ವಚನಕಾರರಲ್ಲಿ ಗುರುತಿಸಿಕೊಂಡವಳು ಶಿವಶರಣೆ ಅಕ್ಕನಾಗಮ್ಮ

ಧಾರವಾಡ,ಮೇ21: ಅಕ್ಕನಾಗಮ್ಮಕಲ್ಯಾಣಕ್ರಾಂತಿಯಗಂಗೋತ್ರಿಯಾಗಿ, ಬಸವಣ್ಣನವರಿಗೆ ಪ್ರೇರಕ ಶಕ್ತಿಯಾಗಿ, ನೆರಳಾಗಿ ಇದ್ದವಳು ಎಂದುಧಾರವಾಡ ಮೃತ್ಯುಂಜಯಕಾಲೇಜಿನಕನ್ನಡ ವಿಭಾಗದ ಮುಖ್ಯಸ್ಥೆಡಾ. ವೀಣಾ ಹೂಗಾರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಶತಾಯುಷಿ ದಿ. ಸಂಗಮ್ಮಇಮ್ರಾಪೂರ ಸಂಸ್ಮರಣದದತ್ತಿಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ‘ಶಿವಶರಣೆ ಅಕ್ಕನಾಗಮ್ಮ’ ವಿಷಯಕುರಿತು ಮಾತನಾಡುತ್ತಿದ್ದರು.
ಬಸವಣ್ಣನವರಿಗಿಂತ 12 ವರ್ಷ ಹಿರಿಯಳಾದ ಅಕ್ಕನಾಗಮ್ಮ ಬಸವಣ್ಣನನ್ನಗುರುವಾಗಿ ಸ್ವೀಕರಿಸಿದವಳು ಸಂಸಾರದಿಂದ ವಿಮುಕ್ತನಾದ ಶಿವದೇವನನ್ನ ಕಳೆದುಕೊಂಡ ನಂತರ ವಚನ ರಚನೆಯಲ್ಲಿತೊಡಗಿ ವಚನಕಾರರಲ್ಲಿ ಗುರುತಿಸಿಕೊಂಡವಳು. ಅಕ್ಕನಾಗಮ್ಮನಿಗೆ ಬಸವಣ್ಣನನ್ನಕಂಡರೆ ಬಹಳ ಅಭಿಮಾನ.ಅನುಭವ ಮಂಟಪದ ಮೂಲಕ ಬಸವಣ್ಣನವರು ಮಾಡಿದ ಸಿದ್ಧಿ, ಸಾಧನೆಗಳನ್ನ ಕುರಿತುಅಪಾರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದವಳು ಅಕ್ಕನಾಗಮ್ಮ.ಬಸವಣ್ಣ ಪ್ರಿಯಚನ್ನಸಂಗಯ್ಯಎನ್ನುವುದು ಅವಳ ವಚನಗಳ ಅಂಕಿತ.ಇದರಲ್ಲಿ ಬಸವಣ್ಣನವರಿದ್ದಾರೆ.ಜೊತೆಗೆ ಮಗ ಚನ್ನಸಂಗಯ್ಯನಿದ್ದಾನೆ. ಇಬ್ಬರನ್ನುಇಟ್ಟುಕೊಂಡಅಂಕಿತದ ಮೂಲಕವೇ ಅಕ್ಕನಾಗಮ್ಮ ವಚನಗಳನ್ನು ರಚಿಸಿದ್ದಾರೆ.
