ವಚನ ಪರಿಮಳ ಗ್ರಂಥ ಲೋಕಾರ್ಪಣೆ

ಬಾಲ್ಕಿ : ಸೆ.23:ಭಾಲ್ಕಿ ತಾಲೂಕಿನ ಚನ್ನಬಸವಾಶ್ರಮ ದಲ್ಲಿ 269 ನೆಯ ಮಾಸಿಕ ಶರಣ ಸಂಗಮ ಮತ್ತು ವಚನ ಪರಿಮಳ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು. ದಿವ್ಯ ಸನ್ನಿಧ್ಯ : ಪೂಜ್ಯ ಬಸವಲಿಂಗ ಪಟ್ಟದೇವರು ವಹಿಸಿಕೊಂಡು ಮಾತನಾಡಿದರು. ಶರಣ ಸಾಹಿತ್ಯ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು, ವಚನ ಸಾಹಿತ್ಯ ಮನುಕುಲಕ್ಕೆ ದಾರಿದೀಪವಾಗಿದೆ, ಬಸವಣ್ಣನವರ ಹಾಕಿಕೊಟ್ಟ ದಾರಿಯಲ್ಲಿ ನಡೆದಾಗ ನಮ್ಮ ಜೀವನ ಹಸನಾಗುತ್ತದೆ ಎಂದು ಆಶೀರ್ವದಿಸಿದರು.
ದಿವ್ಯ ನೇತೃತ್ವ: ಪೂಜ್ಯ ಗುರುಬಸವ ಪಟ್ಟದೇವರು ವಹಿಸಿಕೊಂಡು ಮಾತನಾಡಿದರು, ವಿಲಾಸ ಬಕ್ಕಾ ಅವರು, ಮಲ್ಲಮ್ಮ ಆರ್ ಪಾಟೀಲ್ ಅವರು, ಶರಣ ಸಾಹಿತ್ಯ ಮೈಗೂಡಿಸಿಕೊಂಡು ವಚನ ಸಾಹಿತ್ಯವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ, ಅವರಂತೆ ಎಲ್ಲರೂ ಬಸವಣ್ಣನವರ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ಸನ್ಮಾನ : ಶ್ರೀ ನಾಗಭೂಷಣ ಹುಗ್ಗೆ ಕುಲಪತಿಗಳು ಹಿರಿಯ ಆಪ್ತ ಕಾರ್ಯದರ್ಶಿಗಳು ಪಶುವೈದ್ಯಕೀಯ ವಿಶ್ವವಿದ್ಯಾಲಯ ಬೀದರ್ ವಹಿಸಿಕೊಂಡು ಮಾತನಾಡಿದರು, ಬಾಲ್ಕಿ ಮಠವೆಂದರೆ ವಚನಸಾಹಿತ್ಯ ಮಠ ಜಾತಿ,ಭೇದ, ಮೇಲು-ಕೀಳು ಎನ್ನದೆ ಇಡೀ ಮನುಕುಲವೇ ನನ್ನದು, ಎಂದು ನಡೆಸಿಕೊಂಡು ಹೋಗುವ ಮಠ ಭಾಲ್ಕಿ ಮಠವಾಗಿದೆ,ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೀಮಠ ಮಾಡುವ ಕಾಯಕ ಬಹಳ ಮಹತ್ತರವಾಗಿದೆ, ಇಡೀ ರಾಜ್ಯಕ್ಕೆ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಅಧ್ಯಕ್ಷತೆ : ಮಲ್ಲಮ್ಮ ಆರ್ ಪಾಟೀಲ್( ಶರಣ ಸಾಹಿತ್ಯ ಅಧ್ಯಕ್ಷರು ಭಾಲ್ಕಿ ) ಅವರು ವಹಿಸಿಕೊಂಡಿದ್ದರು.
ಮುಖ್ಯ ಅತಿಥಿ : ಶರಣ ವಿಲಾಸ ಬಕ್ಕಾ (ಅಧ್ಯಕ್ಷರು ಅರ್ಬನ್ ಬ್ಯಾಂಕ್ ಬಾಲ್ಕಿ) ವಹಿಸಿಕೊಂಡಿದ್ದರು. ವಚನ ಪರಿಮಳ
ಗ್ರಂಥ ಲೋಕಾರ್ಪಣೆ : ಮಹೇಶ ಘಾಳೆ ಅವರ ಹಸ್ತದಿಂದ ಬಿಡುಗಡೆಗೊಳಿಸಿದರು.
ಬಸವ ಗುರುಪೂಜೆ : ಘೋಳೆ ಪರಿವಾರದಿಂದ ನೆರವೇರಿತು. ದೀಪಕ್ ಠಮಕ್ಕೆ ಅವರು ನಿರೂಪಿಸಿದರು.