
ಹಗರಿಬೊಮ್ಮನಹಳ್ಳಿ;ಜ.11 ತಾಲೂಕಿನ ವಟ್ಟಮ್ಮನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸ್ನೇಹಿ ಗ್ರಾಮಸಭೆಯನ್ನು ಹಮ್ಮಿಕೊಳ್ಳಲಾಯಿತು .
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಮನೀರ್ ಸಾಬ್ ಸಿ ಆರ್ ಪಿ ಹನಿಸಿ ಮಾತನಾಡಿ ಮಕ್ಕಳನ್ನು ದುಡಿಮೆಯಿಂದ ತಪ್ಪಿಸಿ ಶಾಲೆಗೆ ಕಳಿಸಿ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ದುಡಿಸಬೇಡಿ ಅವರಿಗೆ ಉತ್ತಮವಾಗಿರುವ ಶಿಕ್ಷಣವನ್ನು ಕೊಡಿ ಎಂದು ಗ್ರಾಮದ ಪೋಷಕರಿಗೆ ತಿಳಿಸಿದರು.
ಕಾರ್ಯಕ್ರಮವನ ಉದ್ಘಾಟಿಸಿದರು.ನಂತರ ಕಾರ್ಯಕ್ರಮದಲ್ಲಿ ವೀರೇಶ ಹಿರ್ಲಿಂಗಪ್ಪನವರ್ ಮಾತನಾಡಿ ತಾಲೂಕಿನಲ್ಲಿ ನಿತ್ಯ ಬಾಲಕಾರ್ಮಿಕರು ಹೆಚ್ಚಾಗುತ್ತಿದ್ದಾರೆ. ಆಶಾ ಕಿರಣ ಸಮಾಜಾಭಿವೃದ್ಧಿ ಸಂಸ್ಥೆಯು ಕಳೆದ 6 ತಿಂಗಳಿನಿಂದ ಸಮೀಕ್ಷೆಯಲ್ಲಿ ತೊಡಗಿಕೊಂಡಿದೆ .ಬಾಲಕಾರ್ಮಿಕ ವಿರೋಧಿ ಕಾನೂನನ್ನು ಜಾರಿಗೆಗೊಳಿಸಿದ್ದರೂ ಬಾಲಕಾರ್ಮಿಕ ಸಂಖ್ಯೆ ಸದ್ದಿಲ್ಲದೆ ಹೆಚ್ಚಾಗುತ್ತಲೆ ಇವೆ. ಕಾನೂನನ್ನು ಉಲ್ಲಂಘಿಸುವವರ ವಿರುದ್ದ ಕ್ರಮ ಜರುಗಿಸುವ ಕುರಿತು ಎಲ್ಲ ಬಗೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಈ ಪದ್ದತಿಗೆ ನಿಲುಗಡೆ ತರಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿ ಚಂದ್ರಗೌಡ ಮುಖ್ಯಗುರುಗಳು ,ದೈಹಿಕ ಶಿಕ್ಷಕರಾದ ರಾಜು ,ಕೊಟ್ರೇಶ್ ಹೆಚ್ , ಉದಯ್ ಕುಮಾರ್ ,ಶ್ರೀಮತಿ ಸುಮಿತ್ರ, ಇಸ್ಮಾಯಲ್,ಮೆಘನಾಯ್ಕ,ವೀರಭದ್ರಪ್ಪ,ಗುರುಪಾದಪ್ಪ, ಇತರರಿದ್ದರು ಕಾರ್ಯಕ್ರದಲ್ಲಿ ಮಕ್ಕಳು ಬಾಲಕಾರ್ಮಿಕತೆ ಮತ್ತು ಬಾಲ್ಯವಿವಾಹದ ಬಗ್ಗೆ ಕಿರು ನಾಟಕ ಪ್ರದರ್ಶಿಸಿದರು.
ರಾಮಚಂದ್ರಪ್ಪ ಬಡ್ತಿ ಮುಖ್ಯಗುರು ಸ್ವಾಗತಿಸಿದರು ನಿರೂಪಣೆಯನ್ನು ಕೊಟ್ರೇಶ್ ಮತ್ತು ಪ್ರಾರ್ಥನೆಯನ್ನು ಶಾಲ ಮಕ್ಕಳು ನೆರವೇರಿಸಿದರು.