
ಕಲಬುರಗಿ,ಜು.19- ಕಳೆದ 12 ನೆಯ ಶತಮಾನದ ನಂತರ ಕತ್ತಲೆಯಲ್ಲಿದ್ದ ವಚನ ಸಾಹಿತ್ಯದ ಮೆಟ್ಟಿಲುಗಳ ಮೇಲೆ ಹುಣ್ಣುಮೆಯ ಚಂದಿರನಂತೆ ದಿವ್ಯ ಬೆಳಕು ಚೆಲ್ಲಿದ ವಚನ ಪಿತಾಮಹ ಫ.ಗು.ಹಳಕಟ್ಟಿ, ವಚನ ಸಂಗ್ರಹ, ಸಂಪಾದನೆ, ಮುದ್ರಣ ಕಾರ್ಯ ಮಾಡಿ ಸಾಹಿತ್ಯಕ್ಕೆ 21 ನೇ ಶತಮಾನದಲ್ಲಿ ಶಾಸ್ತ್ರೀಯ ವಾಗಿ ರೂಪಿಸಿ, ವಚನ ಸಾಹಿತ್ಯಕ್ಕೆ ಜೀವ ತುಂಬಿದ ಮಹಾಪುರುಷ ಎಂದರೆ ತಪ್ಪಾಗದು ಎಂದು ದಿವ್ಯಾ ಸಾನಿಧ್ಯ ವಹಿಸಿ ಮಾತನಾಡಿದ ಮ.ನಿ.ಪ್ರ.ಶ್ರೀ ಸಿದ್ಧಲಿಂಗ ಸ್ವಾಮಿಗಳು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಯಡ್ರಾಮಿ ಹಾಗೂ ಶ್ರೀ ಮತಿ ಇಂದಿರಾಗಾಂಧಿ ವಸತಿ ಶಾಲೆ ಸುಂಬಡ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ, ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ರವರ 143 ನೆಯ ಜಯಂತೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದ ಸಾಧಕರಿಗೆ ತವನಿಧಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮನೆಯ ಗೋಡೆಯಲ್ಲಿ, ಜಗುಲಿಯಲ್ಲಿ (ದೇವರ ಮನೆ) ಯಲ್ಲಿ, ಅವತಿಟ್ಟ ವಚನ ಕಟ್ಟುಗಳನ್ನು ಕನ್ನಡಿಗನ ಪ್ರತಿ ಹೃದಯ ಮಂದಿರದಲ್ಲಿ (ತವನಿಧಿ ಯಂತೆ) ಬೆಳಕು ಚೆಲ್ಲಿದ ಕೀರ್ತಿ ಫ.ಗು.ಹಳಕಟ್ಟಿ ರವರೆಗೆ ಸಲ್ಲುತ್ತದೆ ಎಂದರು. ಆ ಮೂಲಕ ಫ.ಗು.ಹಳಕಟ್ಟಿ ಯವರು ಮರುಭೂಮಿಯ ಓಯಾಸಿಸ್ ನಂತೆ ಹೊರಬರುವಲ್ಲಿ ಹಾನಗಲ್ ಕುಮಾರ ಮಹಾಸ್ವಾಮಿಗಳ ಪ್ರೇರಣೆ ಮತ್ತು ಮಾರ್ಗದರ್ಶನ ಕಾರಣವಾಯಿತು ಎಂದರು.
ನಂತರ, ಉಪನ್ಯಾಸ ನೀಡಿದ ಬಸಯ್ಯ ಕಕ್ಕೇರಾ ರವರು ಹಳಕಟ್ಟಿ ರವರು, ತಮ್ಮ ಸ್ವಂತ ಮನೆಯನ್ನೇ ಮಾರಿ ತಾವು ಸಂಪಾದಿಸಿ, ಮುದ್ರಿಸಿದ ಸಾವಿರಕ್ಕೂ ಹೆಚ್ಚು ವಚನಗಳ ಕಟ್ಟುಗಳನ್ನು ಪರೀಷಕರಿಸಿ, ಮುದ್ರಿಸಿ ವಚನ ಸಾಹಿತ್ಯ ವನ್ನು ಉಳಿಸಿಕೊಟ್ಟ ಪುಣ್ಯ ಪುರುಷ, ಯುಗ ಪುರುಷ ಫ.ಗು.ಹಳಕಟ್ಟಿ ಯವರೆ ನಮಗೆ ರತ್ನ, ತಮ್ಮ ಬಾಲ್ಯದ ದಿನಗಳಲ್ಲಯೇ ಸಾಹಿತ್ಯದ ಅಭಿರುಚಿ, ಆಸಕ್ತಿ ಅವರಿಗೆ ಇತ್ತು. ತಮ್ಮ ವಕೀಲಿ ವೃತ್ತಿಯೊಂದಿಗೆ, ಪ್ರವರ್ತಕ ರಾಗಿ, ವಚನ ಸಾಹಿತ್ಯದ ಸಂಪಾದನೆ, ವಿಮರ್ಶೆ, ಪ್ರಚಾರ ಮಾಡಲು ಎಷ್ಟೋ ಅಡತಡೆಗಳನ್ನು ಲೆಕ್ಕಿಸದೆ ವಚನ ಸಾಹಿತ್ಯ ಕಟ್ಟುವಲ್ಲಿ ಯಶಸ್ವಿಯಾದ ಫ.ಗು.