ವಚನಗಳಲ್ಲಿ ಪ್ರಸ್ತುತ ಎಲ್ಲರ ಸಮಸ್ಯೆಗಳಿಗೂ ಪರಿಹಾರ ಇದೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.29:- ಬಸವಾದಿ ಶರಣರು 12ನೇ ಶತಮಾನದಲ್ಲಿ ರಚನೆ ಮಾಡಿರುವ ವಚನಗಳಲ್ಲಿ ಪ್ರಸ್ತುತ ಎಲ್ಲರ ಸಮಸ್ಯೆಗಳಿಗೂ ಪರಿಹಾರ ಇದ್ದು, ಯುವ ಪೀಳಿಗೆ ವಚನಗಳನ್ನು ಆಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ತಿಳಿಸಿದರು.
ನಗರದ ಮರಿಯಾಲದಲ್ಲಿರುವ ಶ್ರೀ ಬಸವ ಮಹಾಮನೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಘಟಕದ ಸಹಯೋದಲ್ಲಿ ನಡೆದ ಶ್ರೀ ಇಮ್ಮಡಿ ಮಹಾಂತಸ್ವಾಮಿಗಳ ನೆನಪಿನ ದತ್ತಿ ಕಾರ್ಯಕ್ರಮವನ್ನು ಉದ್ಗಾಟಿಸಿ ಅವರು ಮಾತನಾಡಿದರು.
ಶರಣರ ವಿಚಾರಧಾರೆಗಳನ್ನು ನಾಡಿಗೆ ಪ್ರಚುರಪಡಿಸುವ ಉದ್ದೇಶದಿಂದ ಶ್ರೀ ರಾಜೇಂದ್ರಸ್ವಾಮಿಗಳಿಂದ ಸ್ಥಾಪಿತÀವಾಗಿರುವ ಶರಣ ಸಾಹಿತ್ಯ ಪರಿಷತ್ ವಚನಗಳ ಸಂರಕ್ಷಣೆ ಹಾಗೂ ಯುವ ಜನಾಂಗಕ್ಕೆ ವಚನಗಳ ಸಾರಗಳನ್ನು ತಿಳಿಸುವ ಜೊತೆಗೆ ಅದರ ಮೌಲ್ಯವನ್ನು ತಿಳಿಸಿ, ಶರಣ ವಿಚಾರಧಾರೆಗಳು ವಿಶ್ವ ವ್ಯಾಪಿಯಾಗುವಂತೆ ಮಾಡುತ್ತಿದೆ. ಈಗಿನ ಶ್ರೀಗಳಾದ ಸುತ್ತೂರು ದೇಶಿಕೇಂದ್ರಸ್ವಾಮೀಜಿಗಳು ಸಹ ಶರಣ ಸಾಹಿತ್ಯ ಪರಿಷತ್‍ನ ಕಾರ್ಯಯೋಜನೆಗಳು ಹಾಗೂ ರಾಜೇಂದ್ರ ಶ್ರೀಗಳ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಪರಿಷತ್ ಬಹಳ ಅಚ್ಚುಕಟ್ಟಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವಾಧಿ ಶರಣ ವಚನಗಳು ಅನುಭಾವದ ನುಡಿಗಳಾಗಿವೆ. ತಮ್ಮ ಅನುಭವ ಮತ್ತು ಸಮಾಜದಲ್ಲಿದ್ದ ಅಂಕುಡೋಕುಗಳನ್ನು ತಿದ್ದುವ ಸಲುವಾಗಿ ವಚನಗಳನ್ನು ರಚನೆ ಮಾಡಿ, ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ, ಇಂತ ಪುಣ್ಯದ ಕಾರ್ಯದಲ್ಲಿ ನಾವೆಲ್ಲರು ಭಾಗವಹಿದ್ದೇವೆ. ಯುವ ಸಮುದಾಯ ವಚನಗಳನ್ನು ಓದಿ ಅದನ್ನು ಪಾಲನೆ ಮಾಡಬೇಕು ಎಂದು ಮರಿಯಾಲ ಶ್ರೀಗಳು ತಿಳಿಸಿದರು.
