
ಆರು ಮುನಿದು ನಮ್ಮನೇನ ಮಾಡುವರು ?
ಊರು ಮುನಿದು ನಮ್ಮನೆಂತು ಮಾಡುವರು?
ನಮ್ಮ ಕುನ್ನಿಗೆ ಕೂಸ ಕೊಡಬೇಡ
ನಮ್ಮ ಸೊಣಗಂಗೆ ತಳಿಗೆಯಲಿಕ್ಕ ಬೇಡ
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ ?
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ _ಬಸವಣ್ಣ,
ಬಸವಣ್ಣನವರು ಸಮಾಜವನ್ನು ತಮ್ಮ ಉಸಿರಾಗಿಸಿಕೊಂಡು ಪ್ರೀತಿಸುತ್ತಿದ್ದವರಿಗೆ ಒಮ್ಮೆ ಅದೇಕೋ ಏನೋ ಸಮಾಜದ ಬಗ್ಗೆ ಬೇಸರವಾದಂತೆ ಕಂಡುಬರುತ್ತದೆ.ಈ ವಚನದ ಮೂಲಕ ತಮ್ಮ ಕೋಪವನ್ನು ಹೊರಹಾಕಿದಂತೆ ಕಂಡುಬರುತ್ತದೆ,ದೇವರು, ಧರ್ಮವನ್ನು ನಂಬಿದವರು ಆಧ್ಯಾತ್ಮದ ಶಕ್ತಿಯ ಬಲವುಳ್ಳವರು ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಜೀವನ ನಡೆಸುವವರ ಬಗ್ಗೆ ಯಾರೇ ಮುನಿಸಿಕೊಂಡರು ನಮ್ಮನ್ನು ಏನೂ ಮಾಡಲಾರರು, ಸಮಸ್ತ ಊರಿನ ಜನರೆ ಕೋಪಮಾಡಿಕೊಂಡು ದೂರವಿದ್ದರು ನಮಗೆ ಯಾವುದೇ ನಷ್ಟವಿಲ್ಲ. ನಮ್ಮಿಂದ ದೂರವಾದರು ನಮ್ಮ ಮಗನಿಗೆ ಹೆಣ್ಣು ಸಹ ಕೊಡಬೇಕಾಗಿಲ್ಲ ನಮ್ಮ ಮನೆಯ ನಾಯಿಗೆ ತಟ್ಟೆಯಲ್ಲಿ ಅನ್ನವನ್ನು ಇಡುವ ಅವಶ್ಯಕತೆಯೂ ಇಲ್ಲ. ಇಂತಹ ಜನರು ಊರಿನ ಬೀದಿಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುವ ಆನೆಯನ್ನು ನೋಡಿದ ಊರಿನ ನಾಯಿಗಳು ಹೆದರಿ ಬೊಗಳಿ ಕೊಳ್ಳುತ್ತ ದೂರ ದೂರ ಹೋಗುವ ಬೆದರುವ ನಾಯಿಗಳಿಗೆ ಸಮಾನರೆಂದು ಬಸವಣ್ಣ ಸಮಾಜದ ಬಗ್ಗೆ ಉಂಟಾದ ಬೇಸರವನ್ನು ಈ ವಚನದ ಮೂಲಕ ಈರೀತಿಯಲ್ಲಿ ಹೊರಹಾಕಿದ್ದಾರೆ,ಮಾನವರು ತಾವು ನಂಬಿದ ದೇವರಲ್ಲಿ ಭಕ್ತಿ, ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಮತ್ತು ಸತ್ಯದ ಹಾದಿಯಲ್ಲಿ ನಡೆಯುವವರನ್ನು ಆ ದೇವರುಯಾವೊತ್ತೂ ಕೈಬಿಡುವುದಿಲ್ಲ ರಕ್ಷಣೆ ಮಾಡಿಯೇ ಮಾಡುತ್ತಾನೆ ಎಂದು ಬಸವಣ್ಣ ತಮ್ಮ ಆರಾಧ್ಯ ದೈವ ಕೂಡಲ ಸಂಗಮ ನಾಥನ ಕರುಣೆ ಇರುವವರೆಗೂ ತಮ್ಮನ್ನು ಯಾರೂ ಏನೂ ಮಾಡಲಾಗದು ಎಂದು ಪ್ರಸ್ತುತ ಪಡಿಸಿದ್ದಾರೆ,
– ಚಿಕ್ಕೋಳ್ ಈಶ್ವರಪ್ಪ, ಹಿರೇಕೋಗಲೂರು.