ವಚನ ಚಳುವಳಿಗೆ ಸ್ಪೂರ್ತಿಯಾದ ಆದ್ಯ ವಚನಕಾರ ದೇವರ ದಾಸಿಮಯ್ಯನವರು

ಕಲಬುರಗಿ,ಮಾ.26: ಸಮಾಜಿಕ ಕ್ರಾಂತಿ ಮಾಡಿದ ವಚನ ಸಾಹಿತ್ಯಕ್ಕೆ ಸ್ಪೂರ್ತಿಯಾಗಿ ದೇವರ ದಾಸಿಮಯ್ಯನವರು 11ನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಹೊಸ ಶಕ್ತಿ ತುಂಬಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ವಿಧಾನ ಸಭೆ ಶಾಸಕರು ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅವರು ಹೇಳಿದರು.

ಭಾನುವಾರದಂದು ಡಾ. ಎಸ್. ಎಂ. ಪಂಡಿತ ರಂಗಮಂದಿರಲ್ಲಿ ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಪಂಚಾಯತ್ ಮಹಾನಗರ ಪಾಲಿಕೆ ಹಾಗೂ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತ್ಯುತ್ಸವ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯದಲ್ಲಿ ಅನೇಕ ಚಳುವಳಿಗಳು ನಡೆದಿವೆ ಆದರೆ ವಚನ ಚಳುವಳಿ ಎಲ್ಲಕ್ಕಿಂತ ಭಿನ್ನವಾಗಿ ಜಾತಿ ಮತ ಪಂಥ ಎನ್ನದೆ ಎಲ್ಲರನ್ನು ಸಮಾನವಾಗಿ ಕಂಡು ಸಮಾನತೆ ತರಲು ಶರಣರು ಶ್ರಮಿಸಿದ್ದಾರೆ. ಶರಣರ ವಿಚರಗಳು ನಮಗೆಲ್ಲ ಸ್ಪೂರ್ತಿಯಾಗುವೆ. ಇಂದು ನೇಕಾರರು ಆರ್ಥಿಕವಾಗಿ ತೀರಾ ಹಿಂದೆ ಉಳಿದಿದ್ದಾರೆ. ನೇಕಾರ ಸಮುದಾಯದ ಅಭಿವೃದ್ದಿಗಾಗಿ ಪ್ರಮಾಣಕವಾಗಿ ಕೇಲಸ ಮಾಡಲಾಗುತ್ತದೆ ಎಂದರು ಮೇಗ ಟೇಡ್ರರ್ ಗೆ ದೇವರ ದಾಸಿಮಯ್ಯರ ಹೆಸರು ಇಡಲಾಗುತ್ತದೆ ಎಂದ ಹೇಳಿದರು.

ಮಾನ್ವಿಯ ಉಪನ್ಯಾಸಕ ರಮೇಶಬಾಬು ಯಾಳಗಿರವರು ವಿಶೇಷ ಉಪನ್ಯಾಸ ನೀಡಿ 11 ನೇ ಶತಮಾನದ ಮೊಟ್ಟಮೊದಲ ವಚನಕಾರರೂ ಇವರು ಸುರಪುರ ಜಿಲ್ಲೆಯ ಮುದನೂರು ಎಂಬ ಹಳ್ಳಿಯಲ್ಲಿ ಜನಿಸಿದರು.ಹಸಿದವರ ಬಗ್ಗೆ ಮೊಟ್ಟ ಮೊದಲು ದ್ವನಿ ಎತ್ತಿದವರು ದೇವರ ದಾಸಿಮಯ್ಯನವರು ಜಾತಿಯನ್ನು ಹೋಗಲಾಡಿಸಾಲು ವಚನ ಮೂಲಕ ಸಮಾಜಕ್ಕೆ ದಾರಿ ದೀಪಾವಾದರು ತಮ ್ಮ178 ವಚನಗಳ ಮೂಲಕ ಸಮಾಜವನ್ನು ತಿದ್ದುವ ಮೂಲಕ ಹೊಸ ಕ್ರಾಂತಿ ಮಾಡಿದ್ದಾರೆ ಎಂದರು, ಇವರು ಇದೆ ಸಂದರ್ಭದಲ್ಲಿ ಶ್ರೀ ಸಿದ್ಧಾರೂಡ ಮಠ ಯಳಸಂಗಿ ಪೀಠಾದ್ಯಕ್ಷರು ಶ್ರೀ ಪರಮಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದರು. ಜಿಲ್ಲಾ ನೇಕಾರ ಸಮಾಜ ಅಧ್ಯಕ್ಷರು ರೇವಣಸಿದ್ದಪ್ಪ ಗಡ್ಡದ, ನೇಕಾರ ಸಮಾಜ ಅಧ್ಯಕ್ಷರು ಚಂದ್ರಶೇಖರ ಸಿಲ್ತಾನಪೂರ, ಜಿಲ್ಲಾಧಿಕಾರಿಗಳು ತಹಿಲ್ದಾರರು ಶಿಷ್ಠಾಚಾರದ ನಿಸಾರ ಅಹಮ್ಮದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ಜಗದೀಶ್ವರಿ ಶಿವಕೇರಿ, ವಿನೋದಕುಮಾರ ಜನೇವರಿ, ಶಿವಾನಂದ ಅಣ್ಣಜಗಿ ಉಪಸ್ಥಿತರಿಂದರು.