ವಡಗಾಂವ ಗ್ರಾಮದಲ್ಲಿ ಕಾರ್ಮಿಕರ ದಿನಾಚರಣೆ

ಔರಾದ :ಮೇ.4: ತಾಲೂಕಿನ ವಡಗಾಂವ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.( ಕೋರೋಣ ವಾರಿಯರ್ಸ್ಸ್).

ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸಿದ್ದಾರೆಡ್ಡಿ ಮಾತನಾಡಿ ಜನರ ಸೇವೆ ದೇವರ ಸೇವೆ, ಸಂಕಷ್ಟದ ಸಂದರ್ಭದಲ್ಲಿ ವೈದ್ಯರು ನಿಜವಾದ ಸೇವೆಯನ್ನು ಸಲ್ಲಿಸುವ ಮೂಲಕ ಸೇವೆಗೈಯುತ್ತಿದ್ದಾರೆ ,ವೈದ್ಯರ ಸೇವೆ ಜನರ ಆರೋಗ್ಯ ಕಾಪಾಡುವುದು ಅದು ನಾವು ವೈದ್ಯರು ಮಾಡುತ್ತಿದ್ದೇವೆ ಎಂದು ಹೆಮ್ಮೆಪಟ್ಟರು.

ಪ್ರಾಂಶುಪಾಲ್ ನವೀಲ ಕುಮಾರ್ ಉತ್ಕಾರ ಮಾತನಾಡಿ ಇಂದಿನ ಕಾಲದಲ್ಲಿ ವೈದ್ಯರೆ ನಮಗೆ ದೇವರು, ನಮ್ಮ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಸಿದ್ದಾರೆಡ್ಡಿ ಅವರ ಸೇವೆ ಅಮೋಘವಾಗಿದೆ ಎಂದು ಹೇಳಿದರು. ಕಾರ್ಮಿಕರ ಕಾಯಕವೆಂದರೆ ವೈದ್ಯರು, ಪೊಲೀಸರು ,ಆಶಾ ಕಾರ್ಯಕರ್ತರು ಸ್ವಚ್ಛತಾ ಕರ್ಮಿಗಳು ನಿಜವಾದ ಕಾಯಕದವರು ಎಂದು ಹೇಳಿದರು.
ಕುರುಕುಂದಾ ಗ್ರಾಮ ಪಂಚಾಯತ್(ಶಹಪುರ್) ಪಿಡಿಒ ಶಿವಾಜಿ ಚೌವ್ಹಾಣ ಮಾತನಾಡಿ ವೈದ್ಯರು ಮತ್ತು ಸ್ವಚ್ಛತಾ ಕರ್ಮಿಗಳನ್ನು ಈ ಸಂದರ್ಭದಲ್ಲಿ ಎಷ್ಟು ಕೊಂಡಾಡಿದರೂ ಕಡಿಮೆ . ಸನ್ಮಾನ ಮಾಡುವುದು ದೊಡ್ಡದಲ್ಲ ವೈದ್ಯರು ಮಾಡುವ ಸೇವೆ ದೊಡ್ಡದು.

ಈ ಸಂದರ್ಭದಲ್ಲಿ ಗೌರವ ಸನ್ಮಾನ ಡಾ. ಸಿದ್ದಾರೆಡ್ಡಿ ವೈದ್ಯಾಧಿಕಾರಿ, ಸುಜಾತ ಮಸ್ಕಲೆ ನರ್ಸ್ ಸ್ಟಾಫ, ರವಿ ಮಡಿವಾಳ್ ಸ್ವಚ್ಛತಾ ಕರ್ಮಿ. ಗೌರವ ಉಪಸ್ಥಿತರು ಅಂಬರೀಶ್ ಮಡಿವಾಳ ಅಬಕಾರಿ ಪೇದೆ ಬೆಂಗಳೂರು, ರಮೇಶ್ ಉತ್ಕಾರ ಸಂಪನ್ಮೂಲ ಶಿಕ್ಷಕರು, ಸೂರ್ಯಕಾಂತ್ ಪಾಟೀಲ್, ಶಿವಾನಂದ ಮಸ್ಕಲ್ ,ಪ್ರವೀಣ್ ಮಸ್ಕಲೆ ಇತರರು ಇದ್ದರು.