ಕಲಬುರಗಿ,ಸೆ.24-ನಗರದ ವಿಜಯನಗರ ಕಾಲನಿಯ ಕಲ್ಪತರು ಸೇವಾ ಸಂಘದಿಂದ ಗಣೇಶ ಚತುರ್ಥಿಯ ಅಂಗವಾಗಿ ಐದು ದಿನಗಳ ವಚನದರ್ಶನ ಪ್ರವಚನ ಮಂಗಲ ಹಾಗೂ ವಚನ ವಾಚನ ಸ್ಪರ್ಧೆ
ಕಾರ್ಯಕ್ರಮ ಜ್ಯೋತಿಷ್ಯ ರತ್ನ ಸಿದ್ದೇಶ್ವರ ಶಾಸ್ತ್ರಿಗಳು ಹಿರೇಮಠ ಅವರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ನಾಡಿನ ಖ್ಯಾತ ಪುರಾಣ ಪ್ರವಚನಕಾರರಾದ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರಿಗಳು ಕರ್ನಾಟಕದ ತ್ರಿವಿಧ ರತ್ನ ತ್ರಯರಾದ ಸಂಗೀತ ಸಂತ ಅಂಧ ಅನಾಥ ಮಕ್ಕಳ ಬಾಳಿಗೆ ಬೆಳಕಾದ ಪದ್ಮಭೂಷಣ ಡಾ. ಪುಟ್ಟರಾಜ ಕವಿ ಶಿವಯೋಗಿಗಳ, ಶಿಕ್ಷಣ ಮತ್ತು ದಾಸೋಹ ಸಂತರಾದ ತುಮಕೂರಿನ ಸಿದ್ದಗಂಗಾ ಸ್ವಾಮೀಜಿಗಳ, ವಿಜಯಪುರದ ಆಧ್ಯಾತ್ಮದ ಸಂತರಾದ ಸಿದ್ದೇಶ್ವರ ಸ್ವಾಮೀಜಿಗಳವರ ಬದುಕು ಮತ್ತು ಅವರುಗಳ ಸಮಾಜಕ್ಕೆ ನೀಡಿದ ಅಮುಲ್ಯ ಕೊಡುಗೆಗಳ ಕುರಿತು ಬಹಳ ಮಾರ್ಮಿಕವಾಗಿ ಪ್ರವಚನವನ್ನು ಉಣಬಡಿಸಿದರು. ಜೊತೆಗೆ ವಚನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕುಮಾರಿ ಸೌಮ್ಯ ಶರಣಬಸಪ್ಪ ಪ್ರಥಮ, ಕುಮಾರಿ ಸೃಷ್ಠಿ ಈರಯ್ಯ ಸ್ಧಾವರಮಠ ದ್ವಿತೀಯ, ಕುಮಾರಿ ಸುರಭಿ ದತ್ತಾತ್ರೇಯ ಚುಂಚೂರ ತೃತೀಯ, ಸಹನಾ ಸಂತೋಷ ಪಾಟೀಲ ದಣ್ಣುರ ಚತುರ್ಥ ಸ್ಥಾನ ಪಡೆದು ಬಹುಮಾನಗಳನ್ನು ಪಡೆದರು. ಬಹುಮಾನಗಳನ್ನು ಲಿಂ.ಸೋಮಯ್ಯ ಸ್ವಾಮಿಜೀ ಮತ್ತು ಅನ್ನುಬಾಯಿ ಸಂಸ್ಥಾನ ಹಿರೇಮಠ ಸುಂಟನೂರ ಹಾಗೂ ಕಮಲಾ ಟೀಚರ್ ಅವರು ಕೊಡುಗೆ ನೀಡಿದರು.
ಕಲ್ಪತರು ಸೇವಾ ಸಂಘದ ಅಧ್ಯಕ್ಷÀ ಸಂತೋಷ್ ಪಾಟೀಲ್ ದಣ್ಣೂರ, ಉಪಾಧ್ಯಕ್ಷ ಡಾ.ಸಂತೋಷ ಕೋಟನೂರ, ಕಾರ್ಯದರ್ಶಿ ಮುನಿಕುಮಾರ ಹಿರೇಮಠ ಜೋಗುರ, ಶ್ರೀನಾಥ ಟೋಪಿ, ಸೋಮದತ್ತ ಪಾಟೀಲ್, ದತ್ತಾತ್ರೇಯ ಚುಂಚೂರ, ಅಜಯ್ ಮಿಶ್ರಾ, ಶರಣು ಗುತ್ತೆದಾರ, ಅರ್ಚಕರಾದ ಗಂಗೂಬಾಯಿ ವಿಭೂತಿ ಹಾಗೂ ಕಲ್ಪತರು ಸೇವಾ ಸಂಘದ ಸಮಸ್ತ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗಾಯಕರಾದ ಶಿವಾನಂದ ಮಂದೇವಾಲ, ತಬಲಾ ವಾದಕರಾದ ಜಗದೀಶ ದೇಸಾಯಿ ಕಲ್ಲೂರ ಸುಂದರವಾಗಿ ಸಂಗೀತ ರಸದೌತಾಣ ನೀಡಿದರು. ವಿಜಯನಗರ ಕಾಲೋನಿಯ ಅನೇಕ ಭಕ್ತರು ಭಾಗವಹಿಸಿದ್ದರು.