ವಚನಾನಂದ ಶ್ರೀಗಳಿಂದ ತುಂಗಭದ್ರ ಮಡಿಲ ಸ್ವಚ್ಛತಾ ಕಾರ್ಯ

ಹರಿಹರ.ಜ.3;  ನನ್ನ ಊರು ನನ್ನ ಹೊಣೆ ತುಂಗಭದ್ರೆಯ ಮಡಿಲ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಂಚಮಶಾಲಿ ಪೀಠದ ಜಗದ್ಗುರುಗಳಾದ ವಚನಾನಂದ ಶ್ರೀಗಳ ನೇತೃತ್ವದಲ್ಲಿ ಹರಿಹರ ನಗರಸಭೆಯ ಪೌರಾಯುಕ್ತ ಉದಯಕುಮಾರ ಬಿ ತಳವಾರ ನನ್ನ ಊರು ನನ್ನ ಹೊಣೆ ಬಳಗದಿಂದ ಪ್ರತಿ ಭಾನುವಾರ ತುಂಗಭದ್ರಾ ನದಿಯ ದಡದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ನನ್ನ ಊರು ನನ್ನ ಹೊಣೆ ಬಳಗದ ಆಶ್ರಯದಲ್ಲಿ ಚುನಾಯಿತ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಸ್ಥಳೀಯ ನಗರಸಭೆಯ ಪೌರಕಾರ್ಮಿಕರು,  ನಗರದ ವಿವಿಧ ಕ್ರೀಡಾಪಟುಗಳು, ಯುವಕರು ವಿದ್ಯಾರ್ಥಿಗಳು ಸಂಘ ಸಂಸ್ಥೆಯ ಪದಾಧಿಕಾರಿಗಳು ಪರಿಸರ ಪ್ರೇಮಿಗಳು ತುಂಗಭದ್ರಾ ನದಿಯ ದಡದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.  ನದಿ ದಡದಲ್ಲಿ ಸಂಕ್ರಾಂತಿ ಸ್ವಚ್ಛ ಪರಿಸರದಲ್ಲಿ ಆಚರಿಸುವ ಉದ್ದೇಶದಿಂದ ಎರಡನೇ ವರ್ಷ ಜೀವ ಜಲ ತುಂಗಭದ್ರಾ ಮಡಿಲನ್ನುಸ್ವಚ್ಚತೆ ಮಾಡೋದಕ್ಕೆ ಮುಂದಾಗಿರುವ ನನ್ನಊರು ನನ್ನ ಹೊಣೆ ಬಳಗದವರಿಗೆ ನಗರದ ಜನತೆ  ಮೆಚ್ಚುಗೆ ವ್ಯಕ್ತಪಡಿಸಿದರು. ನಿಮ್ಮ ಪರಿಸರ ಸ್ವಚ್ಚತಾ ಕಾರ್ಯ ಹೀಗೆ ಮುಂದುವರಿಯಲಿ ನಾವು ನಿಮ್ಮೊಂದಿಗೆ ಬರುತ್ತೇವೆ ಎಂದು ಪರಿಸರ ಪ್ರೇಮಿಗಳು ಬಳಗಕ್ಕೆ ಶುಭ ಹಾರೈಸಿದರು  ಸ್ವಚ್ಛತಾ ಕಾರ್ಯದಲ್ಲಿ  . ಪೌರಾಯುಕ್ತ ಉದಯಕುಮಾರ್ ಬಿ ತಳವಾರ .ಎಸ್ ಎಸ್ ಬಿರಾದಾರ ಪರಿಸರ ಪ್ರೇಮಿ ರಾಘವೇಂದ್ರ ರವಿಶಂಕರ್ ಗದ್ಗಿಮಠ. ಮಂಜುನಾಥ್ .ನಗರಸಭೆಯ ಆರೋಗ್ಯ ನಿರೀಕ್ಷ ಕ ರು ಪೌರ ಕಾರ್ಮಿಕರು ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಯವರು ನನ್ನ ಊರು ನನ್ನ ಹೊಣೆ ಬಳಗದ ಸರ್ವ ಸದಸ್ಯರು ಪರಿಸರ ಪ್ರೇಮಿಗಳು ತುಂಗಭದ್ರಾ ಮಡಿಲ ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು