
ಕಲಬುರಗಿ,ಆ.24-33/11 ಕೆ.ವಿ.ಸರಸಂಬಾ ವಿದ್ಯುತ್ ಕೇಂದ್ರದ ಆಪರೇಟರ್ ಮಲ್ಲಿನಾಥ ವಿ.ಪಾಟೀಲ ಅವರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ಮತ್ತು ಅವರನ್ನು ಪುನ; ಕೆಲಸದಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘದ (ಎಐಯುಟಿಯುಸಿ) ನೇತೃತ್ವದಲ್ಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಮುಂದೆ ಇಂದು ಪ್ರತಿಭಟನಾ ಧರಣಿ ನಡೆಸಲಾಯಿತು.
ಸಂಘದ ಜಿಲ್ಲಾ ಸಂಚಾಲಕ ಎಸ್.ಎಂ.ಶರ್ಮಾ, ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಎನ್.ಎಸ್., ಮಲ್ಲಿನಾಥ ಪಾಟೀಲ, ವಿ.ಜಿ.ದೇಸಾಯಿ, ಬಸವರಾಜ ಸಿರಸಂಗಿ, ಮಹಾದೇವ ಕುಮಟಗಿ, ಸುರೇಶ ಸರಡಗಿ, ದತ್ತು ನೆಲ್ಲೂರ, ಸಂತೋಷಕುಮಾರ ಸೇರಿದಂತೆ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.