ಉಪನ್ಯಾಸಕ ಆಶೋಕ ಇಮ್ಮಡಿ ಮಹಾಂತಸ್ವಾಮಿಗಳ ಜೀವನ ಚರಿತ್ರೆ ಹಾಗೂ ಅವರ ಸಾಧನೆ ಕುರಿತು ಮಾತನಾಡಿ, ಇಮ್ಮಡಿ ಮಹಾಂತಸ್ವಾಮಿಗಳು ಬಹಳ ಕಷ್ಟ ಕಾಲದಲ್ಲಿ ಶ್ರೀಮಠದ ಪೀಠಾಧಿಪತಿಗಳಾದವರು. ಅವರ ಪರಿಶ್ರಮದಿಂದ ಇಂದು ಮರಿಯಾಲ ಶ್ರೀ ಮುರುಘ ರಾಜೇಂದ್ರಸ್ವಾಮಿ ವಿದ್ಯಾಸಂಸ್ಥೆ ದೊಡ್ಡಾಗಿದೆ ಬೆಳೆದಿದೆ. ಬಸವಾದಿ ಶರಣರ ಹಾದಿಯಲ್ಲಿ ನಡೆದ ಮಹಾಂತಸ್ವಾಮಿಗಳು ನೇರ ನಡೆ ನುಡಿಯನ್ನು ಹೊಂದಿದ್ದರು. ಸದಾ ಕಾಲ ಬಡವ ಮಕ್ಕಳ ವಿದ್ಯಾಭ್ಯಾಸ ಹಾಗು ಹಸಿದು ಬಂದವರಿಗೆ ಅನ್ನ ದಾಸೋಹ ಮಾಡುವ ಮೂಲಕ ಕಾಯಕ ಯೋಗಿಯಾಗಿದ್ದರು ಎಂದು ಬಣ್ಣಿಸಿದರು.
ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಮ್ಮಡಿ ಮುರುಘರಾಜೇಂದ್ರಸ್ವಾಮಿಗಳು ಹಿರಿಯ ಶ್ರೀಗಳಾದ ಮಹಾಂತಸ್ವಾಮಿಗಳ ಹೆಸರಿನಲ್ಲಿ ದತ್ತಿ ಸ್ಥಾಪನೆ ಮಾಡಿ ಶರಣ ವಿಚಾರಧಾರೆಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಅವರ ಆಶಯ ಈಡೇರುವಂತಾಗಬೇಕು. ಶರಣರ ಕಲ್ಪನೆಗಳು ಸಕಾರಗೊಳ್ಳಲು ವಚನಗಳು ಹೆಚ್ಚು ಪ್ರಚುರವಾಗಬೇಕು ಎಂದರು.
ಮರಿಯಾಲ ಎಸ್‍ಎಂಎಸ್‍ಆರ್ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ಡಿ. ನಾಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ. ಇಂಥ ಮಹಾನ್ ಜ್ಞಾನಿಗಳು ಶರಣರ ಚಿಂತನೆಯಲ್ಲಿ ಎಲ್ಲರು ಮೈಗೂಡಿಸಿಕೊಂಡು ಮುನ್ನಡೆಯೋಣ ಎಂದರು.
ಕಾರ್ಯಕ್ರಮದಲ್ಲಿ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿಕುಮಾರ್, ತಾಲೂಕು ಘಟಕದ ಅಧ್ಯಕ್ಷ ಎಸ್. ಮಹದೇವಪ್ರಭು, ಶಿವಪ್ರಸಾದ್, ಬೇಡಗುಳಿ ಸುಂದರ್, ಆರ್.ಎಸ್. ಲಿಂಗರಾಜು, ಮೊದಲಾದವರು ಇದ್ದರು.