ವಚನ ಚಾರಿಟೇಬಲ್ ಸೋಸೈಟಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಬೀದರ :ಮಾ.12: ಬಸವಾದಿ ಶರಣರ ಸಂದೇಶ ಸಾರುವ ವಚನ ತತ್ವಗಳ ಅನುಷ್ಠಾನದಿಂದ ಇಂದಿನ ಸಮಾಜದಲ್ಲಿ ಮಹಿಳಾ ಸಮಾನತೆ, ಸಬಲತೆ ಸಾಧಿಸಲು ಸಾಧ್ಯ ಎಂದು ಬಸವಕಲ್ಯಾಣ ಬಂದವರ ಓಣಿಯ ಪೂಜ್ಯ ಸತ್ಯಕ್ಕ ತಾಯಿ ಹೇಳಿದರು

ಅವರು, ನಗರದಲ್ಲಿ ಪೊಲಾ ಫಂಕ್ಷನ ಹಾಲನಲ್ಲಿ ವಚನ ಚಾರಿಟೇಬಲ್ ಸೋಸೈಟಿ ವತಿಯಿಂದ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಸಾನಿಧ್ಯ ವಹಿಸಿಮಾತನಾಡಿ 12ನೇ ಶತನಮಾನದಲ್ಲಿಯೇ ಮಹಿಳೆಯರಿಗೆ ಸಮಾತನೆ ಸಿಕ್ಕಿದೆ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸ್ವಾವಲಂಭಿ ಜೀವನವನ್ನು ನಡೆಸುತ್ತಿದ್ದಾರೆ. ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲು ಇತ್ತೀಚಿನ ದಿನಗಳಲ್ಲಿ ಸಮಾನತೆಯನ್ನು ನೀಡಲಾಗಿದೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೆಯಾದ ಛಾಪು ಮೂಡಿಸಿದ್ದಾರೆ.

ಕಲಬುರ್ಗಿಯ ಹಿರಿಯ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ ಆಧುನಿಕ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಉತ್ತಮ ಆದಾಯ ಹೊಂದುವ ಮೂಲಕ ಮನೆಯ ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಕುಟುಂಬದ ಏಳೆಗಾಗಿ ಶ್ರಮಿಸುತ್ತಿರುವುದರಿಂದ ಸಾಮಾಜಿಕವಾಗಿ ಮಹಿಳೆ ಪ್ರಗತಿಯ ಹಾದಿಯಲ್ಲಿದ್ದಾಳೆ ಪ್ರತಿಯೊಬ್ಬ ಪ್ರತಿಭಾನ್ವಿತ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂಬುದೊಂದು ನುಡಿ. ಆದರೆ ಇಂದು ಮಹಿಳೆಯ ಮೇಲೆ ನಿತ್ಯ ನಡೆಯುತ್ತಿರುವ ಶೋಷಣೆಗಳಿಗೆ ಕೊನೆ ಇಲ್ಲದಾಗುತ್ತಿದೆ ಎಂದರು.

ಹಿರಿಯ ಸಾಹಿತಿ ರಜಿಯಾ ಬಳಬಟ್ಟಿ ಮಾತನಾಡಿ, ಸ್ತ್ರೀಯರು ಅಕ್ಷರಸ್ಥರಾದರೆ ಸುಸಜ್ಜಿತ ನಾಗರಿಕ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ, ಸ್ತ್ರೀಯರನ್ನು ಶಕ್ತಿ ಸ್ವರೂಪಿಯಾಗಿ ಆರಾಧಿಸುವ ದೇಶ ನಮ್ಮದು. ಮೂರು ವಿಧಗಳಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಮಹಿಳೆಯರು ಸಲ್ಲಿಸುತ್ತಿದ್ದು ಕತೃತ್ವ, ನೇತೃತ್ವ, ತಾಯತ್ವ ಈ ಮೂರು ಜವಾಬ್ದಾರಿಯೊಂದಿಗೆ ಸ್ತ್ರೀಯರು ಸಮಾಜದಲ್ಲಿ ಸುಂದರಮಯವಾಗಿ ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದರು. ಆಧುನಿಕ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಉತ್ತಮ ಆದಾಯ ಹೊಂದುವ ಮೂಲಕ ಮನೆಯ ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಕುಟುಂಬದ ಏಳೆಗಾಗಿ ಶ್ರಮಿಸುತ್ತಿರುವುದರಿಂದ ಸಾಮಾಜಿಕವಾಗಿ ಮಹಿಳೆ ಪ್ರಗತಿಯ ಹಾದಿಯಲ್ಲಿದ್ದಾಳೆ.

