ವಚನಗಳ ಸಾರ ಅರಿತವರು ಬದುಕನ್ನೂ ಅರ್ಥ ಮಾಡಿಕೊಳ್ಳಬಲ್ಲರು : ಶಿಕ್ಷಕ ನಾಗರಾಜ್

ಸಂಜೆವಾಣಿ ವಾರ್ತೆ

ಸಂತೇಬೆನ್ನೂರು.ಜು.೨೫; ಹನ್ನೆರಡನೇ ಶತಮಾನದ ವಚನಗಳು ಮಾನವ ಕುಲದ ಕೈ ದೀವಿಗೆಗಳು. ಅವುಗಳನ್ನು ಅರಿತವರು ತಮ್ಮ ಬದುಕನ್ನೂ ಅರ್ಥ ಮಾಡಿಕೊಳ್ಳಬಲ್ಲರು ಎಂದು ವಾಗ್ಮಿ, ಶಿಕ್ಷಕ  ನಾಗರಾಜ್ ಕೆ.ಎಸ್ ಹೇಳದರು.ಸಂತೇಬೆನ್ನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಭಾಭವನದಲ್ಲಿ ಏರ್ಪಡಿಸಿದ್ದ ಸಾಹಿತ್ಯದ ಕಾರ್ಯಕ್ರಮ ಮಾಸದ ಮಾತು ವೇದಿಕೆಯಲ್ಲಿ ಪ್ರಧಾನ ಉಪನ್ಯಾಸಕರಾಗಿ ಭಾಗವಹಿಸಿ ವಚನ ವೈಶಿಷ್ಟ್ಯ ವಿಷಯ ಕುರಿತು ಮಾತನಾಡುತ್ತಿದ್ದರು.ವಚನಗಳು ನುಡಿಯ ಗಡಣದ ಬೆಳಕು , ಮರುತದ ಪರಿಮಳದಂತೆ ಆ ನಿಟ್ಟಿನಲ್ಲಿ  ಶರಣಾದಿ ಬಸವರು ವಚನ ಸೃಷ್ಟಿ ಯ ಮೂಲಕ ಬದುಕನ್ನು ಕಟ್ಟುವ ಯತ್ನ ಮಾಡಿದರು.ಅನುಭವ ಮಂಟಪದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ ಲೋಕ ಕಲ್ಯಾಣಕರ ಕೆಲಸ ಮಾಡುತ್ತಾ ಜನಮನ ತಿದ್ದುತ ಶರಣರ ಬದುಕು ಬರಹ ಓದಬೇಕು ಎಂದರು.ಬದುಕಿನ ಜಂಜಾಟಗಳನ್ನು ಮರೆತು ಇಂತಹ ಜನಮಾನಸರು ಮೆಚ್ಚಿದ, ಸೃಷ್ಟಿಸಿದ ವಚನ ಲೋಕ ಪ್ರವೇಶಿಸಿದರೆ ಬಾಳು ಧನ್ಯವಾಗುತ್ತದೆ.ಶರಣರ ಬಾಳು ಮರಣದಲ್ಲಿ ಕಾಣು ಅನ್ನುತ್ತಾರೆ ಆ ಹಾದಿಯಲ್ಲಿ ಜನಸಾಮಾನ್ಯರಾದ ನಾವು ವಚನಗಳ  ಸಾರವರಿತು ಬದುಕಿದರೆ ಈ ಸಮಾಜದಲ್ಲಿ ಅಶಾಂತಿ.. ಹಿಂಸೆ…ಅಧರ್ಮ ಮುಂತಾದ ಅನಿಷ್ಟ ಗಳ ಸುಳಿವಿರುವುದಿಲ್ಲ ಎಂದರು.ಶ್ರೀಮತಿ ಲತಾ ಉಲ್ಲಾಸ್ ವಚನಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.ಇ- ಗ್ರಾಮದ ಹೊನ್ನಶ್ರಿ ಗೌಡರು ತಮ್ಮ ದಿವಂಗತ ಮಡದಿಯ ಸ್ಮರಣಾರ್ಥ ಕಾರ್ಯಕ್ರಮದ  ಪ್ರಾಯೋಜಕತ್ವ ವಹಿಸಿದ್ದರು.ಕೆ.ಸಿದ್ದಲಿಂಗಪ್ಪ. ಟಾಕೀಸ್ ಪ್ರಕಾಶ್, ನಾಗೇಂದ್ರಪ್ಪ, ಸಿದ್ದಿಖ್, ಬಾವಿಕಟ್ಟೆ ನಾಗರಾಜ್, ಎಸ್ ಈ ಮಂಜುನಾಥ್, ಯಶೋಧಮ್ಮ, ಮಾರುತಿ, ಫೈಜ್ನಟ್ರಾಜ್, ಬಸವರಾಜಪ್ಪ, ಸಿ.ಪಿ ಅನಿತಾ, ಶರತ್, ಸರ್ವದೆ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.ಕು. ಅಪೇಕ್ಷಾ ಮತ್ತು ಕು.ಚಂದಾ ಕಾರ್ಯಕ್ರಮ ನಿರೂಪಿಸಿದರು.