ವಕೀಲ ವೃತ್ತಿ ಪವಿತ್ರವಾಗಿದೆ: ಎಂ ಎನ್ ಪಾಟೀಲ

ಕಲಬುರಗಿ:ಎ.22:ವಕೀಲ ವೃತ್ತಿ ಸಾಮಾಜಿಕ ಕಾಳಜಿ ಹೊಂದುವುದರೊಂದಿಗೆ ಕಷ್ಟದಲ್ಲಿರುವವರ ಕಣ್ಣೊರೆಸುವ ಪವಿತ್ರ ಕಾಯಕವಾಗಿದೆ ಎಂದು ಗುಲ್ಬರ್ಗ ಜಿಲ್ಲಾ ನ್ಯಾಯವದಿಗಳ ಸಂಘದ ಮಾಜಿ ಅಧ್ಯಕ್ಷರಾದ ಎಂ ಎನ್ ಪಾಟೀಲ ಹೇಳಿದರು.
ನಗರದ ನಂದಿ ಕಂಪ್ಯೂಟರ್ ತರಬೇತಿ ಕೇಂದ್ರದ ಆವರಣದಲ್ಲಿ ಶನಿವಾರ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ ಗುಲಬರ್ಗಾ ಜಿಲ್ಲಾ ನ್ಯಾಯವಾದಿಗಳ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ವಕೀಲರಿಗೆ ಸಮಾಜದಲ್ಲಿ ಅತ್ಯಂತ ಗೌರವವಿದೆ ತಮ್ಮ ವೃತ್ತಿಯೊಂದಿಗೆ ಸಮಾಜ ಸೇವೆಗೈದು ಉತ್ತಮ ಸಮಾಜ ಕಟ್ಟಿ ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡಲು ಸಹಕರಿಸಬೇಕೆಂದರು.ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀನಿವಾಸ ಸರಡಗಿ ಪೂಜ್ಯರಾದ ಡಾ. ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ ಅಧಿಕಾರ ಶಾಶ್ವತವಲ್ಲ ತಾವು ಮಾಡುವ ಒಳ್ಳೆಯ ಕಾರ್ಯ ಶಾಶ್ವತವಾಗಿರುತ್ತದೆ. ವಕೀಲರು ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂದಾಳತ್ವ ವಹಿಸಿ ಸ್ವತಂತ್ರ ಪಡೆದುಕೊಳ್ಳಲು ಅನೇಕ ಜನ ವಕೀಲರು ಪ್ರಮುಖ ಪಾತ್ರ ವಹಿಸಿದ್ದಾರೆ. ನ್ಯಾಯವಾದಿಗಳು ಸಮಾಜ ಕಟ್ಟಲು ಮುಂದಾಳತ್ವ ವಹಿಸಿಕೊಂಡು ಉತ್ತಮ ಸೇವೆ ಮಾಡಲೆಂದರು. ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಪ್ರಸ್ತಾವಿಕವಾಗಿ ಮಾತನಾಡುತ್ತಾ ಸನ್ಮಾನಗಳು ಸಮಾಜ ಸೇವೆ ಮಾಡಲು ಹಾಗೂ ತಮ್ಮ ವೃತ್ತಿ ಪಾವಿತ್ರ್ಯತೆ ಹೆಚ್ಚಿಸಲು ಕಾರಣವಾಗುತ್ತದೆ. ನ್ಯಾಯವಾದಿ ಸಂಘವು ನ್ಯಾಯಾಲಯದ ಒಳಗಿನ ಕಾರ್ಯಗಳೊಂದಿಗೆ ಈ ಭಾಗದ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಲೆಂದು ವಿನಂತಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ, ಗುಲಬರ್ಗಾ ಜಿಲ್ಲಾ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷರಾದ ವಿದ್ಯಾರಾಣಿ ಭಟ್, ಕಲ್ಯಾಣ ಕರ್ನಾಟಕ ನ್ಯಾಯವಾದಿಗಳ ಸೌಹಾರ್ದ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಅಂಬಾರಾಯ ಪಟ್ಟಣಕರ, ನ್ಯಾಯವಾದಿ ಹಣಮಂತ ಬಾವಿಕಟ್ಟಿ, ಆಗಮಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಕಾಶಿನಾಥ ಮೋತಕಪಳ್ಳಿ ವಹಿಸಿದರು. . ಗುಲಬರ್ಗಾ ಜಿಲ್ಲಾ ನ್ಯಾಯವಾದಿಗಳ ಸಂಘದ ನೂತನ ಪದಾಧಿಕಾರಿಗಳಾದ ಅಧ್ಯಕ್ಷರಾದ ಗುಪ್ತಲಿಂಗ ಬಿರಾದಾರ, ಉಪಾಧ್ಯಕ್ಷರಾದ ಧರ್ಮಣ್ಣ ಜೈನಾಪುರ, ಜಯಶೀಲ ಬಧೋಲೆ, ಸಹ ಕಾರ್ಯದರ್ಶಿಯಾಗಿ ಎಸ್ ಕೆ ಚಿಕ್ಕಳ್ಳಿ, ಖಜಾಂಚಿಯಾಗಿ ಶಿವರಾಜ ಪಾಟೀಲ ಅವರಿಗೆ ವಿಶೇಷವಾಗಿ ಸಂಘದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಲಕಾರಿ ಪೂಜಾರಿ, ಶಿವರುದ್ರ ಕರಿಕಲ, ಸಾಯಬಣ್ಣ ಬೆಳಮ್, ಶ್ರವಣಕುಮಾರ ಮಠ, ರಘುನಂದನ ಕುಲಕರ್ಣಿ, ರಾಜು ಹೆಬ್ಬಾಳ, ಪ್ರಾಣೇಶ್ ಜೋಶಿ, ಪೀರಪ್ಪ ಜಮಾದರ, ಭೀಮರಾವ ಹುಂಪಳಿ, ಪ್ರಭು ಬೇನೂರ, ಶಿವಯ್ಯ ಹಿರೇಮಠ, ನಾಗಣ್ಣ ಬಾದನಾಳ, ಗಣಪತರಾವ ಅಂಕಲಗಿ, ರಾಜು ಕೊರಳ್ಳಿ, ರಮೇಶ ಕೋರಿಶೆಟ್ಟಿ, ಬಸವರಾಜ ಜೋಗುರ, ಭರತ ಮಠ, ರಕ್ಷಿತಾ ಹೆಬ್ಬಾಳ, ನಾಗೇಂದ್ರಯ್ಯ ಮಠ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.