ವಚನಗಳಲ್ಲಿ ಜೀವನ ಮೌಲ್ಯ ಅಡಗಿದೆ : ಡಾ. ಬಸವಲಿಂಗ ಅವಧೂತರು

ಬೀದರ್: ಮೇ.12:ಬಸವಾದಿ ಶರಣರು ರಚಿಸಿದ ವಚನಗಳಲ್ಲಿ ಜೀವನ ಮೌಲ್ಯ ಅಡಗಿದೆ. ವಚನಗಳನ್ನು ಅರಿತು ಮುನ್ನಡೆದವನೆ ಜೀವನ ಮುಕ್ತಿ ಪಡೆಯುತ್ತಾನೆ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ, ದೇಗಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು.
ಬೀದರನ ಚಿದ್ರಿಯ ಶ್ರೀ ಬುತ್ತಿ ಬಸವಣ್ಣನ 24ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರ ಹುಟ್ಟಿದ ದಿನ ಇಂದು ವಚನ ಸಾಹಿತ್ಯದ ಮೂಲಕ ಸಾಮಾಜಿಕ ಸಮಸ್ಯೆಗಳ ಕುರಿತ್ತು ಜಾಗ್ರತಿ ಮೂಡಿಸಿದ ಮಹಾನ ಸಂತ ವಿಶ್ವಗುರು ಬಸವಣ್ಣ ಎಂದು ಹೇಳಿದರು.
ಬಸವಣ್ಣ ನವರು ನೊಂದವರ ಮತ್ತು ಜಾತಿ ವ್ಯವಸ್ಥೆ ವಿರುದ್ದ ಧ್ವನಿ ಎತ್ತಿದರು ಹೀಗಾಗಿ ಇವರೊಬ್ಬ ಕ್ರಾಂತಿ ಪುರುಷ ಎಂದು ಹೇಳಿದರು. ಎಲ್ಲರೂ ಬಸವಣ್ಣನವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ತಂದೆ-ತಾಯಿ ಬಹಳ ಕಷ್ಟ ಪಡುತ್ತಾರೆ. ಅವರ ಸಂತಸಕ್ಕಾಗಿ ಎಲ್ಲವನ್ನೂ ತ್ಯಾಗಮಾಡುತ್ತಾರೆ. ಹೀಗಾಗಿ ತಂದೆ-ತಾಯಿಯ ರೂಣ ಮಕ್ಕಳು ತೀರಿಸಬೇಕು ಎಂದು ಸಲಹೆ ನೀಡಿದರು.

ಚಿದ್ರಿ ಬುತ್ತಿ ಬಸವಣ್ಣನಿಗೆ ಭಕ್ತಿಯಿಂದ ಪೂಜಿಸಿದರೆ ಸಂಕಲ್ಪ ಸಿದ್ದಿಯಾಗುತ್ತೆ ಎಂದು ಹೇಳಿದರು. ಚಿದ್ರಿಯಲ್ಲಿ ಜಾತಿ ಬೇಧ ಮಾಡದೇ ಇಲ್ಲಿ ಎಲ್ಲರೂ ಸೌರ್ಹಾದತೆಯಿಂದ ಬಾಳಬೇಕು, ಗುರು ಹಿರಿಯರು ಹಾಕಿ ಕೊಟ್ಟ ಮಾರ್ಗದಲ್ಲಿ ಇಂದಿನ ಯುವ ಪೀಳಿಗೆ ಜೀವನ ಸಾಗಿಸಬೇಕು ಎಂದು ಹೇಳಿದರು.
ಪ್ರಮುಖರಾದ ಶ್ರೀ ಬುತ್ತಿ ಬಸವಣ್ಣ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಮೇಶ ಮಾಶೆಟ್ಟೆ, ಕಾರ್ಯದರ್ಶಿ ಸಂಗಶೆಟ್ಟಿ ಸಿದ್ದೇಶ್ವರ, ವೀರಶೇಟ್ಟಿ ಮಾಶೆಟ್ಟಿ, ವಿನೋದ ಪಾಟೀಲ್, ಬಸವರಾಜ ಮಸ್ತರ, ಕಲ್ಯಾಣರಾವ ಬಿರಾದರ, ರಾಜಕುಮಾರ ಬಿರಾದರ, ಸೋಮಶೇಖರ ಬಿರಾದರ, ಚಂದ್ರಕಾಂತ ಹುಮನಾಬಾದೆ, ಹಿರಿಯ ಪತ್ರಕರ್ತ ನಾಗಶೆಟ್ಟಿ ಧರಮಾಪೂರ, ಅಮೃತರಾವ ಬಿರಾದರ, ಜಗನ್ನಾಥ ಬಿರಾದರ, ನಾರಾಯಣ ರಡ್ಡಿ, ಸಂದೀಪ ರಡ್ಡಿ,
ಮೊದಲಾದವರು ಉಪಸ್ಥಿತರಿದ್ದರು. ಮೊದಲಿಗೆ ಬುತ್ತಿ ಬಸವಣ್ಣನಿಗೆ ಅವಧೂತರು ಪೂಜೆ ಸಲ್ಲಿಸಿದರು. ನಂತರ ಲಕ್ಷದೀಪೆÇತ್ಸವಕ್ಕೆ ಅವಧೂತರು ಚಾಲನೆ ನೀಡಿದರು.