ವಚನ ಸಾಹಿತ್ಯವೆನ್ನುವುದಕ್ಕಿಂತ ವಚನ ಸಂಸ್ಕೃತಿ ಎನ್ನುವುದು ಸೂಕ್ತ ಡಾ. ಸುರೇಶ ಸಗರದ

ರಾಯಚೂರು.ಜು.೩೦- ವಚನ ಸಾಹಿತ್ಯ ಲೌಕಿಕ ಮತ್ತು ಆಧ್ಯಾತ್ಮಿಕ ವಿಚಾರಗಳ ಜೊತೆಗೆ ವೈಜ್ಞಾನಿಕ ವಿಚಾರಗಳನ್ನು ಒಳಗೊಂಡಿದೆ. ವೈದ್ಯ ಸಂಗಣ್ಣನವರ ಒಂದೊಂದು ವಚನಗಳು ವೈದ್ಯಶಾಸ್ತ್ರದ ಆಳ ಅಗಲ ಹೊಂದಿದ್ದು ಪ್ರತಿಯೊಂದು ವಚನ ವೈದ್ಯರು ಬರೆದುಕೊಟ್ಟ ಔಷಧ ಚೀಟಿಯಂತಿದೆ. ಎಂದು ವಚನ ಸಾಹಿತ್ಯ ಪ್ರಸ್ತುತ ಸಮಾಜಕ್ಕೆ ಸಂಸ್ಕೃತಿಯಾಗಿ ಮಾರ್ಪಡಬೇಕು. ಎಂದು ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಡಾ.ಸುರೇಶ ಸಗರದ ಖ್ಯಾತ ಹೃದಯರೋಗ ತಜ್ನರು ಒಪೆಕ್ ಆಸ್ಪತ್ರೆ ರಾಯಚೂರು ಇವರು ಕನ್ನಡ ಭವನದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಅಂಗವಾಗಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಕುಮಾರಿ ಸ್ಮಿತಾ ಅಕ್ಕನವರು ಲಿಂಗೈಕ್ಯ.ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ವಚನ ಸಾಹಿತ್ಯ ಭಾರತೀಯ ಉಪನಿಷತ್ತುಗಳ ಪುನರಾವತಾರವೇ ವಚನೋಪಪನಿಷತ್ತು. ವಚನಕಾರರ ಅಗಾಧ ಜ್ಞಾನ ಅವರ ಸರಳ ಬರವಣಿಗೆಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ವಚನ ಸಾಹಿತ್ಯಾಸಕ್ತರಿಗೆ ಸ್ವರಚಿತ ವಚನ ವಾಚನಕ್ಕೆ ವೇದಿಕೆ ಕಲ್ಪಿಸಿದ್ದು ಸುಮಾರು ೧೦ ಜನ ವಚನ ವಾಚಿಸಿ ಪ್ರಮಾಣ ಪತ್ರ ಮತ್ತು ಪುಸ್ತಕವನ್ನು ಗೌರವ ಕಾಣಿಕೆಯಾಗಿ ಪಡೆದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಶ್ರೀ ರಾಮಣ್ಣ ಹವಳೆ, ಲಕ್ಷ್ಮಿ ದೇವಿ ಶಾಸ್ತ್ರೀ, ಶ್ರೀಮತಿ ದಾನಮ್ಮ ಸುಭಾಶ್ಚಂದ್ರ ಮತ್ತು ಶ್ರೀ ವೆಂಕಟೇಶ ಬೇವಿನ ಬೆಂಚಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕದಳಿ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಲಲಿತಾ ಡಾಕ್ಟರ್ ಎಂ ಬಸನಗೌಡ ಮಾತನಾಡಿ ವಚನ ಸಾಹಿತ್ಯ ಯುವ ಜನಾಂಗಕ್ಕೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಈ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದರು. ಕಾರ್ಯಕ್ರಮ ಕು. ಸಹನಾ ಬರೂರ ಹಾಗೂ ಸಂಗಡಿಗರ ವಚನ ಗಾಯನದೊಂದಿಗೆ ಆರಂಭಗೊಂಡಿತು. ಶ್ರೀಮತಿ ತೆರೇಸಾ ಸ್ವಾಗತಿಸಿದರೆ ಶ್ರೀಮತಿ ರೇಖಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.ಶ್ರೀ ಮಹಮ್ಮದ್ ಜಲೀಲ್ ವಂದಿಸಿದರು.ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.