ವಡಗಾಂವನಲ್ಲಿ ಆನೇಕಾಲು ರೋಗ ನಿರ್ಮೂಲನೆ ಔಷಧಿ ವಿತರಣೆ

ಬೀದರ.ಮಾ.28: ಜಿಲ್ಲಾಧಿಕಾರಿಗಳು ಮತ್ತು ಡಿ.ಹೆಚ್.ಓ ಅವರ ನಿರ್ದೇಶನದಂತೆ ನಿನ್ನೆ ಔರಾದ್ ತಾಲೂಕಿನ

ವಡಗಾಂವ್ ಗ್ರಾಮದಲ್ಲಿ ಡೋಸ್ ಸ್ಟೀಕ್ ಪ್ರಕಾರ ಆನೇಕಾಲು ರೋಗ ನಿರ್ಮೂಲನೆ ಔಷಧಿ ವಿತರಣೆ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಲಾಯಿತು.

ಈ ವೇಳೆ ಜಿಲ್ಲಾ ಕುಷ್ಟರೋಗ ನಿರ್ಮೂಲನೆ ಅಧಿಕಾರಿ ಡಾ.ಮಹೇಶ ಬಿರಾದಾರ ಅವರು ಮಾತನಾಡಿ, ಈ ಆನೇಕಾಲು ಔಷಧಿ ಸೇವನೆಯಿಂದಾಗಿ ಯಾವುದೆ ಅಡ್ಡ ಪರಿಣಾಮಗಳು ಇರುವುದಿಲ್ಲ. ಈ ಔಷಧಿಯಿಂದ ಕೊವಿಡ್-19ದಿಂದಲು ಕೂಡ ರಕ್ಷಣೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸಂಜೀವಕುಮಾರ ಪಾಟೀಲ ಮಾತನಾಡಿ, ಸಣ್ಣಪುಟ್ಟ ಔಷಧಿ ಮತ್ತು ಚಿಕಿತ್ಸೆ ಪಡೆಯಲು ಸಾರ್ವಜನಿಕರು ಆಸ್ಪತ್ರೆಗಳಿಗೆ ಅಲೆಯುವುದರ ಬದಲಾಗಿ ಈ ಸಂಜೀವಿನಿ ಓಪಿಡಿ ಮೂಲಕ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಜನರು ಕೂಡ, ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡುಗಳ ಅನುಕೂಲತೆಗಳನ್ನು ಪಡೆದುಕೊಳ್ಳಬೇಕು ಎಂದು ಇದೆ ವೇಳೆ ತಿಳಿ ಹೇಳಲಾಯಿತು.

ಈ ಸಂದರ್ಭದಲ್ಲಿ ವಡಗಾಂವ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.