
ವಿಜಯಪುರ:ಆ.30: ಯಾವುದೇ ಫಲಾಪೇಕ್ಷೆ ಇಲ್ಲದೇ ನಾವು ಮಾಡುವ ಪ್ರಾಮಾಣಿಕ ಸೇವೆಯನ್ನು ದೇವರು ಮೆಚ್ಚುವನು ನಾವು ದುಡಿದದ್ದರಲ್ಲಿ ಸ್ವಲ್ಪ ಭಾಗ ಸಮಾಜಕ್ಕೆ ವಿನಿಯೋಗಿಸಿದಾಗ ನಮ್ಮ ಬದುಕಿಗೆ ಅರ್ಥ ಬರುತ್ತದೆ. ಇದನ್ನೆ ಶರಣರು ಕಾಯಕವೇ ಕೈಲಾಸ ಎಂದು ಕರೆದರು ಎಂದ ಅಡಳಿತಾಧಿಕಾರಿ ಪ್ರೊ. ಆಯ್.ಎಸ್. ಕಾಳಪ್ಪನವರು ಹೇಳಿದರು.
ನಗರದ ಎಸ್ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ವಚನ ದಿನ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು ವಿದ್ಯಾರ್ಥಿ, ಯುವಜನರು ವಚನ ಸಾಹಿತ್ಯದ ಓದಿನತ್ತ ಒಲುವು ತೋರಬೇಕು. ಆ ಮೂಲಕ ಸಮಾಜದಲ್ಲಿನಮೌಲ್ಯಗಳನ್ನು ಬೆಳೆಸಿಕೊಂಡು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಬೇಕೆಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಿವಾನಂದ ಮಠಪತಿ ಮಾತನಾಡಿ ಸುತ್ತೂರಿನ ರಾಜೇಂದ್ರ ಮಹಾಸ್ವಾಮಿಜಿಗಳು ತಮ್ಮ ಜನ್ಮದಿನದಂದು ಸಮಾಜದ ಸ್ವಾಸ್ಥ್ಯಕ್ಕಾಗಿ ಶರಣ ಸಾಹಿತ್ಯ ಪರಿಷತ್ತಿನ ಸ್ಥಾಪಿಸಿದರು ದೂರ ದೃಷ್ಟಿಯುಳ್ಳವರಾಗಿದ್ದರು ಮಕ್ಕಳಿಗೆ ಮತ್ತು ಅನಾಥ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಒದಗಿಸುವಲ್ಲಿ ಶ್ರಮಿಸಿದವರು ಇವರು ತ್ರಿವಿಧ ದಾಸೋಹದ ಮೂಲಕ ಅಂದರೆ ಅನ್ನ,ಆಶ್ರಯ, ಶಿಕ್ಷಣ ಅಂದಿನ ಕಾಲದಲ್ಲಿ ಎಲ್ಲರಿಗೂ ಶಿಕ್ಷಣ ದೊರೆಯುವ ಹಾಗೆ ಮಾಡಿದ ಮಹಾನಸಂತರು ಎಂದು ಸ್ಮರಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಜ್ಞಾನಯೋಗ ಆಶ್ರಮದ ಅಧ್ಯಕ್ಷ ಗುರುಗಳಾದ ಪ.ಪೂಜ್ಯ ಬಸವಲಿಂಗ ಮಹಾ ಸ್ವಾಮೀಜಿಗಳು ಮಾತನಾಡಿ ಪ್ರಸ್ತುತ ಶರಣ ಸಾಹಿತ್ಯವು ಇಂದಿನ ಮಕ್ಕಳಿಗೆ ಅವಶ್ಯಕವಾಗಿದೆ ಇಂಥ ದತ್ತಿ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ನಡೆಸಿ ಮಕ್ಕಳಲ್ಲಿ ವಚನ ಸಾಹಿತ್ಯ ಆಸಕ್ತಿ ಮೂಡಿಸಬೇಕು ಅವರ ಬದುಕನ್ನು ಸುಂದರಗೊಳಿಸಬೇಕು ಶರಣರ ಜೀವನ ತೆರೆದ ಕನ್ನಡಿಯಂತೆ ಅವರ ಆದರ್ಶಗಳು, ಸರಳ ಜೀವನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಾವು ಸುಂದರ ವ್ಯಕ್ತಿಗಳಾಗಿ ರೂಪಗೊಳ್ಳುತ್ತೇವೆ ಎಂದು ಹೇಳಿದರು…
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರರಾದ ಡಾ.ಜಿ ಡಿ ಅಕಮಂಚಿ ಮಾತನಾಡಿಶರಣರ ವಚನಗಳು ಜನರ ಜೀವನಕ್ಕೆ ದಾರಿದೀಪವಾಗಿವೆ. ಹನ್ನೆರಡನೆಯ ಶತಮಾನದಲ್ಲಿ ಅಣ್ಣ ಬಸವಣ್ಣನವರು ಹಾಗೂ ಅವರ ಸಮಕಾಲೀನ ಶರಣರು ತಮ್ಮ ಅನುಭವಾಧಾರಿತ ಮತ್ತು ಸಮಾಜಕ್ಕೆ ಮಾರ್ಗದರ್ಶಿಯಾದ ವಚನಗಳನ್ನು ರಚಿಸುವ ಮೂಲಕ ಗಮನ ಸೆಳೆದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಂಬೂನಾಥ ಕಂಚ್ಯಾಣಿ ಮಾತನಾಡಿ ದತ್ತಿ ದಾಸೋಹಿಗಳನ್ನು ಪರಿಚಯಿಸಿದರು ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು . ದಾಸೋಹಿಗಳಾದ ವಿಜಯಕುಮಾರ್ ಹಲಕೂಡೆ ವೇದಿಕೆ ಮೇಲೆ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ರೇಖಾ ಕುಳಲಿ ನಿರೂಪಿಸಿದರು ಅಮರೇಶ ಸಾಲಕ್ಕಿ ಸ್ವಾಗತಿಸಿದರು ಆಕಾಶ್ ರಾಮತೀರ್ಥ ವಂದಿಸಿದರು ಕಾರ್ಯಕ್ರಮದಲ್ಲಿ ಮ ಗು ಯಾದವಾಡ, ಬಿ ಎಚ್ ಬಾದರಬಂಡಿ, ಎಸ್ ವೈ ಗದಗ, ಪರಶುರಾಮ್ ಪೆÇೀಳ, ಎಸ್ ಎಂ ನಾಯ್ಕೋಡಿ, ವೈಶಾಲಿ ಪಾಟೀಲ,ಜೆ ಎ ಬಿರಾದರ,ಜೆ ಎಮ್ ಬಿರಾದಾರ, ವಿಕಾಸ ಕಲಬಳಗಿ ಮತ್ತು ಸಮಸ್ತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.