ವಚನ ಸಾಹಿತ್ಯಕ್ಕೆ ಫ.ಗು.ಹಳಕಟ್ಟಿ ಕೊಡುಗೆ ಅಪಾರ

ಆಳಂದ ;ಜು.28: ವಚನ ಸಾಹಿತ್ಯಕ್ಕೆ ಫ.ಗು.ಹಳಕಟ್ಟಿಯವರು ನೀಡಿರುವ ಕೊಡುಗೆ ಅಪಾರವಾಗಿದ್ದು ಅವರು ಕೇವಲ ಸಂಶೋಧಕ ಆಗಿರದೆ ಕನ್ನಡ ಸಾಹಿತ್ಯದ ಅಮೂಲ್ಯರತ್ನರಾಗಿದ್ದರು ಎಂದು ಉಪನ್ಯಾಸಕ ಸಂಜಯ ಪಾಟೀಲ ಅಭಿಪ್ರಾಯಪಟ್ಟರು.
ಬುಧುವಾರ ಆಳಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ಫ.ಗು ಹಳಕಟ್ಟಿಯವರ ಬದುಕು ಬರಹದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹರಿದು ಸುಟ್ಟು ಹೋಗಿ ಹಾಳಾಗಿದ್ದ ವಚನ ಸಾಹಿತ್ಯದ ಹಸ್ತಪ್ರತಿ, ಓಲೆಗರಿಗಳನ್ನು ಸಂಗ್ರಹಿಸಿ ತಂದು ಜೋಡಿಸಿ ಅವುಗಳಿಗೆ ಹೊಸ ರೂಪ ಕೊಟ್ಟು ವಚನಗಳನ್ನು ಸಂಗ್ರಹಸಿದವರು ಹಳಕಟ್ಟಿಯರು ತಮ್ಮ ವಕೀಲ ವೃತ್ತಿ ಬಿಟ್ಟಿ ತಮ್ಮ ಇಡಿ ಜೀವನ ವಚನ ಸಂಶೋಧನೆಯಲ್ಲೆ ಕಳೆದರು. ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ ಒಂದೊಂದು ವಚನಸಂಕಲನದ ಕೃತಿಯೂ ಇಂದಿಗೂ ಸಾರಸ್ವತ ಲೋಕದ ಮಾಣಿಕ್ಯಗಳೇ ಆಗಿವೆ. ಹಳಕಟ್ಟಿಯವರು ತಾಡೋಲೆಗಳನ್ನು ಸಂಗ್ರಹಿಸುವುದಕ್ಕೆ ಮೊದಲು ಕವಿ ಚರಿತೆಕಾರರು ಗುರುತಿಸಿದ್ದು ಕೇವಲ 50 ವಚನಕಾರರನ್ನು ಮಾತ್ರ.ಫ.ಗು. ಹಳಕಟ್ಟಿಯವರು ತಮ್ಮ ಸಂಶೋಧನೆಯ ಮೂಲಕ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿº
ತಾಲೂಕು ಕಸಾಪ ಅಧ್ಯಕ್ಷ ಹಣಮಂತ ಶೇರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯ ಮೇಲೆ ಡಾ.ರವಿ ಕಂಟೆಕುರೆ, ಪ್ರಭಾಕರ ಸಲಗರೆ, ಶಾಂತಪ್ಪಕೋರೆ ಉಪಸ್ಥಿತರಿದ್ದರು.ಉಪನ್ಯಾಸಕ ಡಾ.ರಾಜಕುಮಾರ ಹಿರೇಮಠ ನಿರೂಪಿಸಿ ವಂದಿಸಿದರು.