ಅಕ್ಕನಾಗಮ್ಮಜನಕ್ಕಂಜಿ ನಡೆಯುವುದಕ್ಕಿಂತ ಮನಕ್ಕಂಜಿ ನಡೆದವಳು.ಸಮಾಜದಲ್ಲಿ ಸಮಾನತೆಯನ್ನು ಬಯಸಿದವಳು.ಕಾಯಕ ಮತ್ತುದಾಸೋಹದ ತತ್ವಗಳಿಗೆ ಪ್ರಾಧಾನ್ಯತೆಯನ್ನ ಕೊಟ್ಟಿದ್ದಳು.ಕಾದ್ರೋಳಿ ಯುದ್ಧದ ನಂತರ ಹುಬ್ಬಳ್ಳಿ ಧಾರವಾಡ ಮಾರ್ಗವಾಗಿ ಉಳವಿಗೆ ಹೋಗುವ ಸಂದರ್ಭದಲ್ಲಿ ನಾಗಲಾಪುರದಲ್ಲಿ ವಾಸವಾಗಿದ್ದಳು.ಇವತ್ತಿಗೂಕೂಡ ನಾಗಲಾಪುರದಲ್ಲಿ ನಾಗಮ್ಮನದೇವಸ್ಥಾನಇರುವುದುಕಾಣುತ್ತೇವೆ. ಶರಣರೆಲ್ಲಾ ನಿಶ್ಚಿತ ಕಾರ್ಯ ಸಾಧನೆಗಾಗಿಯೇ ಭೂಲೋಕಕ್ಕೆ ಬಂದವರಾಗಿದ್ದರುಎಂದಅವರು ಹಲವಾರು ವಚನಗಳ ಮೂಲಕ ವಿಶ್ಲೇಷಣೆ ಮಾಡಿದರು.
ಧಾರವಾಡ ಕ.ವಿ.ವಿ. ಜಾನಪದ ವಿಭಾಗದ ಮುಖ್ಯಸ್ಥರು ಹಾಗೂ ವಿಶ್ರಾಂತ ಪ್ರಾಧ್ಯಾಪಕಿಡಾ. ಶಾಲಿನಿ ರಘುನಾಥಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣರಲ್ಲಿ ಸಮಾನತೆಯನ್ನುತರುವಲ್ಲಿರಾಜಸತ್ತೆಗಿಂತ ಪ್ರಜಾಸತ್ತೆಅಗತ್ಯವಾಗಿದೆಎಂದು ಹೇಳಿದವರು ಶರಣರು.
ದತ್ತಿದಾನಿಗಳ ಪರವಾಗಿಡಾ. ಸೋಮಶೇಖರಇಮ್ರಾಪೂರತಾಯಿಯ ಮಹತ್ವ ಮತ್ತು ವ್ಯಕ್ತಿತ್ವವನ್ನುಕುರಿತು ಮಾತನಾಡಿದರು.ವಿಶ್ರಾಂತ ಪ್ರಾಧ್ಯಾಪಕಿಡಾ. ವೀಣಾ ಸಂಕನಗೌಡರ ವಚನ ಗಾಯನ ಮಾಡಿದರು.
ಡಾ. ಶಾಂತಾಇಮ್ರಾಪೂರ ವೇದಿಕೆ ಮೇಲಿದ್ದರು.ಶಂಕರ ಕುಂಬಿ ಸ್ವಾಗತಿಸಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಶ್ರೀಶೈಲ ಹುದ್ದಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಶಂಕರ ಹಲಗತ್ತಿ, ಡಾ.ಶೈಲಜಾಅಮರಶೆಟ್ಟಿ, ವೀರಣ್ಣಒಡ್ಡೀನ, ವಿಶ್ವೇಶ್ವರಿ ಬ. ಹಿರೇಮಠ, ಡಿ.ಎಂ.ಹಿರೇಮಠ, ಬಸಯ್ಯ ಶಿರೋಳ, ಡಾ.ನಿಜಲಿಂಗಪ್ಪ ಮಟ್ಟಿಹಾಳ, ಡಾ.ಅನ್ಬನ್, ಎಸ್,ಕೆ. ಕುಂದರಗಿ, ಚನಬಸಪ್ಪಅವರಾಧಿ ಸೇರಿದಂತೆಅನೇಕರು ಭಾಗವಹಿಸಿದ್ದರು.