ಕಲಬುರಗಿ,ಏ.01:”ವಚನ ಚಳುವಳಿಯು ಮೊದಲ ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಚಳುವಳಿಯಾಗಿದೆ ಮತ್ತು ಅನುಭವ ಮಂಟಪವು ವಿಶ್ವದ ಮೊದಲ ಸಂಸತ್ತು” ಎಂದು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.
ಅವರು ಬಸವ ಸಮಿತಿ, ಬೆಂಗಳೂರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಬಸವ ಸಮಿತಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ಬಹುಭಾμÁ ವಚನ ಭಾμÁಂತರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ“ವಚನ ಚಳವಳಿ, ಬಸವಣ್ಣ ಮತ್ತು ಇತರ ಶರಣರ ಬಗ್ಗೆ ವಿಶ್ವದಾದ್ಯಂತ ಜನರು ತಿಳಿದುಕೊಳ್ಳಬೇಕು ಎಂದರು. ನಾವು ವಚನಗಳನ್ನು ಅವರ ಮಾತೃಭಾμÉಗೆ ಭಾμÁಂತರಿಸಿದಾಗ ಜನರಿಗೆ ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಸಾಮಾಜಿಕ-ಆರ್ಥಿಕ ಅಸಮಾನತೆ, ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ, ಸಾಮಾಜಿಕ ಮತ್ತು ಸಾಂಸ್ಕøತಿಕ ತಾರತಮ್ಯ, ನೈತಿಕತೆ ಮುಂತಾದ ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ವಚನ ಸಾಹಿತ್ಯವು ಪರಿಹಾರವನ್ನು ಒದಗಿಸಲಿದೆ. ಸಿಯುಕೆ ಬಸವ ಸಮಿತಿಯೊಂದಿಗೆ ಒಡಂಬಡಿಕೆ ಹೊಂದಿರುವುದರಿಂದ, ನಾವು ಈ ರೀತಿಯ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬದ್ಧರಾಗಿದ್ದೇವೆ. ನಾವು ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತೇವೆ” ಎಂದು ಅವರು ಹೇಳಿದರು
ಚೇರ್‍ಪರ್ಸನ್ ಸೆಂಟರ್ ಫಾರ್ ಫಾರಿನ್ ಲ್ಯಾಂಗ್ವೇಜಸ್, ಬೆಂಗಳೂರು ಸಿಟಿ ಯೂನಿವರ್ಸಿಟಿ, ಪೆÇ. ಜೋತಿ ವೆಂಕಟೇಶ್ ಮಾತನಾಡಿ, “ವಚನಗಳನ್ನು ವಿವಿಧ ಭಾμÉಗಳಿಗೆ ಭಾμÁಂತರಿಸಲು ಕೇವಲ ಭಾμÉಯ ಜ್ಞಾನ ಮಾತ್ರವಲ್ಲದೆ ವಚನ ಚಳವಳಿಯ ಹಿನ್ನೆಲೆ, ಕನ್ನಡ ಸಂಸ್ಕೃತಿ ಮತ್ತು ಭಾμÉ, ವಚನ ತತ್ವಶಾಸ್ತ್ರದ ಹಿನ್ನೆಲೆಯೂ ಅಗತ್ಯ. ಪ್ರಸ್ತುತ ನಾವು 14 ವಿದೇಶಿ ಭಾμÉಗಳಲ್ಲಿ ಅಧ್ಯಾಪಕರನ್ನು ಹೊಂದಿದ್ದೇವೆ. ಜಪಾನೀಸ್ ಮತ್ತು ಜರ್ಮನ್ ಜೊತೆಗೆ ನಾವು ಕೊರಿಯನ್ ಮತ್ತು ಇಟಾಲಿಯನ್ ಭಾμÉಗಳಿಗೆ ವಚನಗಳನ್ನು ಭಾμÁಂತರಿಸಲು ಕೆಲಸ ಮಾಡಲು ಸಿದ್ಧರಿದ್ದೇವೆ” ಎಂದು ಹೇಳಿದರು.
ಬಸವ ಸಮಿತಿ ಅಧ್ಯಕ್ಷ ಶ್ರೀ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ 38 ಭಾμÉಗಳಿಗೆ ವಚನಗಳನ್ನು ಅನುವಾದ ಮಾಡಿದ್ದೇವೆ. ವಚನಗಳನ್ನು ಎಲ್ಲಾ ಜಾಗತಿಕ ಭಾμÉಗಳಿಗೆ ಭಾμÁಂತರಿಸುವುದು ಮತ್ತು ವಚನ ತತ್ವಶಾಸ್ತ್ರದೊಂದಿಗೆ ಪ್ರಪಂಚವನ್ನು ಮುಟ್ಟುವುದು ನಮ್ಮ ಗುರಿಯಾಗಿದೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ತಾಳೆಗರಿಗಳ 23000 ವಚನಗಳ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲು ಮುಂದೆ ಬಂದಿದೆ ಮತ್ತು ಧಾರವಾಡ ವಿಶ್ವವಿದ್ಯಾಲಯವು ಅಗತ್ಯ ನೆರವು ನೀಡಲು ಒಪ್ಪಿಗೆ ನೀಡಿದೆ. ಹೀಗಾಗಿ ಬಸವ ಸಮಿತಿ ಈ ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳಲಿದೆ. ಆದ್ದರಿಂದ ವಚನ ಸಾಹಿತ್ಯದ ಜ್ಞಾನವನ್ನು ಡಿಜಿಟಲ್ ಆಗಿ ಸಂರಕ್ಷಿಸಲಾಗುವುದು ಮತ್ತು ಜನರು ಪ್ರಪಂಚದಾದ್ಯಂತ ಒದಲು ಸಹಕಾರಿಯಾಗುತ್ತದೆ” ಎಂದು ಹೇಳಿದರು.
ಕುಲಸಚಿವ ಪೆÇ್ರ.ಬಸವರಾಜ ಡೋಣೂರ, ಪೆÇ್ರ.ವಿಕ್ರಂ ವಿಸಾಜಿ, ಡಾ.ಗಣಪತಿ ಸಿನ್ನೂರ, ಪೆÇ್ರ.ಸಿದ್ದಣ್ಣ ಲಂಗೋಟಿ ಹಾಗೂ ಉಭಯ ವಿಶ್ವವಿದ್ಯಾಲಯಗಳ ಅಧ್ಯಾಪಕರು ಉಪಸ್ಥಿತರಿದ್ದರು.