ವಚನಗಳ ತಿರುಳನ್ನು ಅಳವಡಿಸಿಕೊಳ್ಳಲು ಕರೆ

ಸಂಜೆವಾಣಿ ವಾರ್ತೆ

ದಾವಣಗೆರೆ.; ಇತ್ತೀಚೆಗೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಎಂ ಎಂ ಶಿಕ್ಷಣ ಮಹಾವಿದ್ಯಾಲಯ, ಅನುಭವ ಮಂಟಪ ಇವರ ಸಂಯುಕ್ತ ಆಶ್ರಯದಲ್ಲಿ ದತ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಂಎಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಕೆ ಟಿ ನಾಗರಾಜ ನಾಯ್ಕ ರವರು ನೆರವೇರಿಸಿದರು. “ಶರಣರ ದೃಷ್ಟಿಯಲ್ಲಿ ಜೀವನ ಮೌಲ್ಯಗಳು” ಎಂಬ ವಿಷಯದ ಮೇಲೆ ಅನುಭಾವ ನೀಡಿದ ಸಿರಿಗೆರೆಯ ಎಂಬಿಆರ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ನಾ.ಲೋಕೇಶ್ ಒಡೆಯರ್  ಪ್ರಸ್ತುತ ದೇಶದಲ್ಲಿ ಧರ್ಮ ಕಲಹಗಳು ಹೆಚ್ಚಾಗಿವೆ. ಆದರೆ ಶರಣರು ಅಂದೇ ಜಾತಿ ಪದ್ಧತಿಯನ್ನು ವಿರೋಧಿಸಿದ್ದರು.ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶರಣರ ವಚನಗಳ ತಿರುಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ಕೊಟ್ಟರು. ಜಿಎಂ ಕುಮಾರಸ್ವಾಮಿ ಅವರು ದತ್ತಿದಾನಿಗಳ ಪರಿಚಯ ಮಾಡಿಕೊಟ್ಟರು. ದತ್ತಿದಾನಿಗಳಾದ ಎಂ ಈಶ್ವರ್ ಶರ್ಮ ಇವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆಬಿ ಪರಮೇಶ್ವರಪ್ಪ  ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಪ್ರಮೀಳಾ ನಟರಾಜ್, ಎಂ ಪರಮೇಶ್ವರಪ್ಪ ಸಿರಿಗೆರೆ, ಎಸ್ .ಬಿ.ರುದ್ರಗೌಡ ಗೋಪನಾಳ್  ಉಪಸ್ಥಿತರಿದ್ದರು. ಬಿ ಟಿ ಪ್ರಕಾಶರವರ ವಚನ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಡಾ. ಟಿ. ಹಾಲೇಶಪ್ಪನವರು ಸ್ವಾಗತಿಸಿದರೆ ಪ್ರಶಿಕ್ಷಣಾರ್ಥಿ ಅಂಜಲಿ ಜೆ  ಶರಣು ಸಮರ್ಪಣೆ ಮಾಡಿದರು. ಪ್ರಶಿಕ್ಷಣಾರ್ಥಿ ಸಂಗೀತ ಹುಳಗುಂಡಿ  ಕಾರ್ಯಕ್ರಮ ನಿರೂಪಿಸಿದರು.