ವಡಕೆಹಳ್ಳದಲ್ಲಿ ಕಿಚ್‍ಗುತ್ ಮಾರಮ್ಮಕಮಾನು ಉದ್ಘಾಟನೆ

ಹನೂರು:ಏ:02: ತಾಲ್ಲೂಕಿನ ವಡಕೆಹಳ್ಳದಲ್ಲಿ ಕಿಚ್‍ಗುತ್ ಮಾರಮ್ಮಕಮಾನು ಉದ್ಘಾಟನೆಯನ್ನು ಮ.ಮ.ಬೆಟ್ಟ ಸಾಲೂರು ಮಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನಸ್ವಾಮಿ ಉದ್ಘಾಟಿಸಿದರು.
ಮ.ಮ. ಬೆಟ್ಟ ಪ್ರಾಧಿಕಾರದ ನೌಕರರ ಸಂಘದ ಗೌರವ ಅಧ್ಯಕ್ಷ ಕೆ. ಮಹಾದೇವಸ್ವಾಮಿ ಅವರ ಪತ್ನಿ ದಿ. ರತಮ್ಮಅವರ ಹೆಸರಿನಲ್ಲಿ ಸ್ವತಃ ಖರ್ಚಿನಿಂದ ಕಿಚ್‍ಗುತ್ ಮಾರಮ್ಮಕಮಾನನ್ನು ನಿರ್ಮಾಣ ಮಾಡಿದ್ದರು.
ಶಾಂತಮಲ್ಲಿಕಾರ್ಜುನ ಮಾತನಾಡಿ, ಕಿಚ್ ಗುತ್ ಮಾರಮ್ಮ ದೇವಾಲಯಕ್ಕೆ ರಾಜ್ಯವ ಲ್ಲದೇ ಅಂತರಾಜ್ಯದಿಂದಲೂ ಭಕ್ತಾಧಿಗಳು ಆಗ ಮಿಸುತ್ತಾರೆ ಭಕ್ತಾಧಿಗಳು ದೇವಾಲಯಕ್ಕೆ ಹೋ ಗಲು ಅನುಕೂಲವಾಗುವಂತೆ ಕಮಾನನ್ನು ನಿರ್ಮಾ ಣ ಮಾಡಿರುವುದು ಶ್ಲಾಘನೀಯವಾದದ್ದು, ಹೊಸ ದಾಗಿ ಬರುವ ಭಕ್ತಾಧಿಗಳ ಗೊಂದಲ ದೂರವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮ.ಮ. ಬೆಟ್ಟಪ್ರಾಧಿಕಾರದ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್, ಉಪಾ ಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಗ್ರಾ.ಪಂ. ಅಧ್ಯಕ್ಷ ಮಾದೇಶಯ್ಯ, ಸಾಲೂರು ಮಠದ ಮ್ಯಾನೆ ಜರ್‍ಟೆಂಟ್ ನಾಗಣ್ಣ, ಬಿಜೆಪಿ ಬೂತ್ ಕಮಿಟಿಯ ಜಯಂತ್‍ಕುಮಾರ್ ಹಾಗೂ ವಡಕೆಹಳ್ಳದ ಗ್ರಾಮಸ್ಥರು ಇದ್ದರು.