ವಚನ ಪಿತಾಮಹ ಫ. ಗು ಹಳಕಟ್ಟಿಯವರ ಜಯಂತೋತ್ಸವ

ಭಾಲ್ಕಿ :ಜು,2: ಗುರುಪ್ರಸಾದ ಸoಯುಕ್ತ ಪ್ರೌಢಶಾಲೆಯಲ್ಲಿ ವಚನ ಪಿತಾಮಹ ಫ. ಗು ಹಳಕಟ್ಟಿಯವರ ಜಯಂತೋತ್ಸವ ಆಚರಣೆ ಮಾಡಿ ಮಕ್ಕಳಿಗೆ ಅವರ ಜೀವನ ಚರಿತ್ರೆಯ ಪರಿಚಯ ಮಾಡಿಕೊಡಲಾಯಿತು ಹಾಗೂ ಗುರುಪೂರ್ಣಿಮೆ ನಿಮಿತ್ಯವಾಗಿ ಗುರು ಸಪ್ತಾಹ ಕಾರ್ಯಕ್ರಮವನ್ನು ಗುರುಪ್ರಸಾದ್ ಶಾಲೆಯಲ್ಲಿ ಆಯೋಜನೆ ಮಾಡಿದ್ದು ನಿರಂತರವಾಗಿ ವಚನ ಗಾಯನ ವಚನ ಕಂಠಪಾಠ ಸ್ಪರ್ಧೆ ಭಕ್ತಿಗೀತೆ ಭಾವಗೀತೆ ದೇಶಭಕ್ತಿ ಗೀತೆ ರಂಗೋಲಿ ಸ್ಪರ್ಧೆ ಚಿತ್ರಕಲೆ ಸ್ಪರ್ಧೆ ಸ್ಮರಣ ಶಕ್ತಿ ಸ್ಪರ್ಧೆ ಹೀಗೆ ವಿವಿಧ ಸ್ಪರ್ಧೆಗಳು ಆರು ದಿನಗಳಿಂದ ನಡೆಸಲಾಗುತ್ತಿದ್ದು ಇಂದು ಶ್ರೀಮಠದ ಮಕ್ಕಳಿಗೂ ಹಾಗೂ ಸಂಚಾಲಿತ ಮಕ್ಕಳಿಗೂ ಚನ್ನಬಸವಾಶ್ರಮದಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು ಮಕ್ಕಳು ಆಸಕ್ತಿಯಿಂದ ಭಾಗವಹಿಸುತ್ತಿದ್ದರು.