ವಚನ ಸಾಹಿತ್ಯದ ತವನಿಧಿ ಹಳಕಟ್ಟಿ: ಬಾಳಿ ಬಣ್ಣನೆ

ಚಿತ್ತಾಪೂರ: ಜು.29:ವಚನ ಸಾಹಿತ್ಯದ ಸಂಶೋಧನೆ ಹಾಗೂ ಪ್ರಕಟಣೆಗೆ ತಮ್ಮ ಇಡೀ ಬದುಕನ್ನೆ ಸಮರ್ಪಿಸಿದವರು ಡಾ.ಫ.ಗು.ಹಳಕಟ್ಟಿಯವರು ವಚನಸಾಹಿತ್ಯದ ತವನಿಧಿಯಾಗಿದ್ದಾರೆ ಎಂದು ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ ರಾವೂರ ಹೇಳಿದರು.

ಪಟ್ಟಣದ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕಸಪ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಚನ ಸಾಹಿತ್ಯಕ್ಕೆ ಡಾ.ಫ.ಗು.ಹಳಕಟ್ಟಿಯವರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ಹಾಗೂ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರಿಗೆ ಸಾನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು. ದೀಪವೊಂದು ತಾನು ಸುಟ್ಟು ಸುತ್ತಲೂ ಬೆಳಕು ನೀಡುವಂತೆ ತಮ್ಮನ್ನು ತಾವೇ ತ್ಯಾಗ ಮಾಡಿ ವಚನ ಸಾಹಿತ್ಯವನ್ನು ಜಗತ್ತಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ ಎಂದರು.

ಮನೆ ಮನೆಗೆ ಬರಿಗಾಲಿನಲ್ಲಿ ಅಲೆದಾಡಿದರು. ಮನೆಯ ಜಗಲಿಗಳನ್ನು ಹುಡುಕಾಡಿ ಯಾರೆಲ್ಲಾ ನಿಂದಿಸಿದರೂ ಚಿಂತಿಸದೆ ಕೆಚ್ಚೆದೆಯಿಂದ ವಚನ ಸಾಹಿತ್ಯದ ಉಳಿವಿಗೆ ಕಂಕಣಬದ್ದರಾದವರು ಹಳಿಕಟ್ಟಿಯವರು ವಚನಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಪ್ರಕಟಿಸಿ ಜನಸಾಮಾನ್ಯರಿಗೆ ತಲುಪಿಸಿದರು. ಬಡತನ ಬೆನ್ನಿಗಿದ್ದರೂ ಲೆಕ್ಕಿಸದೆ ವಚನಗಳ ಉಳಿವಿಗಾಗಿ ತಮ್ಮನ್ನು ತಾವೇ ಸಮರ್ಪಿಸಿಕೊಂಡರು. ವಚನ ಗುಮ್ಮಟವೆಂದು ಹೆಸರಾಗಿದ್ದ ಫಕೀರಪ್ಪ ಹಳಕಟ್ಟಿಯವರು ತಮ್ಮ ಹರಿದ ಅಂಗಿಯ ಮೇಲೆ ಕೋಟು ಹಾಕಿಕೊಂಡು ಬಡತನ ಮುಚ್ಚಿಕೊಂಡು ಸಾಹಿತ್ಯಕ್ಕೆ ಜೀವ ನೀಡಿದ್ದರು ಎಂದು ಹೇಳಿದರು.

ಕಸಾಪ ಗೌರವ ಸಲಹೆಗಾರ ವೀರಣ್ಣಗೌಡ ಪರಸರೆಡ್ಡಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪೆÇ್ರೀ. ಯಶವಂತರಾಯ ಅಷ್ಟಗಿ. ಜಿಲ್ಲಾ ಕಸಾಪ ಪ್ರತಿನಿಧಿ ಡಾ.ಕೆ.ಗಿರಿಮಲ್ಲ, ಮಾತನಾಡಿದರು.

ಸಂಸ್ಥೆಯ ಅದ್ಯಕ್ಷ ಚಂದ್ರಶೇಖರ ಸಜ್ಜನಶೆಟ್ಟಿ ಉದ್ಘಾಟಿಸಿದರು. ಬಿಜೆಪಿ ನಗರ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜೇಂದ್ರ ಪ್ರಸಾದ, ಕಸಾಪ ತಾಲೂಕು ಗೌರವ ಕೋಶಾದ್ಯಕ್ಷ ವೀರಣ್ಣ ಸುಲ್ತಾನಪುರ. ಪ್ರಮುಖರಾದ ಶಾಂತಕುಮಾರ ಮಳಖೇಡ, ಚಂದ್ರಶೇಖರ ಉಟಗೂರ, ನಾಗಣ್ಣ ಇವಣಿ, ಉದಯಕುಮಾರ ಸಾಗರ, ಮಧುಮತಿ ಕೊರ್ಟಕಿ, ಚಂದ್ರಶೇಖರ ಲೇವಡಿ, ಸಿದ್ದಯ್ಯಶಾಸ್ತ್ರೀ ನಂದೂರಮಠ, ನಿಂಗಪ್ಪ ಗೋಡೆಕರ್, ನರಸಿಂಹ ಆಲಮೇಲಕರ್, ರೇವಣಸಿದ್ದಪ್ಪ ರೋಣದ, ದೇವಿಂದ್ರಪ್ಪ ಇಮಡಾಪುರ, ಕಸ್ತೂರಿ ಪಾಟೀಲ, ಸಾಬಣ್ಣ ಪೂಜಾರಿ ಉಪಸ್ಥಿತರಿದ್ದರು.
ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ ಪ್ರಾಸ್ಥಾವಿಕವಾಗಿ ಮಾತನಾಡಿದರು.
ತಾಲೂಕಿನ ಕಸಾಪ ಹಿರಿಯ ಅಜೀವ ಸದಸ್ಯರಿಗೆ ಹಾಗೂ ವಲಯ ಅದ್ಯಕ್ಷರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಕ ಚಂದ್ರಶೇಖರ ಅವಂಟಿ ನಿರೂಪಿಸಿದರು. ಮನೋಹರ ಹಡಪದ ಸ್ವಾಗತಿಸಿದರು. ರಾಮಣ್ಣ ಡೋಣಗಾಂವ ವಂದಿಸಿದರು.


ಡಾ. ಫ.ಗು. ಹಳಕಟ್ಟಿ ಅವರು ಪತ್ರಕತ್ರರಾಗಿ, ಸಾಹಿತಿಯಾಗಿ, ಸಂಶೋಧಕರಾಗಿ, ರಾಜಕಾರಣಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತ ವಚನ ಸಾಹಿತ್ಯವನ್ನು ಬೆಳಕಿಗೆ ತಂದರು. ಅವರು ಮುಟ್ಟಿದ್ದೇಲ್ಲ ಚಿನ್ನವಾದರೂ ಅವರು ಮಾತ್ರ ಸಾಧಿಸಿ ಮಣ್ಣಾದರು.
-ಪೆÇ್ರೀ.ಯಶವಂತರಾಯ ಅಷ್ಟಗಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