ವಚನಗಳು ಆಧ್ಯಾತ್ಮದ ಹಾದಿಗೆ ದಾರಿದೀಪ

ವಿಜಯಪುರ.ಜ೩೧:ಶಿವ ಶರಣರ ವಚನಗಳು ಆಧ್ಯಾತ್ಮದ ಹಾದಿಯಲ್ಲಿ ಸಾಗುವವರಿಗೆ ದಾರಿದೀಪ ಕತ್ತಲೆಯ ಬದುಕಿನಲ್ಲಿ ಸಾಗುವವರ ಕಂದೀಲು ಎಂಬುದಾಗಿ ಬಾಗಲಕೋಟೆ ಜಿಲ್ಲೆಯ ಸಾರಂಗ ಮಠದ ಪೂಜ್ಯ ಶರಣೆ ಸುನಂದಮ್ಮರವರು ಅಭಿಪ್ರಾಯ ಪಟ್ಟರು.
ಅವರು ಪಟ್ಟಣದ ಅಕ್ಕನ ಬಳಗದ ಅರಿವಿನ ಮನೆಯಲ್ಲಿ ನಡೆದ ೧೦೪ ನೇ “ತಿಂಗಳ ಬೆಳಕು” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ, ಮಾತನಾಡುತ್ತಾ, ಬಸವಣ್ಣ ನವರಿಗಿಂತ ಮುಂಚೆ ಹನ್ನೊಂದನೇ ಶತಮಾನದಲ್ಲಿಯೆ ಜೇಡರದಾಸಿಮಯ್ಯ, ಮಿರಿಮಿಂಡಿದೇವ, ಚಂದ್ರಗುಂಡ ಶಿವಾಚಾರ್ಯರು, ತಮಿಳು ನಾಡಿನ ಅರವತ್ತು ಮೂರು ಪುರಾತನರು ಇವರೆಲ್ಲ ಶರಣರ ಸಾಲಿಗೆ ಸೇರುತ್ತಾರೆ.
ಹನ್ನೊಂದನೇ ಶತಮಾನದ ಹೊತ್ತಿಗೇನೆ ಮೊದಲ ಅನುಭವ ಮಂಟಪ ಪ್ರಾರಂಭ ವಾಗಿತ್ತು. ಜೇಡರ ದಾಸಿಮಯ್ಯ ನವರನ್ನು ಆದ್ಯ ವಚನಕಾರ ಎಂಬುದಾಗಿ ಗುರುತಿಸುವರು. ಪುರುಷರಿಗೂ ಸ್ತ್ರೀಯರಿಗೂ ಸಮಾನ ಸ್ಥಾನ ಕಲ್ಪಿಸಿ ಕೊಟ್ಟವರು ಶಿವ ಶರಣರು, ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು ಒಳಗೆ ಇರುವ ಆತ್ಮಕ್ಕೆ ಬೇಧ ಭಾವ ಇಲ್ಲ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು . ಆಧ್ಯಾತ್ಮದ ಹಾದಿಯಲ್ಲಿ ತಾರತಮ್ಯವಿಲ್ಲ,ಯಾರು ಬೇಕಾದರೂ ಸಾಗಬಹುದು ಎಂಬುದಾಗಿ ತೋರಿಸಿ ಕೊಟ್ಟವಳು ಕನ್ನಡದ ಮೊಟ್ಟ ಮೊದಲ ಕವಯಿತ್ರಿ ಅಕ್ಕ ಮಹಾದೇವಿ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತ, ನಮ್ಮ ಗುರುವರ್ಯ ರಾದ ಶ್ರೀ ಜ ಚ ನಿ ಮಹಾ ಸ್ವಾಮೀಜಿಯವರು ವಿಜಯಪುರದ ನಿಮ್ಮ ಈ ಸಂಸ್ಥೆಗೆ ಅಕ್ಕನ ಬಳಗ ಎಂಬುದಾಗಿ ಹೆಸರಿಸಿದ್ದರು ಎಂದು ನೆನಪು ಮಾಡಿಕೊಂಡರು.
ಆದ್ಯ ವಚನಕಾರ ಮಿರಿಮಿಂಡಿದೇವನ ವಚನದ ನಿರ್ವಚನವನ್ನು ವೀರೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾದ ವಿ ಅನಿಲ್ ಕುಮಾರ್ ನಡೆಸಿಕೊಡುತ್ತ,ಅವರು ವೃತ್ತಿಯಲ್ಲಿ ವ್ಯವಸಾಯಗಾರ ರಾದರೂ ಅವರ ಆಧ್ಯಾತ್ಮಿಕ ಸಾಧನೆ ಅಪಾರ ಎಂಬುದಾಗಿ ತಿಳಿಸಿದರು ,
ಸಂಚಾಲಕರಾದ ಮ.ಸುರೇಶ್ ಬಾಬು ಮಾತನಾಡುತ್ತ ಲಿಂ ಪುಟ್ಟಯ್ಯ ದಂಪತಿಗಳು ತಮ್ಮ ವಾಸದ ಮನೆಯನ್ನೆ ಓದಿ ಕೇಳುವ ಮನೆಯನ್ನಾಗಿಸಿ ಆಧ್ಯಾತ್ಮಿಕ ಕೇಂದ್ರವನ್ನಾಗಿಸಿದ ಮಹಾನುಭಾವರು . ಕೀರ್ತಿಶೇಷರಾದ ದೊಡ್ಡ ಅಪ್ಪಯ್ಯಣ್ಣ ದಂಪತಿ, ಸಿ ಎನ್ ಬಸವರಾಜು,ಸಿ ಎಂ ವೀರಣ್ಣ, ತಾಯಿ ಕಾಮಾಕ್ಷಮ್ಮ ಇನ್ನೂ ಹಲವು ಹಿರಿಯರ ಪರಿಶ್ರಮದಿಂದ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ಅರವತ್ತಮೂರು ವರ್ಷಗಳಿಂದ ನಡೆದು ಬರುತ್ತಿದೆ ರಜತ, ಸುವರ್ಣ ಮಹೋತ್ಸವ ಆಚರಿಸಿಕೊಂಡು ವಜ್ರ ಮಹೋತ್ಸವದತ್ತ ಮುನ್ನುಗ್ಗುತ್ತಿದೆ ಎಂಬುದಾಗಿ ಅಭಿಪ್ರಾಯ ಪಟ್ಟರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಷ್ಠಿ ಬಳಗದ ಉಪಾಧ್ಯಕ್ಷೆ ಅಂಭಾ ಭವಾನಿ ವಹಿಸಿದ್ದರು , ಪ್ರಾರ್ಥನೆ ಭಾರತಿ ವಿಶ್ವನಾಥ್,ನಿರೂಪಣೆ ವಿಮಲಾಂಬ ಅನಿಲ್ ಕುಮಾರ್, ಸ್ವಾಗತ ಮೀನಾ ಸುರೇಶ್ ಬಾಬು, ವಂದನಾರ್ಪಣೆ ಚಂದ್ರಕಲಾ ರುದ್ರಮೂರ್ತಿ, ನಡೆಸಿಕೊಟ್ಟರು.ಶ್ರೀ ಕೃಷ್ಣಪ್ಪ ದಾಸರು, ರೇಷ್ಮೆ ನಿವೃತ್ತ ನೌಕರರಾದ ಎಸ್ ಪಿ ಕೃಷ್ಣಾನಂದ, ಸುಮಂತ್, ಹಾಗೂ ಅಕ್ಕನ ಬಳಗದ ತಾಯಂದಿರು ಭಾಗವಹಿಸಿದ್ದರು