ವಜ್ರ ಲೇಪನ ಕವಚಗಳ ಮೆರವಣಿಗೆ

(ಸಂಜೆವಾಣಿ ವಾರ್ತೆ)
ಮುನವಳ್ಳಿ,ಆ21 : ಪಟ್ಟಣದ ಶ್ರೀ ಪಂಚಲಿಂಗೇಶ್ವರನ ಮತ್ತು ಶ್ರೀ ವಸ್ತಿ ವೀರಭದ್ರೇಶ್ವರನ ವಜ್ರ ಕವಚಗಳ ಸಮರ್ಪಣಾ ಶೋಭಾಯಾತ್ರೆ ರವಿವಾರ ಸಂಜೆ ಜರುಗಿತು.
ಡಾ|| ವೆಂಕಟೇಶ ನಾಯಿಕ ಭಕ್ತಿಕಾಣಿಕೆಯಾಗಿ ನೀಡಿರುವ ಶ್ರೀ ಪಂಚಲಿಂಗೇಶ್ವರನ ಮತ್ತು ಶ್ರೀ ವಸ್ತಿ ವೀರಭದ್ರೇಶ್ವರನ ವಜ್ರ ಲೇಪನದ ಕವಚಗಳ ಅದ್ದೂರಿ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ವಿವಿಧ ವಾಧ್ಯ ಮೇಳಗಳೊಂದಿಗೆ ಗಾಂಧಿಚೌಕ ಹತ್ತಿರ ಶ್ರೀ ವಸ್ತಿ ವೀರಭದ್ರೇಶ್ವರ ದೇವಸ್ಥಾನ ತಲುಪಿ ಶ್ರೀ ವೀರಭದ್ರೇಶ್ವರನ ವಜ್ರ ಕವಚವನ್ನು ಸಮರ್ಪಿಸಿದರು. ನಂತರ ಬಜಾರ ರಸ್ತೆ ಮೂಲಕ ಬಸ್‍ಸ್ಟ್ಯಾಂಡ ಮಾರ್ಗವಾಗಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ತಲುಪಿ ಶ್ರೀ ಪಂಚಲಿಂಗೇಶ್ವರನ ಐದು ಮೂರ್ತಿಗಳ ವಜ್ರ ಕವಚವನ್ನು ಸಮರ್ಪಿಸಿದರು. ವಿಶೇಷ ಪೂಜೆ ಜರುಗಿತು.
ವೀರಭದ್ರೇಶ್ವರ ಹಾಗೂ ಶ್ರೀ ಪಂಚಲಿಂಗೇಶ್ವರ ಕಮಿಟಿಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.