
ವಿಜಯಪುರ:ಆ.8: ವಚನಗಳು ನಮ್ಮ ಜೀವನದ ದಾರಿದೀಪಗಳು.ಆ ದೀಪದ ಬೆಳಕಿನಲ್ಲಿ ಸಾಗುವಾಗ ನಮ್ಮ ಕ್ಷಣಗಳನ್ನು ಧನಾತ್ಮಕವಾಗಿ ಸಂತೃಪ್ತಭಾವದೊಂದಿಗೆ ರೂಪಿಸಿಕೊಂಡು,ಬದುಕನ್ನು ಸ್ಪೂರ್ತಿಯುವಾಗಿಸಿಕೊಳ್ಳಬೇಕು ಎಂದು ಸಮೂಹ ಸಂಪನ್ಮೂಲ ವ್ಯಕ್ತಿ,ಸಾಹಿತಿ ವಿರೇಶ ಮಾಶೆಟ್ಟಿ ಹೇಳಿದರು.
ಅವರು ರವಿವಾರ ಸಂಜೆ ನಗರದ ಕಲ್ಲಪ್ಪ ಮೇತ್ರಿ ಅವರ ಮನೆಯಲ್ಲಿ ಶ್ರೀ ಬನಶಂಕರಿ ತಾಯಿಯ ಪೂಜೆ ಮತ್ತು "ಮನೆಯಂಗಳದಲ್ಲಿ ವಚನ"ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು.
ದೇವರ ದಾಸಿಮಯ್ಯನವರ 'ಕಣ್ಣು ಮೀಸಲು ಶಿವನಿಗೆ,ಕೈ ಮೀಸಲು ಶಿವನಿಗೆ'-ಎಂಬ ವಚನವನ್ನು ವಿಶ್ಲೇಷಿಸುತ್ತಾ, ಆದ್ಯ ವಚನಕಾರ ದೇವರ ದಾಸಿಮಯ್ಯ ಹಾಗೂ ದುಗ್ಗಳೆ ಅವರ ಬದುಕು ಇಂದಿನ ಯಾಂತ್ರಿಕ ಜೀವನದಲ್ಲಿ ಅನ್ವಯಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ನಗರ ಸಂಘಟನಾ ಕಾರ್ಯದರ್ಶಿ ಕಲ್ಲಪ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ,ದಾಂಪತ್ಯಧರ್ಮ, ಸ್ತ್ರೀ-ಪುರುಷ ಸಮಾನತೆ, ಗುರುವಿನ ಶ್ರೇಷ್ಠತೆ, ಒಡಲ ಹಸಿವಿನ ತೀವ್ರತೆ, ದೇವನ ದಾನಗುಣ, ಮಾನವನ ಸ್ವಾರ್ಥ, ಸಮಾಜದ ವೈಪರೀತ್ಯಗಳ ವಿಡಂಬನೆ, ಸರ್ವಸಮಾನತೆಯ ಬಯಕೆಗಳನ್ನು ತಮ್ಮ ವಚನಗಳಲ್ಲಿ ದೇವರ ದಾಸಿಮಯ್ಯನವರು ವ್ಯಕ್ತಪಡಿಸಿದ್ದನ್ನು ನಾವು ಅರ್ಥೈಸಕ್ಕೊಳ್ಳಬೇಕು ಎಂದು ತಿಳಿಸಿದರು.
ದೇವಿಗೆ ಶ್ಲೋಕಗಳ ಶೃಂಗಾರ,ಭಕ್ತಿಮಯ ಗೀತೆಗಳ ಗಾಯನ ಶ್ರೀ ಶಾಖಾಂಬರಿ ಮಹಿಳಾ ಬಳಗದಿಂದ ಮೂಡಿ ಬಂತು.
ದೇವಾಂಗ ಸಮಾಜದ ನಗರ ಅಧ್ಯಕ್ಷ ಪ್ರಸಾದ ಬಸರಕೋಡ,ಪ್ರಮುಖರಾದ ಈಶ್ವರ ದಿನ್ನಿಮನಿ, ಬಸವರಾಜ ಮೇತ್ರಿ, ಶ್ರೀಕಾಂತ ಖ್ಯಾತಪ್ಪನವರ, ಪ್ರವೀಣ ಬಸರಕೋಡ,ಕೊಚ್ಚಿ,ವನಕಿ, ಆನಂದ ಹುಲಿಮನಿ,
ಸಂತೋಷಕುಮಾರ ಬಂಡೆ.ಬಸವರಾಜ ಹುಬ್ಬಳ್ಳಿ ಶಾಕಂಬರಿ ಮಹಿಳಾಸಂಘದ ದಿನ್ನಿಮನಿ, ಸಂಗೀತಾ ಹುಲಮನಿ,ಲಕ್ಷ್ಮಿ ಮೇತ್ರಿ,ಕಲಾವತಿ,ಶಕುಂತಲಾ ಹನುಮಸಾಗರ, ಶೃತಿ ಬಸರಕೋಡ, ಯಶೋದಾ ಬಸರಕೋಡ, ಸಿಂಚನಾ ವನಕಿ, ಗಾಯತ್ರೀ ವನಕಿ, ಆಶಾ ಬಂಕನ್ನವರ ಉಪಸ್ಥಿತರಿದ್ದರು.
ನಾರಾಯಣ ತಳಗಡೆ,ಶಿಕ್ಷಕ ಪ್ರವೀಣ ಬಸರಕೋಡ
ಕಾರ್ಯಕ್ರಮ ನಿರ್ವಹಿಸಿದರು.