ವಚನ ಚಾರಿಟೇಬಲ್ ಸೋಸೈಟಿ ಅಧ್ಯಕ್ಷೆ ಲಿಂಗಾರತಿ ಅಲ್ಲಮಪ್ರಭು ನಾವದಗೇರೆ ಮಾತನಾಡಿ, ಆಧುನಿಕ ಮಹಿಳೆಯ ಜೀವನ ಪದ್ಧತಿ ಬದಲಾಗುತ್ತಿದೆ. ಐಟಿ ಬಿಟಿ ಕಾಲದ ಉದ್ಯೋಗಸ್ಥ ಮಹಿಳೆಯರಿಗೆ ಹೊಸ ಸಮಸ್ಯೆಗಳು ಎದುರಾಗುತ್ತಿವೆ. ಕಾಲ ಭೌತಿಕವಾಗಿ ಬದಲಾದರೂ ಅಂತರಂಗದಲ್ಲಿ ವಚನಜ್ಯೋತಿಯನ್ನು ಬೆಳಗಿಸಿಕೊಳ್ಳಬೇಕು. ಇದರಿಂದ ಬದುಕು ಉದಾತ್ತಿಕರಣಗೊಳ್ಳಲು ಸಾಧ್ಯ ಎಂದರು. ಮಹಿಳೆಯರ ಮುಂದೆ ಸಾಕಷ್ಟು ಸವಾಲುಗಳಿವೆ. ಅವುಗಳಿಗೆ ನಾವೇ ಉತ್ತರ ನೀಡಬೇಕಾಗಿದೆ. ಇದಕ್ಕೆ ಆತ್ಮಬಲ ಅತ್ಯಗತ್ಯವಾಗಿದೆ. ಆಧುನಿಕತೆ ಬೆಳೆಯುತಿದ್ದಂತೆಯೇ ಶ್ರೀಮಂತಿಕೆ, ವೈಭವೀಕರಣದ ಬೆನ್ನು ಹತ್ತಿದ ವಿದ್ಯಾವಂತರು ಜೀವನವನ್ನು ಕೇವಲ ಹಣದಿಂದ ಅಳೆಯುತ್ತಿದ್ದೇವೆ. ಮಾನವೀಯ ಮೌಲ್ಯಗಳನ್ನು ಕಡೆಗಣಿಸುತ್ತಿದ್ದೇವೆ. ಇದು ಬದುಕಿನ ಸರಿಯಾದ ಕ್ರಮವಲ್ಲ ಎಂದರು. ಪೂಜ್ಯ ಕಲ್ಯಾಣಮ್ಮ ತಾಯಿ ಮಾತನಾಡಿದರು.

ಈ ಸಂದರ್ಭದಲ್ಲಿ ವಚನ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಮಲ್ಲೇಶ್ವರಿ ಗಂದಿಗುಡೆ, ರೇಖಾ ಲಿಂಗದಳ್ಳಿ, ಸುಜಾತಾ ಕುಂಬಾರ, ಶಿಲ್ಪ ಮಜಗೆ, ನಾಗವೇಣಿ ಸಾಲಿ ಇದ್ದರು. ಪ್ರತಿಬಾ ಜೀರಗೆ ಸ್ವಾಗಿತಿಸದರೆ, ಲಕ್ಷ್ಮಿ ಬಿರಾದಾರ ನಿರೂಪಿಸಿದರು, ಜಗದೇವಿ ಬ್ಯಾಳೆ ವಂದಿಸಿದರು.

ಸನ್ಮಾನ : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಭಾನುಪ್ರಿಯಾ ಅರಳಿ (ಸಂಗೀತ ಕ್ಷೇತ್ರ), ರಾಜಮ್ಮ ಚಿಕ್ಕಪೇಟ- (ಧಾರ್ಮಿಕ ಕ್ಷೇತ್ರ), ದಿವ್ಯಾ ಮಠದ (ಚಿತ್ರ ಕಲೆ), ಲಕ್ಷ್ಮಿ ಗಾದಗಿ (ಜೀವವಿಮೆ), ಶ್ರೀಲತಾ (ಶಿಕ್ಷಣ)ಕ್ಷೇತ್ರದಲ್ಲಿ ವಚನ ಚಾರಿಟೇಬಲ್ ಸೋಸೈಟಿ ವತಿಯಿಂದ ಸನ್ಮಾನಿಸಲಾಯಿತು