ವಚನಗಳ ಸಾರಅರಿತರೆ ಜೀವನ ಸುಗಮ: ಗೀತಾ ಹುಡೇದ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.12:- ವಿದ್ಯಾರ್ಥಿಗಳು ವಚನಗಳನ್ನು ಅಧ್ಯಯನ ಮಾಡಬೇಕು. ವಚನಗಳ ಸಾರವನ್ನು ಅರಿತುಕೊಂಡರೆ ಜೀವನ ಸುಗಮವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಸಲಹೆ ಮಾಡಿದರು.
ನಗರದ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಡಾ. ಫ. ಗು. ಹಳಕಟ್ಟಿಯವರ ಜನ್ಮದಿನಾಚರಣೆ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಫ. ಗು. ಹಳಕಟ್ಟಿಯವರು ವಚನಗಳನ್ನು ಬೆಳಕಿಗೆ ತರಲು ಬಹಳ ಶ್ರಮಿಸಿದರು. ತಮ್ಮ ಜೀವನವನ್ನೆಲ್ಲಾ ವಚನಗಳ ಸಂರಕ್ಷಣೆ, ಸಂಪಾದನೆ, ಪ್ರಕಾಶನ ಮಾಡಲು ಮುಡುಪಾಗಿಟ್ಟರು. ಅವರ ಜನ್ಮದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಬಸವಣ್ಣನವರಒಂದು ವಚನದ ಅಂಶಗಳನ್ನು ನಾವು ಪಾಲಿಸಿದರೆ ಉತ್ತಮ ಪ್ರಜೆಗಳಾಗುತ್ತೇವೆ. ಅವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನದ ಸಾಲುಗಳು ಸದಾ ಮಾರ್ಗದರ್ಶಕವಾಗಿದೆ. ವಿದ್ಯಾರ್ಥಿಗಳು ದಿನಕ್ಕೊಂದು ವಚನ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗೀತಾ ಹುಡೇದ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭಾ ಸದಸ್ಯೆಕುಮುದಾಕೇಶವಮೂರ್ತಿಅವರು ಮುಂದಿನ ಪೀಳಿಗೆಗೆ ವಚನಗಳ ಮೌಲ್ಯ ತಿಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿಡಾ. ಫ.ಗು. ಹಳಕಟ್ಟಿಯವರು ವಚನ ಸಂರಕ್ಷಣೆ, ಸಂಪಾದನೆಯಂತಹ ಶ್ರಮವನ್ನು ನೆನೆಪು ಮಾಡಿಕೊಳ್ಳಬೇಕು ಎಂದರು.
ಮುಖ್ಯ ಭಾಷಣ ಕಾರರಾಗಿದ್ದ ಆದರ್ಶ ವಿದ್ಯಾಲಯದ ಅಧ್ಯಾಪಕ ಬಿ.ಎಸ್. ವಿನಯ್ ಮಾತನಾಡಿ 12 ಶತಮಾನದಲ್ಲಿ ನಡೆದ ಕ್ರಾಂತಿಯ ಸಮಯದಲ್ಲಿ ವಚನಗಳನ್ನು ಸಂರಕ್ಷಿಸುವುದೇಕಷ್ಟದ ಕೆಲಸವಾಗಿತ್ತು. ವಚನಗಳು ಗುಹೆಗಳಲ್ಲಿ ದೇವರ ಮನೆಗಳಲ್ಲಿ ಉಳಿದಿದ್ದವು. ಅದನ್ನು ಬೆಳಕಿಗೆ ತಂದವರು ಫ.ಗು. ಹಳಕಟ್ಟಿಯವರು. ಹಾಗಾಗಿಯೇ ವಚನವನ್ನೇ ಬರೆಯದಿದ್ದರೂ ಅವರನ್ನು ವಚನ ಪಿತಾಮಹ ಎಂದೇ ಕರೆಯಲಾಗುತ್ತದೆ ಎಂದರು.
ಹಳಕಟ್ಟಿಯವರು ಮನೆ ಮನೆಗಳಿಗೆ ಸೈಕಲ್‍ನಲ್ಲಿ ತೆರಳಿ ವಚನಗಳನ್ನು ಸಂಗ್ರಹಿಸಿದರು. ಅದಕ್ಕಾಗಿಯೇಅವರು ಹೊಂದಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಯನ್ನೇ ತ್ಯಜಿಸಿದರು. ಅವರುತಮ್ಮ ಮನೆಯನ್ನು ಮಾರಿ ಹಿತಚಿಂತಕ ಎಂಬ ಮುದ್ರಣಾಲಯ ಸ್ಥಾಪಿಸಿದರು ಎಂದರು.
ಹಳಕಟ್ಟಿಯವರು 256 ವಚನಕಾರರ ವಚನಗಳನ್ನು ಪ್ರಕಟಿಸಿದರು. ಹರಿಹರನ ರಗಳೆ, ಶೂನ್ಯ ಸಂಪಾದನೆಯನ್ನು ಪ್ರಕಟಿಸಿದರು. ಅವರ ಮುದ್ರಣಾಲಯದಿಂದ 175 ಪುಸ್ತಕಗಳನ್ನು ಪ್ರಕಟಿಸಿದರು. ಗುಹೆಗಳಲ್ಲಿ, ದೇವರ ಮನೆಗಳಲ್ಲಿ ಕಳೆದು ಹೋಗಬೇಕಾಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು ಹಳಕಟ್ಟಿಯವರು ಎಂದು ಸ್ಮರಿಸಿದರು.
ವಚನ ಸಾಹಿತ್ಯ ರಚನೆ ಎಷ್ಟು ಮಹತ್ವದ್ದೋ, ಹಾಗೆಯೇ 900 ವರ್ಷಗಳ ನಂತರ ವಚನಗಳನ್ನು ಉಳಿಸಿ, ಅದನ್ನು ಜನಸಾಮಾನ್ಯರಿಗೆ ತಲುಪಿಸಿದ್ದೂ ಅμÉ್ಟೀ ಮಹತ್ವದ್ದು. ಒಟ್ಟು 160 ಕೋಟಿ ವಚನಗಳ ಪೈಕಿ 20 ಸಾವಿರ ವಚನಗಳು ಮಾತ್ರ ಉಳಿದಿವೆ. ಈ ವಚನಗಳ ಅಧ್ಯಯನವೇ ನಾವು ಫ.ಗು. ಹಳಕಟ್ಟಿಯವರಿಗೆ ಅವರಿಗೆ ಸಲ್ಲಿಸುವ ಗೌರವ ಎಂದು ವಿನಯ್ ಅಭಿಪ್ರಾಯಪಟ್ಟರು.
ಜೆ.ಎಸ್.ಎಸ್. ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಆರ್.ಎಂ. ಸ್ವಾಮಿ, ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಜಿ. ಸಿದ್ದರಾಜು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ವಿ. ಮಲ್ಲಿಕಾರ್ಜುನಸ್ವಾಮಿ, ಮುಖಂಡರಾದ ಮೂಡ್ಲುಪುರ ನಂದೀಶ್, ಸಿದ್ದಮಲ್ಲಪ್ಪ, ಉಪನ್ಯಾಸಕರಾದ ಅಂಬಿಕಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎನ್. ಗುರುಲಿಂಗಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಎ. ರಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.