಮರ್ಪಕ ನೀರು ಸರಬರಾಜಿಗೆ ಸೂಚನೆ

ವಡಗೇರಾ:ಆ.18: ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಶರಣು ಇಟಗಿ ಹೋರಾಟದ ಎಚ್ಚರಿಕೆ ನೀಡಿದ್ದರು. ಇದನ್ನು ಅರಿತ ಅಧಿಕಾರಿಗಳು ಪಟ್ಟಣದ ಎಲ್ಲಾ ಬಡಾವಣೆ ಹಾಗೂ ಬೋರ್ವೆಲ್ ಬಾವಿಗಳಿಗೆ ವಡಗೇರಾ ತಾಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ್ ಸಂಗವಾರ ಮಾತನಾಡಿದರು. ನಾನು ಕಳೆದ ಒಂದು ದಿನದ ಹಿಂದೆ ಅಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಬೋರ್ವೆಲ್ ಗಳನ್ನು ಕೊರೆಸಿ ಮತ್ತು ಪಟ್ಟಣದ ಸಿಹಿ ನೀರನ ಬಾವಿಯನ್ನು ಶುದ್ಧಿಗೊಳಿಸಿ ಅಲ್ಲಿನ ನೀರನ್ನು ಸರಬರಾಜು ಮಾಡಲು ಸೂಚಿಸಿದ್ದೇನೆ ಜೊತೆಗೆ ಎಲ್ಲಾ ನೀರಿನ ಟ್ಯಾಂಕುಗಳನ್ನು ಸ್ವಚ್ಛಗೊಳಿಸುವಂತೆ ಸಿಬ್ಬಂದಿಗಳಿಗೆ ಆದೇಶ ನೀಡಿದರು ಮತ್ತು ವಡಗೇರಾ ಪಟ್ಟಣದ ಮೂಲಭೂತ ಸೌಕರ್ಯಗಳಿಗೆ ಮೊದಲು ಆದ್ಯತೆ ನೀಡುತ್ತೇನೆ ಸಾರ್ವಜನಿಕರ ಸಹಕಾರ ಅವಶ್ಯಕವಾಗಿದೆ ಎಂದು ಹೇಳಿದರು . ಈ ಸಂದರ್ಭದಲ್ಲಿ ನೀರು ನೈರ್ಮಲ್ಯ ಸರಬರಾಜು ಇಲಾಖೆಯ ಅಧಿಕಾರಿ ಬಸವರಾಜ ಐರೆಡ್ಡಿ . ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೇಪ್ಪ ಬೀಳಾರ. ಗ್ರಾಮ ಪಂಚಾಯತ ಸದಸ್ಯ ಶರಣು ಕುರಿ. ಕಾಂಗ್ರೇಸ್ ಮುಖಂಡ ಶಿವರಾಜ ಬಾಗೂರು. ಖಾಜಾಸಾಬ್ ಗೊಂದೇನೂರ. ಮಂಜುನಾಥ ಕೋನಳ್ಳಿ . ಶರಣು .ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು