ವಕ್ಫ್ ಆಸ್ಪತ್ರೆಯಲ್ಲಿ ಕಡಿಮೆ ಖರ್ಚು, ಉತ್ತಮ ಆರೋಗ್ಯ ಸೇವೆ

ರಾಯಚೂರು.ಮಾ.೨೩- ಜನ ಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಮತ್ತು ಕಡಿಮೆ ಖರ್ಚು ಸೌಕರ್ಯಕ್ಕಾಗಿ ಈ ಆಸ್ಪತ್ರೆ ಲಾಭ ಪಡೆಯುವಂತೆ ದೊರೆಯಲಿ ಎನ್ನುವ ಉದ್ದೇಶದಿಂದ ರಾಜ್ಯ ಗ್ರಾಮೀಣ ಕುಡಿಯುವ ನೀರು ಇಲಾಖೆ ಮುಖ್ಯ ಇಂಜಿನಿಯರಾದ ಏಜಾಜ್ ಅಹಮದ್ ಅವರು ಹೇಳಿದರು.
ಅವರು ಮಾ.೨೧ ರಂದು ರಾಯಚೂರು ನಗರದಲ್ಲಿ ವಕ್ಫ್ ಮಲ್ಟಿ ಸ್ಪೆಷಾಲಿಸ್ಟ್ ಹೆರಿಗೆ ಮತ್ತು ಮಕ್ಕಳ ಚಾರಿಟೇಬಲ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯ ಜನರಿಗೆ ಆರೋಗ್ಯದ ಸೇವೆ ಸಿಗಬೇಕೆನ್ನುವ ಮಹದಾಸೆಯಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಆರೋಗ್ಯ ಸೇವೆಸಿಗುವ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯನ್ನು ಸಾರ್ವಜನಿಕರು ಸಹಯೋಗದೊಂದಿಗೆ ಮಾಡಲಾಗಿದೆ. ಇಲ್ಲಿ ಮಹಿಳೆಯರ ಪ್ರಸೂತಿ ಮತ್ತು ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಲಾಗುತ್ತದೆ. ನಾವು ಇಂದು ನಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಂದರ್ಭದಲ್ಲಿ ಇಂತಹ ಆಸ್ಪತ್ರೆಗಳು ಜನಸಾಮಾನ್ಯರಿಗೆ ಸೌಲಭ್ಯ ಸಿಗುತ್ತಿರುವುದು ನಿಜವಾಗಲೂ ಸಂತೋಷದ ವಿಷಯ ಎಂದು ತಿಳಿಸಿದರು.
ಮತ್ತೋರ್ವ ಅತಿಥಿಗಳಾದ ಡಾ.ಮುಜಾವುದ್ದಿನ ಖಾನ್ ಅವರು ಮಾತನಾಡಿ ಇವತ್ತು ಸಾರ್ವಜನಿಕರಿಗೆ ಆಸ್ಪತ್ರೆಯ ಸೇವೆಯ ಸಿಗೋದು ಬಹಳ ಅವಶ್ಯಕತೆವಾಗಿದ್ದು. ಇಂತಹ ಸಂದರ್ಭದಲ್ಲಿ ಈ ಭಾಗದಲ್ಲಿ ಇಂತಹ ಉತ್ತಮ ಸೌಲಭ್ಯಗಳಿರುವ ಆಸ್ಪತ್ರೆ ಉದ್ಘಾಟನೆಯಾಗಿ ಜನರ ಸೇವೆಗೆ ಅಣಿಯಾಗಿರುವುದು ಸಂತೋಷ ಎಂದು ತಿಳಿಸಿದರು. ಮುಖ್ಯವಾಗಿ ಆಸ್ಪತ್ರೆಯನ್ನು ಪುನರ್ ನಿರ್ಮಾಣಕ್ಕೆ ಮುಖ್ಯ ಕಾರಣಿಭೂತರಾದ ಮೊಮ್ಮದ್ ಯೂಸುಫ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಕ್ಫ್ ಬೋರ್ಡ್ ಬೆಂಗಳೂರು ಇವರು ಮಾತನಾಡುತ್ತಾ ಈ ಆಸ್ಪತ್ರೆಯನ್ನು ಪುನಃ ಉತ್ತಮ ವ್ಯವಸ್ಥೆಯಲ್ಲಿ ಹೆಚ್ಚು ಸೌಲಭ್ಯಗಳನ್ನು ಒಳಗೊಂಡು ಪ್ರಾರಂಭಿಸುವುದಕ್ಕೆ ರಾಯಚೂರು ನಗರದ ನಾಗರಿಕರು ಹಾಗೂ ವಿಧಾನಸಭಾ/ವಿಧಾನ ಪರಿಷತ್ತಿನ ಸದಸ್ಯರುಗಳು, ಹಟ್ಟಿ ಚಿನ್ನದ ಗಣಿ, ಕೆಕೆಆರ್‌ಡಿಬಿ ಹಾಗೂ ಸಮಾಜದ ಸುಮಾರು ಜನರ ವೈಯಕ್ತಿಕ ದೇಣಿಗೆ ಕೊಡುವ ಮೂಲಕ ಈ ಆಸ್ಪತ್ರೆಯನ್ನು ಪ್ರಾರಂಭಿಸಿ ಜನರ ಸೇವೆಗೆ ಅನುವು ಮಾಡಿಕೊಟ್ಟಂತಹ ಎಲ್ಲರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ವಿಶೇಷವಾಗಿ : ಪ್ರಸೂತಿ ಮತ್ತು ಮಕ್ಕಳ ಆರೋಗ್ಯ ಇದರ ಜೊತೆಯಲ್ಲಿ ವಿವಿಧ ಆರೋಗ್ಯ ಸೌಲಭ್ಯ ಗಳು ಈ ಆಸ್ಪತ್ರೆಯಲ್ಲಿ ದೊರೆಯಲಿದ್ದು ಈ ಆಸ್ಪತ್ರೆಯ ನಿರ್ವಹಣೆಯನ್ನು ಮಿಲ್ಲತ್ ಟ್ರಸ್ಟ್ ನಿಂದ ಮಾಡಲಾಗುವುದು. ಇದರ ಹೆಚ್ಚು ಉಪಯೋಗಳನ್ನು ಎಲ್ಲಾ ಜನರು ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮುಜಿಬುದ್ದಿನ ಜಾಫ್ರಿ ವಿಶೇಷ ಸರ್ವೆ ಅಧಿಕಾರಿಗಳು, ಸೈಯದ್ ರಿಜಾವುದ್ದೀನ್ ವ್ಯವಸ್ಥಾಪಕರು ವಕ್ಫ್ ಮಂಡಳಿ, ಡಾ.ಕಲಿಂ ಸಿದ್ದಿಕಿ, ಸೈಯದ್ ಉಮರ್ ಅಹ್ಮದ್ ಜಿಲ್ಲಾ ವಕ್ಫ್ ಅಧಿಕಾರಿಗಳು, ಸೇರಿದಂತೆ ನಗರದ ಗಣ್ಯರು ಹಾಗೂ ರಾಯಚೂರಿನ ನಾಗರಿಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.ವಕ್ಫ್ ಆಸ್ಪತ್ರೆಯಲ್ಲಿ ಕಡಿಮೆ ಖರ್ಚು, ಉತ್ತಮ ಆರೋಗ್ಯ ಸೇವೆವಕ್ಫ್ ಆಸ್ಪತ್ರೆಯಲ್ಲಿ ಕಡಿಮೆ ಖರ್ಚು, ಉತ್ತಮ ಆರೋಗ್ಯ ಸೇವೆ