ಹಳಕಟ್ಟಿಯವರು, ಕನ್ನಡ ಸಾಹಿತ್ಯ ಪರಂಪರೆ ಶ್ರೀಮಂತಗೊಳಿಸಿದ ಕೀರ್ತಿ ಫ. ಗು.ಹಳಕಟ್ಟಿ ರವರದು. ಆ ಮೂಲಕ ಶರಣರ ವಚನಗಳನ್ನು ಪ್ರತಿಯೊಬ್ಬ ಕನ್ನಡಿಗನ ಮನೆ ಮನ ತಲುಪಲು ವೈಚಾರಿಕ ನಿಲುವು ಪ್ರಕಟಿಸಿ, ತಮ್ಮ ಪ್ರತಿಭೆ ಯಿಂದ ಎಲ್ಲೆಡೆ ಬೆಳಕು ಚೆಲ್ಲಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನ್ಯಾಯವಾದಿ ವಿನೋದ ಕುಮಾರ ಜೇನವೆರಿ ಮಾತನಾಡುತ್ತಾ, ಬೆಳೆಯುವ ಮಕ್ಕಳಲ್ಲಿ ವಚನ ಸಾಹಿತ್ಯದ ಬಗ್ಗೆ ಶರಣ ಸಾಹಿತ್ಯ ಕುರಿತು ತಿಳುವಳಿಕೆ ಮೂಡಿಸಿದರೆ ಮಾತ್ರ ಅವರ ಜೀವನ ಸಾರ್ಥಕತೆ ಕಡೆ ಸಾಗುತ್ತದೆ ಎಂದರು, ಅಲ್ಲದೆ ಈ ಭಾಗದಲ್ಲಿ ಎರಡು ದಶಕಗಳಿಂದ ಫ.ಗು.ಹಳಕಟ್ಟಿ ಯವರ ಜೀವನ ಚರಿತ್ರೆಯನ್ನು ಪ್ರಸಾರ ಮಾಡುವಲ್ಲಿ ಸೇವೆ ಸಲ್ಲಿಸಿ, ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು. ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಟಾನದ ವತಿಯಿಂದ ಇದೆ ವರ್ಷದಿಂದ ತವನಿಧಿ ಹೆಸರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಗಳ್ಳನ್ನು ಗುರುತಿಸಿ ನೀಡಲಾಗುತ್ತದೆ ಎಂದು ತಿಳಿಸಿದರು.
ತವನಿಧಿ ಪ್ರಶಸ್ತಿಗೆ ಭಾಜನರಾದರು ಡಾ.ಕೆ.ಕೆ.ದೇಸಾಯಿ (ಸಾಹಿತ್ಯ) ಬಸವರಾಜ್ ಬೋರಗಿ ಶಿಕ್ಷಕರು (ಜಾನಪದ ಸಾಹಿತ್ಯ) ಬಸವರಾಜ್ ಗೋಗಿ (ಸಮಾಜ ಸೇವೆ) ಈರಣ್ಣ ಕಲಕೇರಿ ಯಾಳಗಿ (ಮಾದ್ಯಮ)
ಶ್ರೀಮತಿ ಶಾರದಾ ಶಿಕ್ಷಕರು (ಶಿಕ್ಷಣ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ನಾಗಪ್ಪ ಸಜ್ಜನ ರವರು ವಹಿಸಿದ್ದರು, ಈ ವಿಶೇಷ ಕಾರ್ಯಕ್ರಮ ದಲ್ಲಿ ಹಿರಿಯ ಸಾಹಿತಿ ಶರಣಗೌಡ ಹೀರೆಗೌಡ್ರ, ಬಸವರಾಜ್ ಖಾನಗೌಡರ, ರಾಜೇಂದ್ರ ಮಾಡಬಾಳ, ಜಿಲ್ಲಾ ಕ.ಸಾ.ಪ ದ ಸಹ- ಕಾರ್ಯದರ್ಶಿಗಳು, ಬಸವರಾಜ್ ದುದ್ದಣಗಿ ಪ್ರಾಂಶುಪಾಲರು, ಇಂದಿರಾ ವಸತಿ ಶಾಲೆ, ಸುಂಬಡ ಚಂದ್ರಶೇಖರ್ ಮ್ಯಾಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಕುರಹಿನ ಶೆಟ್ಟಿ ಸಮಾಜ, ನಿಂಗಣ್ಣಗೌಡ ಎಸ್ ಪೆÇೀಲಿಸ್ ಪಾಟೀಲ್ , ಬಸವರಾಜ್ ಅ.ಬಿರಾದಾರ, ರಂಜಿತ ಸಿಂಗ್, ಕಾರ್ಯಕ್ರಮವನ್ನು ರುದ್ರಗೌಡ ಎಸ್. ಪೆÇೀಲಿಸ್ ಪಾಟೀಲ್ ಅರಳಗುಂಡಗಿ ನಿರೂಪಿಸಿದರು,
ಕೊನೆಯಲ್ಲಿ ಯಾಡ್ರಾಮಿ ಕ.ಸಾ.ಪ ಕಾರ್ಯದರ್ಶಿಗಳಾದ ರೇವಣಸಿದ್ದಯ್ಯ ಜಿ ಪುರಾಣಿಕಯವರು ವಂದಿಸಿದರು.